ಕೂಳೂರು ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ

Saturday, September 19th, 2020
kulooru Compound

ಮಂಗಳೂರು : ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿವರುವ ಮಳೆಯ ನಡುವೆ ಮುಂಜಾಗ್ರತೆಯಿಲ್ಲದೆ ಕೆಲಸ ಕೈ ಗೊಂಡ ಪರಿಣಾಮ ಕೂಳೂರಿನ ಸೈಂಟ್ ಆ್ಯಂಟನಿ ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಶನಿವಾರ  ಬೆಳಗ್ಗೆ ನಡೆದಿದೆ. ಮೃತರನ್ನು ನೀರುಮಾರ್ಗ ನಿವಾಸಿ ಉಮೇಶ್(37) ಎಂದು ಗುರುತಿಸಲಾಗಿದೆ. ತಡೆಗೋಡೆ ಕುಸಿದ ಸ್ಥಳದಲ್ಲೇ ಉಮೇಶ ಕೆಲಸ ಮಾಡುತ್ತಿದ್ದರೆನ್ನ ಲಾಗಿದೆ. ಉಳಿದ ಇಬ್ಬರು ಕಾರ್ಮಿಕರಾದ ಬಸವರಾಜ್ ಹಾಗೂ ನಾರಾಯಣ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮಣ್ಣಿನಡಿಗೆ ಸಿಲುಕಿದ್ದ ಉಮೇಶ್ […]