ಕಡಲೆಕಾಯಿ, ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮಾಮೂಲಿ ಕೊಡಲಿಲ್ಲ ಎಂದು ಸುಳ್ಳು ಪ್ರಕರಣ ದಾಖಲಿಸಿದ ಮಹಿಳಾ ಇನ್ಸ್‌ಪೆಕ್ಟರ್‌, ಸೇರಿ ಮೂವರು ಅಮಾನತು

Friday, July 23rd, 2021
Parvatamma

ಬೆಂಗಳೂರು: ಕಡಲೆಕಾಯಿ, ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಸುಳ್ಳು ಪ್ರಕರಣ ದಾಖಲಿಸಿದ್ದ ಮಹಿಳಾ ಇನ್ಸ್‌ಪೆಕ್ಟರ್‌, ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅಮಾನತುಗೊಳಿಸಿದ್ದಾರೆ. ಆರ್‌ಎಂಸಿ ಯಾರ್ಡ್‌ ಠಾಣೆಯ ಇನ್‌ಸ್ಪೆಕ್ಟರ್‌ ಪಾರ್ವತಮ್ಮ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಆಂಜಿನಪ್ಪ ತರಕಾರಿ, ಸೊಪ್ಪು ಮಾರುವ ಶಿವರಾಜ್‌ ಎಂಬಾತನ ವಿರುದ್ಧ ಗಾಂಜಾ ಸೇವಿಸಿದ ಸುಳ್ಳು ಪ್ರಕರಣ ದಾಖಲಿಸಿ ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂಬಂಧ ವರದಿ ನೀಡುವಂತೆ ಡಿಸಿಪಿಗೆ […]

ಪಾಕ್‌ ಮಾಜಿ ಸಂಸದ ಈಗ ಕಡಲೆಕಾಯಿ ಮಾರಾಟಗಾರ

Saturday, December 14th, 2019
Hariyana

ಫತೇಬಾದ್‌ (ಹರಿಯಾಣ) : ಫತೇಬಾದ್‌ನ ರಟ್ಟನ್‌ಗರ್‌ ಗ್ರಾಮದ ರಸ್ತೆಬದಿಯಲ್ಲಿರುವ ಅಂಗಡಿಗಳ ಸಾಲುಗಳ ಅಂಗಡಿಯೊಂದರಲ್ಲಿ 74 ವರ್ಷದ ದಿವ್ಯಾರಾಮ್ ನೆಲದ ಮೇಲೆ ಕುಳಿತು ಕಡಲೆಕಾಯಿ ಮಾರುತ್ತಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ ? ದಿವ್ಯಾರಾಮ್‌ ಅವರು ಪಾಕಿಸ್ಥಾನದ ಒರ್ವ ಮಾಜಿ ಸಂಸದರಾಗಿದ್ದರು ಎಂದರೆ ನಂಬಲೇಬೇಕು !. ಅದು 1994 ನೇ ಇಸವಿ . ಪಾಕಿಸ್ಥಾನದ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದ ಬೆನಜೀರ್‌ ಭುಟ್ಟೋ ಅವರ ಸರ್ಕಾರ ಅಲ್ಪ ಸಂಖ್ಯಾತ ಕೋಟಾದಡಿಯಲ್ಲಿ ಪಂಜಾಬ್‌ ಪ್ರಾಂತ್ಯದ ಲೋಹಿಯಾ ಜಿಲ್ಲೆಯಲ್ಲಿ ರೈತರಾಗಿದ್ದ ದಿವ್ಯಾರಾಮ್‌ ಅವರನ್ನು […]