Blog Archive

ಕಟೀಲು ಶ್ರೀನಿಧಿ ಅಸ್ರಣ್ಣ ಮತ್ತು ಇನ್ನೋರ್ವ ರಸ್ತೆ ಅಪಘಾತದಲ್ಲಿ ಸಾವು..!

Wednesday, July 25th, 2018
srinidi-asranna

ಮಂಗಳೂರು: ಮಂಗಳವಾರ ತಡರಾತ್ರಿ ತುಮಕೂರು ರಸ್ತೆಯ ನೆಲಮಂಗಲದ ತಾವರೆಕೆರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರು ಶ್ರೀನಿಧಿ ಅಸ್ರಣ್ಣ(21) ಮತ್ತು ಪ್ರಜ್ವಲ್‌(20)ಎನ್ನುವವರಾಗಿದ್ದಾರೆ. ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಇವರು ಇನ್ನಿಬ್ಬರು ಸ್ನೇಹಿತರೊಂದಿಗೆ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ನಿಟ್ಟೆಯಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವ ಪ್ರತಿಭಾವಂತ ಹುಡುಗ ಶ್ರೀನಿಧಿ. ಯಕ್ಷಗಾನ ಕಲೆಯೂ ಸಿದ್ಧಿಸಿತ್ತು. ಚೆಂಡೆ ಬಾರಿಸುವುದರಲ್ಲಿ ಮೇಳದ ಕಲಾವಿದರಿಗೆ […]

ಕಟೀಲು ದುರ್ಗಾಪರಮೇಶ್ವರಿಯ ಯಕ್ಷಗಾನ ಕಲಾವಿದರಿಗೆ ಈ ಬಾರಿಯೂ ಬಾಗಿಲು ಬಂದ್!

Wednesday, June 27th, 2018
kateelu

ಮಂಗಳೂರು: ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಿಂದ ಕಳೆದ ಬಾರಿ ಕೈಬಿಡಲಾದ ಏಳು ಮಂದಿಗೆ ಈ ಬಾರಿಯೂ ಅವಕಾಶ ಸಿಕ್ಕಿಲ್ಲ. ಕಟೀಲು ದೇವಸ್ಥಾನದಲ್ಲಿ ಆರು ಮೇಳಗಳಿದ್ದು, ಇದರಲ್ಲಿ ಐದನೇ ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಒಂದನೇ ಮೇಳಕ್ಕೆ ವರ್ಗಾಯಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಐದನೇ ಮೇಳದ ಕಲಾವಿದರು ಮೇಳಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಏಳು ಕಲಾವಿದರನ್ನು ಹೊರತುಪಡಿಸಿ ಇತರ ಕಲಾವಿದರನ್ನು ಮೇಳಕ್ಕೆ ಸೇರಿಸಲಾಗಿತ್ತು. ಆದರೆ ಏಳು ಮಂದಿ ಕಲಾವಿದರನ್ನು ಮೇಳಕ್ಕೆ ಸೇರಿಸಿಕೊಂಡಿರಲಿಲ್ಲ. […]

ಕಟೀಲು ಸಿತ್ಲದಲ್ಲಿ ಯಕ್ಷಗಾನ ಕಲಾವಿದರಿಗೆ ಸಮ್ಮಾನ

Friday, April 27th, 2018
yakshagana

ಕಟೀಲು : ಯಕ್ಷಗಾನ ನಶಿಸಿಹೋಗುವ ಕಲೆಯಲ್ಲ ಅದು ಶಿಷ್ಟ ಪರಂಪರೆಯ ಕಲೆ, ಈ ಕಲೆಯ ಮೂಲಕ ವಾಗಿ ಜನರಲ್ಲಿ ಧಾರ್ಮಿಕತೆ, ಪುರಾಣ ಜ್ಞಾನ, ಸನ್ನಡೆತೆ, ಸನ್ಮಾರ್ಗದಲ್ಲಿ ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದು ಕಟೀಲು ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು. ಎ. 25 ರಂದು ಕಟೀಲು ಸಿತ್ಲ ಬೈಲಿನಲ್ಲಿ ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಿತಿ ಮುಂಬಯಿ ಹಾಗೂ ದುಬೈ ಇದರ ಆಶ್ರಯದಲ್ಲಿ ಶ್ರೀಧರ್ಮಸ್ಥಳ ಮಂಜುನಾಥ ಕೃಪಾಪೋಷಿತ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಧಾರ್ಮಿಕ […]

ಕಟೀಲು ದುರ್ಗಾಪರಮೇಶ್ವರಿ ದೇವಿ ಹಾಗೂ ದೇವಸ್ಥಾನದ ಬಗ್ಗೆ ಅವಹೇಳನ: ಶಿಸ್ತು ಕ್ರಮಕ್ಕೆ ಮನವಿ

Wednesday, August 31st, 2016
Hindu-Organizations

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಿ ಹಾಗೂ ದೇವಸ್ಥಾನದ ಬಗ್ಗೆ ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಜಬ್ಬಾರ್ ಬಿ.ಸಿ.ರೋಡ್ ಎಂಬಾತನ ಬಗ್ಗೆ ಶಿಸ್ತು ಕ್ರಮಕೈಗೊಳ್ಳುವಂತೆ ದೇವಸ್ಥಾನದ ಭಕ್ತರು ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದಾರೆ. ಜಬ್ಬಾರ್ ತನ್ನ ಫೇಸ್‍ಬುಕ್‍ನಲ್ಲಿ ದೇವ, ದೇವತೆಗಳನ್ನು ಅವಮಾನಿಸಿ ಹಾಕಿದ ಪೋಸ್ಟ್‌‌‌ನಿಂದಾಗಿ ಅವರ ಭಕ್ತರಿಗೆ ಅತೀವ ನೋವಾಗಿದೆ. ಇದು ಕರಾವಳಿ ಜಿಲ್ಲೆಯ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕರಾವಳಿ ಸಾಂಸ್ಕೃತಿಕ ಪರಿಷತ್‍ನ ಸಂಚಾಲಕರಾದ ಸತೀಶ್ ಕುಂಪಲ ಹಾಗೂ ಇತರ ಸದಸ್ಯರು […]

ಮನೆ ಕೆಲಸದ ಯುವತಿಯನ್ನು ಗರ್ಭವತಿ ಮಾಡಿದ ಯಜಮಾನ

Saturday, February 6th, 2016
Harishchandra bhut

ಮಂಗಳೂರು: 19 ವರ್ಷದ ಯುವತಿಯನ್ನು 56 ವರ್ಷದ ವ್ಯಕ್ತಿಯೋರ್ವ ಬೆದರಿಸಿ ಅತ್ಯಾಚಾರ ಎಸಗಿದ ಘಟನೆ ಬಜ್ಪೆ ಸಮೀಪದ ಕಟೀಲಿನಲ್ಲಿ ನಡೆದಿದ್ದು, ಪರಿಣಾಮ ಆಕೆ ಗರ್ಭವತಿಯಾಗಿರುವ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಆರೋಪಿಯನ್ನು ಕಟೀಲು ದೇವಸ್ಥಾನದ ಸಿಬ್ಬಂದಿ ಹರಿಶ್ಚಂದ್ರರಾವ್ ಯಾನೆ ಅಪ್ಪುಭಟ್ ಎಂದು ಗುರುತಿಸಲಾಗಿದೆ. ಈತನ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಮನೆ ಸಮೀಪದ ಯುವತಿಯನ್ನು ಬೆದರಿಸಿ ಆ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈಗ ಈ ಯುವತಿ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಈತನ ಕೃತ್ಯದಿಂದ […]

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಂಕಿಯೊಂದಿಗೆ ಆಟ (ತೂಟೆದಾರ ಸೇವೆ)

Wednesday, April 22nd, 2015
kateelu tutedara

ಕಟೀಲು : ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಕೊನೆಯದಿನ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯುತ್ತದೆ. ತೂಟೆ ಎಂದರೆ ತೆಂಗಿನ ಗರಿಗಳಿಂದ ಮಾಡಿದ ಕಟ್ಟು. ಅದನ್ನು ಉರಿಸಿ ಒಬ್ಬರ ಮೇಲೊಬ್ಬರು ಎಸೆಯುವುದು ಇದಕ್ಕೆ ತೂಟೆದಾರ ಎನ್ನುತ್ತಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ಈ ತೂಟೆದಾರದಲ್ಲಿ ಗ್ರಾಮದ ಹಚ್ಚಿನ ಭಕ್ತರು ಭಾಗವಹಿಸುವುದು ತಲ ತಲಾಂತರದಿಂದ ನಡೆದು ಬಂದ ಪದ್ದತಿ. ಅಜಾರು ಸಮೀಪದ ಜಲಕದ ಕಟ್ಟೆಯಲ್ಲಿ ಸ್ಥಾನ ಮುಗಿಸಿ ಬಂದು ಅಜಾರಿನಲ್ಲಿ […]