ಬಾಲಕಿಯ ಚಿಕಿತ್ಸೆಗಾಗಿ ಧನ ಸಹಾಯಕ್ಕೆ ಮನವಿ
Friday, December 22nd, 2017ಪಡುಬಿದ್ರೆ: ಕೇವಲ ಐದು ವರ್ಷ ಪ್ರಾಯದ ಬಾಲಕಿ ರಕ್ತ ಕ್ಯಾನ್ಸರ್ ರೋಗದಿಂದ ಬಳಲುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ. ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕ ತಂದೆ ಚಿಕಿತ್ಸೆಗೆ ಖರ್ಚಾಗಲಿರುವ ಲಕ್ಷಾಂತರ ರೂ. ಭರಿಸಲು ಸಾಧ್ಯವಾಗದೆ ದಾನಿಗಳ ಸಹಕಾರಕ್ಕೆ ಸಹಾಯಕ್ಕೆ ಮನವಿ ಮಾಡಿದ್ದಾರೆ. ಪಲಿಮಾರು ಗ್ರಾಮದ ಕರ್ನಿಕರ ಕಟ್ಟೆ ಬಳಿಯ ನಿವಾಸಿ ಕೂಲಿ ಕಾರ್ಮಿಕ ವಸಂತ ಪೂಜಾರಿ ಮತ್ತು ವಸಂತಿ ದಂಪತಿಯ ಏಕೈಕ ಪುತ್ರಿ ವಂಶಿಕ (5) ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಈಕೆಯ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ […]