ದೇಶದಲ್ಲಿ ಸಂಭವಿಸುವ ಅಪಘಾತ ಪ್ರಕರಣಗಳನ್ನು ಪರಿಗಣಿಸಿ ಕಠಿಣ ಕಾನೂನು ಕ್ರಮ ಜಾರಿ

Thursday, August 4th, 2016
drink-and-drive

ಹೊಸದಿಲ್ಲಿ: ದೇಶದಲ್ಲಿ ವಾರ್ಷಿಕ ಸಂಭವಿಸುವ 5 ಲಕ್ಷ ಅಪಘಾತ ಪ್ರಕರಣಗಳಲ್ಲಿ 1.5 ಲಕ್ಷ ಜನ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿನ ಕಾನೂನುಗಳನ್ನು ಒಳಗೊಂಡ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ 10,000 ರೂ. ವರೆಗೆ ದಂಡ, ಹಿಟ್‌ ಆ್ಯಂಡ್‌ ರನ್‌ ಕೇಸಲ್ಲಿ ಸಂತ್ರಸ್ತರಿಗೆ 2 ಲಕ್ಷ ರೂ. ಪರಿಹಾರ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. […]

ಕಟ್ಟಡದಿಂದ ಬಿದ್ದ ಯುವಕ ಮೃತ್ಯು-ಅಂಗಾಂಗ ದಾನ

Friday, February 26th, 2016
Vinithraj

ಮಂಜೇಶ್ವರ: ಇಲೆಕ್ಟ್ರಿಶಿಯನ್ ಕೆಲಸದ ವೇಳೆ ಕಟ್ಟಡದಿಂದ ಬಿದ್ದು ಗಂಭೀರಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಬಟ್ಯಪದವು ಕೃಷ್ಣ ಮೂಲ್ಯ-ಗೀತಾ ದಂಪತಿಗಳ ಪುತ್ರ ವಿನೀತ್ ರಾಜ್(21) ಬುಧವಾರ ನಿಧನರಾದರು. ಕಳೆದ ಮಂಗಳವಾರ ಮಂಗಳೂರಿನ ನಂತೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರಗಾಯಗೊಂಡಿದ್ದನು.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ವಿಫಲಗೊಂಡು ಮೃತನಾದನು. ಈ ಮಧ್ಯೆ ಈತನ ಕಿಡ್ನಿ ಹಾಗೂ ಪಿತ್ತಜನಕಾಂಗವನ್ನು ಬೆಂಗಳೂರಿನಿಂದ ಆಗಮಿಸಿದ ತಜ್ಞರ ತಂಡ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಯೊಬ್ಬನಿಗೆ ಅಳವಡಿಸಲು ಕೊಂಡುಹೋದರು.ಮೂತ್ರ ಜನಕಾಂಗದಲ್ಲಿ ಒಂದನ್ನು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಹಾಸನದ ನಿವಾಸಿ ರೋಗಿಯೋರ್ವನಿಗೆ ಗುರುವಾರ […]