ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮಾವೇಶ

Wednesday, July 6th, 2016
Sahakara-bharathi

ಬದಿಯಡ್ಕ: ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮಾವೇಶವು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾವೇಶದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ರಾಜ್ಯ ನೇತಾರ ಐತ್ತಪ್ಪ ಮವ್ವಾರ್, ಮಹಿಳಾ ವಿಭಾಗದ ರಾಜ್ಯ ಸಹಸಂಚಾಲಕಿ ಗೀತಾ ಚಿದಂಬರಂ, ಸಹಕಾರ ಭಾರತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಕೃಷ್ಣ ಕುಮಾರ್ ,ಪೆರ್ಲ ತಾಲೂಕು ಅಧ್ಯಕ್ಷ ವಿಘ್ನೇಶ್ವರ ಭಟ್ ಮುಂತಾದವರು ಉಪಸ್ಥಿತರಿದ್ದರು. ಸಹಕಾರಿ ಕ್ಷೇತ್ರವನ್ನು ನಾಶಪಡಿಸುವಂತಹ ಯಾವುದೇ ಕ್ರಮವನ್ನು ಎದುರಿಸಲು ಸಹಕಾರಿಗಳು ಸದಾ […]

ವರ್ಕಾಡಿ ಬ್ಯಾಂಕ್‌ನ ಸಾಯಾಹ್ನ ಶಾಖೆ ಆರಂಭ

Wednesday, January 27th, 2016
vorkady

ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಮಜೀರ್‌ಪಳ್ಳ ಸಂಜೆ ಶಾಖೆಯನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸಿದರು. ಸಹಕಾರಿ ಬ್ಯಾಂಕ್ ಕೃಷಿಕರ ಬೆನ್ನೆಲುಬಾಗಿದೆ. ಸಹಕಾರಿ ಸಂಸ್ಥೆಯ ಪೂರ್ಣ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಂಡಲ್ಲಿ ನಮ್ಮ ಪ್ರದೇಶದ ಕೃಷಿ ಹಾಗೂ ವ್ಯಾಪಾರ ರಂಗಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬ್ಯಾಂಕ್‌ನ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ನ ಕಂಪ್ಯೂಟರ್ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಪಿ.ಬಿ.ಅಬ್ದುಲ್ ಮಜೀದ್ ನಿರ್ವಹಿಸಿದರು. […]