ಗಾಯಗೊಂಡ ರಿಕ್ಷಾ ಚಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ : ಗೃಹ ಸಚಿವ

Wednesday, November 23rd, 2022
Araga-Jnanedra

ಮಂಗಳೂರು : ಕುಕ್ಕರ್ ಬಾಂಬ್ ಘಟನೆಯಿಂದ ಗಾಯಗೊಂಡ ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಬಗ್ಗೆ ಮುಂದೆ ನಿರ್ಣಯಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಆರೋಪಿ ಶಾರೀಕ್ ಆರೋಗ್ಯ ಸುಧಾರಣೆಯಾದ ಬಳಿಕವಷ್ಟೇ ಆತನ ವಿಚಾರಣೆ ಸಾಧ್ಯವಾಗಲಿದೆ. ಎಂಟು ಮಂದಿ ತಜ್ಞ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದು, ಎಲ್ಲಾ ವೈದ್ಯರೊಂದಿಗೆ ಮಾತನಾಡಿದ್ದೇನೆ ಎಂದವರು ಹೇಳಿದರು ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, […]

ಕುಕ್ಕರ್​ ಬಾಂಬ್ ರ್ ಶಾರಿಕ್​ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ

Monday, November 21st, 2022
mohammed-shariq

ಮಂಗಳೂರು : ಮಂಗಳೂರಿನಲ್ಲಿ ನಡೆದ ಆಟೊರಿಕ್ಷಾ ಸ್ಫೋಟದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದ ರಾಜ್ಯ ಪೊಲೀಸರಿಗೆ ಮತ್ತು ಗುಪ್ತಚರ ದಳಕ್ಕೆ ಶಾರಿಕ್​ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಸ್ಫೋಟಕ ವಸ್ತುಗಳು, ನಕಲಿ ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಸಿಮ್​ ಸೇರಿದಂತೆ ಅನೇಕ ವಸ್ತುಗಳು ದೊರೆತಿವೆ ಎಂಬ ಮಾಹಿತಿ ಸಿಕ್ಕಿದೆ. ಇಂದು ಆತ ಐಸಿಸ್​ ಮಾದರಿಯಲ್ಲಿ ಕುಕ್ಕರ್​ ಬಾಂಬನ್ನು ಹಿಡಿದು ನಿಂತಿದ್ದ ಫೋಟೊ ಒಂದು ವೈರಲ್​ ಕೂಡ ಆಗಿದೆ. ಈಗ ಈ ಶಂಕಿತ ಉಗ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೊಹಮ್ಮದ್ […]