ತಂತ್ರಜ್ಞಾನಗಳ ಉಪಯೋಗವನ್ನು ಗರಿಷ್ಠಗಳಸಿ ಕೊಳ್ಳುವಲ್ಲಿ ಹಿಂದುಳಿಯಬಾರದು : ಡಾ.ಕೆ.ವಿ.ಆರ್.ಠಾಗೂರ್
Wednesday, April 6th, 2016ಕುಂಬಳೆ: ಶ್ರೇಷ್ಠ, ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಗಳಿರುವ ಭಾರತೀಯ ಪ್ರಾಚೀನ ಕಲೆಗಳ ದಾಖಲಾತಿಯಲ್ಲಿ ನಾವು ಹಿಂದುಳಿದಿದ್ದೇವೆ. ಇತಿಹಾಸದ ನನಹುಗಳಿಲ್ಲದೆ ಮುಂದಿನ ತಲೆಮಾರಿಗೆ ಕೃತಿ,ಸಾಧನೆಗಳ ಅರಿವು ಮೂಡಿಸಲು ದಾಖಲೀಕರಣಗಳ ಪ್ರಯತ್ನಗಳು ಇನ್ನಷ್ಟು ಆಗಬೇಕಿದೆಯೆಂದು ಕಾರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಕೆ.ವಿ.ಆರ್.ಠಾಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕೈಗೆತ್ತಿಕೊಂಡಿರುವ ಜಾನಪದ ಕಲೆ, ಕಲಾವಿದ ಹಾಗೂ ಪ್ರಾಚೀನ ಆಚರಣೆಗಳ ಪುಸ್ತಕ ಹಾಗೂ ಅಂತರ್ಜಾಲ ದಾಖಲೀಕರಣದ ಪೂರ್ವಭಾವೀ ಪರಿಚಯ ಪತ್ರವನ್ನು ಘಟಕದ ಕಾರ್ಯದರ್ಶಿ ಕೇಳು ಮಾಸ್ಟರ್ […]