Blog Archive

ಕೇಂದ್ರ ಸರ್ಕಾರ ತನ್ನ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸಲಿ – ಐವನ್

Thursday, May 18th, 2017
Ivan

ಮಂಗಳೂರು : ಕೇಂದ್ರ ಸರ್ಕಾರ ತನ್ನ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೇಂದ್ರ ಸರ್ಕಾರ  ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿದೆ. ಆದರೆ ಯಾವುದೇ ಜನೋಪಯೋಗಿ ಯೋಜನೆಯನ್ನು ಕೈಗೊಂಡಿಲ್ಲ. ಆದ್ದರಿಂದ ರೈತರಿಗೆ, ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ಅಚ್ಛೇ ದಿನ್ ಇನ್ನೂ ಬಂದಿಲ್ಲ. ಕೇವಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಂಪನಿಗಳಿಗೆ ಅಚ್ಛೇ ದಿನ್ ಬಂದಿದೆ. ನೋಟು ಅಮಾನ್ನೀಕರಣದಿಂದಾಗಿ […]

ಕಂಬಳ ಕ್ರೀಡೆ ನಡೆಸಲು ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು: ನಳಿನ್ ಕುಮಾರ್

Wednesday, February 8th, 2017
Nalin-kumar

ಮಂಗಳೂರು: ಕಂಬಳ ಕ್ರೀಡೆ ನಡೆಸಲು ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮಾಡಿದ್ದಾರೆ. ಲೋಕಸಭಾ ಚಳಿಗಾಲದ ಅಧಿವೇಶನದಲ್ಲಿ ನಿಯಮ 377ರ ಅಡಿಯಲ್ಲಿ ಮಾತನಾಡಿ ವಿಷಯ ಮಂಡಿಸಿದ ಅವರು, ಕಂಬಳವು ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಕಂಬಳದ ಇತಿಹಾಸದಲ್ಲಿ ಕೋಣಗಳನ್ನು ಯಾವುದೇ ರೀತಿಯಾಗಿ ಹಿಂಸಿಸುವ ಹಾಗೂ ಈ ಕ್ರೀಡೆಯ ಸಂದರ್ಭದಲ್ಲಿ ಕೋಣಗಳು ಮೃತಪಟ್ಟ ನಿದರ್ಶನಗಳಿಲ್ಲ. ಈ ಕ್ರೀಡೆಯು […]

ಕಂಬಳದ ಬಗ್ಗೆ ತಡೆಯಾಜ್ಞೆ ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು: ರವಿಶಂಕರ ಪ್ರಸಾದ್

Wednesday, January 25th, 2017
BJP

ಮಂಗಳೂರು: ಕಂಬಳದ ಬಗ್ಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಈ ತಡೆಯಾಜ್ಞೆ ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಲು ಮುಂದಾಗಲಿ ಆಗ ಕೇಂದ್ರ ಸರ್ಕಾರ ಮುಕ್ತವಾಗಿ ಸ್ಪಂದಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಕೈಗೊಂಡ ಸುಗ್ರೀವಾಜ್ಞೆ ರೀತಿಯಲ್ಲೆ ಕರ್ನಾಟಕ ಸರ್ಕಾರ ಕಂಬಳ ಬಗ್ಗೆ ನಿರ್ಣಯ ಕೈಗೊಳ್ಳಲಿ ಕಂಬಳದ ಬಗ್ಗೆ ಮೋದಿ ಸರ್ಕಾರ ಗೌರವ ಇರಿಸಿದ್ದು ಸ್ಥಳೀಯ ಕಲೆ ಸಂಸ್ಕೃತಿ ಆಚರಣೆ ಕ್ರೀಡೆಗಳ ಬಗ್ಗೆ ಕೇಂದ್ರ ಸರ್ಕಾರ ಗೌರವ ಹೊಂದಿದೆ […]

ಎಸ್‌ಡಿಸಿಸಿ ಬ್ಯಾಂಕಿನ ಅಧೀನದಲ್ಲಿ ಕೋಟ್ಯಾಂತರ ಹಣ: ಬ್ಯಾಂಕಿಗೆ ಐಟಿ ಮತ್ತು ಇಡಿ ಅಧಿಕಾರಿಗಳ ದಾಳಿ

Wednesday, December 28th, 2016
SCDCC-bank

ಮಂಗಳೂರು: ಕೇಂದ್ರ ಸರ್ಕಾರ 500- 1000 ನೋಟು ನಿಷೇಧ ಮಾಡಿದ ನಂತರ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿ ಡಿ ಸಿ ಸಿ) ನಲ್ಲಿ ಕೋಟ್ಯಾಂತರ ಹಣ ಅಸಹಜವಾಗಿ ಜಮೆಯಾದ ಹಿನ್ನೆಲೆಯಲ್ಲಿ ಇಂದು ಬ್ಯಾಂಕಿಗೆ ಐಟಿ ಮತ್ತು ಇಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರದ ಐದು ದಿನಗಳಲ್ಲಿ ಕೋಟ್ಯಾಂತರ ಹಣ ಎಸ್‌ಡಿಸಿಸಿ ಬ್ಯಾಂಕಿನ ಅಧೀನದಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಸಂಗ್ರಹವಾಗಿತ್ತು. ಈ ಬಗ್ಗೆ ಈಗಾಗಲೇ ಐಟಿ […]

ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಗುಲಾಬಿ ಹೂ ಹಾಗೂ ಸಿಹಿ ತಿಂಡಿ ನೀಡಿ ಅಭಿನಂದನೆ

Saturday, November 26th, 2016
Bank officer

ಮಂಗಳೂರು: ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಪಡಿಸಿದ ಬಳಿಕ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಬ್ಯಾಂಕ್ ಸಿಬಂದಿ ಮೇಲೆ ಒತ್ತಡ ಹೆಚ್ಚಿದೆ. ಅವರ ಸೇವೆಯನ್ನು ಗುರುತಿಸಿ ಮಂಗಳೂರಿನ ಶಿವಗೌರಿ ಟ್ರಸ್ಟ್‌ನ ಟ್ರಸ್ಟಿ ಎ. ಬದರಿನಾಥ ಕಾಮತ್ ಬ್ಯಾಂಕ್‌ಗಳಿಗೆ ತೆರಳಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಗುಲಾಬಿ ಹೂ ಹಾಗೂ ಸಿಹಿ ತಿಂಡಿ ನೀಡಿ ಅಭಿನಂದಿಸಿದರು. ಕೇಂದ್ರ ಸರ್ಕಾರವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ […]

ಶರಿಯತ್ ಕಾನೂನಿಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಸೂದ್ ಎಚ್ಚರಿಕೆ

Friday, October 28th, 2016
musilm-organisations

ಮಂಗಳೂರು: ಇಸ್ಲಾಂ ಧರ್ಮದ ಶರಿಯತ್ ಕಾನೂನಿನ ಬಗ್ಗೆ ಹಸ್ತಕ್ಷೇಪ ಮಾಡಿ ತ್ರಿವಳಿ ತಲಾಕ್‍ನ್ನು ವಿರೋಧಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್‌ ಸಲ್ಲಿಸಿರುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಆಕ್ಷೇಪ ವ್ಯಕ್ತಪಡಿಸಿದರು. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಿಯತ್ ಕಾನೂನಿಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು, ಸರ್ಕಾರ ಇದಕ್ಕೆಲ್ಲ ಅವಕಾಶ ಮಾಡಿಕೊಡಬಾರದು ಎಂದರು. ನಮ್ಮ ಸಂವಿಧಾನ ಧಾರ್ಮಿಕ […]

ಮನೆ, ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ಮರಳು ಭೂಗರ್ಭದಿಂದ ಸರಬರಾಜು

Friday, October 28th, 2016
sand

ಮಂಗಳೂರು: ಮನೆ, ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ಮರಳು ಇನ್ನು ಮುಂದೆ ಸಾಗರ ಭೂಗರ್ಭದ ಒಳಗಿನಿಂದ ಸರಬರಾಜು ಆಗಲಿದೆ. ಸಮುದ್ರ ತೀರದಿಂದ 10 ಕಿ.ಮೀ. ವ್ಯಾಪ್ತಿಯ ಹೊರಗೆ (ಸಮುದ್ರದೊಳಗೆ) ಕೇರಳ ವ್ಯಾಪ್ತಿಯ 2,797 ಚ.ಕಿ.ಮೀ. ಪ್ರದೇಶದಲ್ಲಿ ನಿರ್ಮಾಣ ಯೋಗ್ಯ ಮರಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿಯ 4,525 ಚ.ಕಿ.ಮೀ. ಭೂಗರ್ಭ ಪ್ರದೇಶದಲ್ಲಿ ನಿರ್ಮಾಣ ಯೋಗ್ಯ ಮತ್ತು ಕಾರ್ಬೊನೇಟ್ ಮರಳು ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭೂ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ […]

ತ್ರಿವಳಿ ತಲಾಖ್‍ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಾದರೂ ಏಕೆ?: ಇಬ್ರಾಹಿಂ ಕೋಡಿಜಾಲ್

Friday, October 21st, 2016
Ibrahim Kodijal

ಮಂಗಳೂರು: ತ್ರಿವಳಿ ತಲಾಖ್‍ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌‌ ಸಲ್ಲಿಸಿರುವುದನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಆಕ್ಷೇಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಸ್ವಾತಂತ್ರವನ್ನು ಸಂವಿಧಾನವೇ ನೀಡಿರುವಾಗ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಾದರೂ ಏಕೆ? ಮಹದಾಯಿ, ಕಾವೇರಿಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತವಾಗಿ ದೇಶದಲ್ಲಿ ಪ್ರತಿ ದಿನ ತೈಲ ಬೆಲೆ ಏರಿಕೆಯಾಗುತ್ತಿದೆ. ರೈತರು, ಬಡವರು ಕಂಗಾಲಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ […]

ಕಾವೇರಿ ನದಿ ನೀರು ಪ್ರಕರಣ ನಾಳೆ ವಿಚಾರಣೆ: ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮ

Thursday, September 29th, 2016
kaveri

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ಪ್ರಕರಣ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಚಿತ್ರಕಲಾ ಪರಿಷತ್‌‌ನಲ್ಲಿ ಸುಧ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಮಗೆ ಈ ಬಾರಿ ನ್ಯಾಯ ಸಿಗುವ ಭರವಸೆ ಇದೆ. ಕೇಂದ್ರ ಸರ್ಕಾರ ಕರೆದ ಸಭೆಯಲ್ಲಿ ಸಿಎಂ ಭಾಗವಹಿಸಿದ್ದಾರೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತದೆ. ಕೇಂದ್ರ ಸರ್ಕಾರಕ್ಕೂ ವಸ್ತು ಸ್ಥಿತಿ […]

ಟಾಪ್‌ 10 ಸ್ವಚ್ಛ ಜಿಲ್ಲೆಗಳಲ್ಲಿ ಸ್ಥಾನ ಪಡೆದ ಉಡುಪಿ ಜಿಲ್ಲೆ

Friday, September 9th, 2016
udupi-dist

ನವದೆಹಲಿ: ದೇಶದ 600 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದ 75 ಸ್ವಚ್ಛ ಜಿಲ್ಲೆಗಳಲ್ಲೇ ಅತಿ ಸ್ವಚ್ಛ ಯಾವುವು ಹಾಗೂ ಕಡಮೆ ಸ್ವಚ್ಛ ಯಾವುವು ಎಂಬುದರ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಈ ಪೈಕಿ ಟಾಪ್‌ 10 ಸ್ವಚ್ಛ ಜಿಲ್ಲೆಗಳಲ್ಲಿ ಉಡುಪಿ ಸ್ಥಾನ ಪಡೆದಿದ್ದರೆ, 75ರ ಕೊನೆಯಂಚಿನಲ್ಲಿ, ಬಯಲು ಬಹಿರ್ದೆಸೆ ಮುಕ್ತ ರಾಜ್ಯಕ್ಕೆ ಪಣ ತೊಟ್ಟಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲರ ಗದಗ ಇದೆ. ಕೇಂದ್ರ ಸರ್ಕಾರದ ಭಾರತೀಯ ಗುಣಮಟ್ಟ ಪರಿಷತ್ತು ಈ ಸಮೀಕ್ಷೆ ನಡೆಸಿದ್ದು, ಕೇಂದ್ರ […]