ಸಹಜ ಸ್ಥಿತಿಗೆ ಮರಳಿದ ಮಹಾನಗರ: ಕರ್ಫ್ಯೂ ಹಿಂಪಡೆದ ಪೊಲೀಸರು

Wednesday, September 14th, 2016
bangalore-normalcy

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದಲ್ಲಿ ನಡೆದ ಹಿಂಸಾಚಾರದ ಪರಿಣಾಮ ಕರ್ಫ್ಯೂ ಹೇರಲಾಗಿತ್ತು. ಆದ್ರೆ ಮಹಾನಗರ ಇಂದು ಯಥಾಸ್ಥಿತಿಗೆ ಮರಳುತ್ತಿರುವುದರಿಂದ ಕರ್ಫ್ಯೂವನ್ನ ಪೊಲೀಸರು ಹಿಂಪಡೆದಿದ್ದಾರೆ. ಇದರ ಜೊತೆಗೆ ಬೆಳಗ್ಗೆ 9 ಗಂಟೆಯಿಂದ ಕಂಡಲ್ಲಿ ಗುಂಡು ಆದೇಶವನ್ನೂ ಸಹ ವಾಪಸ್ ಪಡೆದಿದ್ದಾರೆ. ನಗರದ ಹದಿನಾರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ಕರ್ಫ್ಯೂವನ್ನು ಪೊಲೀಸರು ಹಿಂಪಡೆದಿದ್ದಾರೆ. ಆದರೆ ಇನ್ನೂ ನಗರದಾದ್ಯಂತ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು […]

ಬೆಂಗಳೂರಿನ 16 ಬಡಾವಣೆಗಳಲ್ಲಿ ಸೆಪ್ಟೆಂಬರ್ 13ರಿಂದ 14ರವರೆಗೆ ಕರ್ಫ್ಯೂ ಜಾರಿ

Tuesday, September 13th, 2016
karpue

ಬೆಂಗಳೂರು: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ನಗರದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ 16 ಬಡಾವಣೆಗಳಲ್ಲಿ ಸೆಪ್ಟೆಂಬರ್ 13ರಿಂದ 14ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗಿದೆ. ರಾಜರಾಜೇಶ್ವರಿ ನಗರ, ಕೆಪಿ ಅಗ್ರಹಾರ, ಚಂದ್ರಾ ಲೇಔಟ್, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಪೀಣ್ಯ, ಆರ್‌ಎಂಸಿ ಯಾರ್ಡ್, ನಂದಿನಿ ಲೇಔಟ್, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿ, ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗರಿ ರಸ್ತೆ ಮತ್ತು ರಾಜಾಜಿನಗರ. ಕರ್ಫ್ಯೂ […]