ಅಂಗಡಿಯೊಳಗೆ ಕರೆದು ಬಾಲಕಿ ಅತ್ಯಾಚಾರ, ಮಾಲೀಕನ ಪುತ್ರನ ಬಂಧನ

Sunday, October 10th, 2021
Konaje Rape

ಮಂಗಳೂರು  : ಅಂಗಡಿಗೆ ಖರೀದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ  ಮಾಡಿದ ಆರೋಪದಲ್ಲಿ ಕೊಣಾಜೆ ಪೊಲೀಸರು ಅಂಗಡಿ ಮಾಲೀಕನ ಪುತ್ರನನ್ನು  ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೊಣಾಜೆ ಸೂಪರ್ ಸ್ಟೋರ್ಸ್ ಮತ್ತು ಸ್ವೀಟ್ಸ್ ಮಾಲೀಕನ ಪುತ್ರ ಉಸ್ಮಾನ್(35) ಬಂಧಿತ ಆರೋಪಿ. ಭಾನುವಾರ ಸಂಜೆ 13 ವರ್ಷದ ಬಾಲಕಿ ಖರೀದಿಗೆಂದು ಅಂಗಡಿಗೆ ಬಂದಿದ್ದು, ಈ ಸಂದರ್ಭ ಆರೋಪಿ ಆಕೆಯನ್ನು ಪುಸಲಾಯಿಸಿ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿದ ಬಾಲಕಿ ಅಲ್ಲಿಂದ ಓಡಿ […]

ಲಾಕ್ ಡೌನ್ : ಶಾಮಿಯಾನ ಹಾಕಿ ಸಾಮೂಹಿಕ ನಮಾಜ್ ಯತ್ನ, ಪ್ರಕರಣ ದಾಖಲು

Wednesday, May 26th, 2021
namaz

ಮಂಗಳೂರು  : ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಮಂಜನಾಡಿ ಗ್ರಾಮದಲ್ಲಿ 200 ಜನರನ್ನು ಸೇರಿಸಿ ಶಾಮಿಯಾನ  ಹಾಕಿ ಸಾಮೂಹಿಕ ನಮಾಜ್‌ಗೆ ತಯಾರಿ ನಡೆಸುತ್ತಿದ್ದಾಗ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಚರ್ಚ್, ದೈವ-ದೇವಸ್ಥಾನ, ಮಸೀದಿ, ಮಂದಿರಗಳನ್ನು ಬಂದ್ ಮಾಡಲಾಗಿದೆ. ಮಸೀದಿಗಳನ್ನು ಬಂದ್ ಮಾಡಿ ಸಾಮೂಹಿಕ ನಮಾಜ್‌ನಿಂದ ದೂರ ಇರುವಂತೆ ಉನ್ನತ ಧರ್ಮಗುರುಗಳು ಸೂಚನೆ ನೀಡಿದ್ದಾರೆ. ಆದರೆ ಮಂಜನಾಡಿ ಗ್ರಾಮದ ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಕಳೆದ  ಶುಕ್ರವಾರ ಮಧ್ಯಾಹ್ನ 200 ಜನರನ್ನು ಸೇರಿಸಿ ಸಾಮೂಹಿಕ ನಮಾಜ್‌ಗೆ ಶಾಮಿಯಾನ ಸಹಿತ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ […]

ಜೈಲಿನಿಂದ ಬಿಡುಗಡೆ ಗೊಂಡ ಒಂದೇ ವಾರದಲ್ಲಿ ಮಹಿಳೆಯ ಸರ ಎಳೆದು ಬಂಧಿತನಾದ ಆರೋಪಿ

Tuesday, March 2nd, 2021
irshad

ಉಳ್ಳಾಲ : ಜೈಲಿನಿಂದ ಬಿಡುಗಡೆ ಗೊಂಡು ಬಂದ ವ್ಯಕ್ತಿಯೊಬ್ಬ ತೋಟದಿಂದ ಸೋಗೆ ತರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದು ಸರ ಎಳೆದು ಪರಾರಿಯಾಗಿದ್ದ. ಆತನನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಪಾನೇಲ ನಿವಾಸಿ ಇರ್ಷಾದ್ (23) ಎಂದು ಗುರುತಿಸಲಾಗಿದೆ. ಬೋಳಿಯಾರ್ ನಿವಾಸಿಯಾದ ಶಾಂಭವಿ ಅವರು ತಮ್ಮ‌ಮನೆ ಸಮೀಪದ ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದಿದ್ದ ಆರೋಪಿ  ಅವರ  ಸರ ಎಳೆದು ಪರಾರಿಯಾಗಿದ್ದ. ಆರೋಪಿ ಇರ್ಷಾದ್ ಅತ್ಯಾಚಾರ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದೂ , ಬಂಧಿತನಾಗಿದ್ದ ಈತ ವಾರದ ಹಿಂದೆ ಜಾಮೀನಿನ ಮೇಲೆ […]

ಗುಡ್ಡದ ಮೇಲೆ ಮಜಾ ಮಾಡುತ್ತಿದ್ದ ಅನ್ಯಕೋಮಿನ ಜೋಡಿ, ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

Thursday, February 4th, 2021
mudipu gudda

ಮಂಗಳೂರು :  ಮುಡಿಪು ಗುಡ್ಡೆಯಲ್ಲಿ ಮಜಾ ಮಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮೂಡಬಿದಿರೆಯ ಜುನೈದ್ ಎಂಬಾತ ಕೈರಂಗಳ ವಿದ್ಯಾನಗರದ ಹಿಂದೂ ಯುವತಿಯೊಂದಿಗೆ ಮುಡಿಪು ಬೆಟ್ಟದಲ್ಲಿ ಒಟ್ಟಿಗೆ ಇದ್ದಾಗ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು, ಇಬ್ಬರಿಗೂ ಥಳಿಸಿ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಗೆ ಇನ್ಸ್ಟಾಗ್ರಾಂ ಮೂಲಕ ಈ ಯುವಕನ ಪರಿಚಯವಾಗಿತ್ತು ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮೂರು ಘಟನೆಗಳು ನಡೆದಿದ್ದು ಬೋಳಿಯಾರ್ ಬಳಿ ಯುವಕನಿಂದ […]

ಯುವತಿಯನ್ನು ಬೆದರಿಸಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ಒಬ್ಬನ ಬಂಧನ

Wednesday, February 8th, 2017
arrested

ಮಂಗಳೂರು: ಯುವತಿಯನ್ನು ಬೆದರಿಸಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ಕೊಣಾಜೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಬಂಧಿತನ್ನು ಬೊಳಿಯಾರ್ ನಿವಾಸಿ ಮಹಮ್ಮದ್ ಮುಸ್ತಾಫ (23) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿ ಆಶ್ರಫ್ ತಲೆಮರೆಸಿಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಇಬ್ಬರು ಆರೋಪಿಗಳು ಯುವತಿಯನ್ನು ಬೆದರಿಸಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತ ಯುವತಿ ಕೊಣಾಜೆ ಠಾಣೆಗೆ ದೂರು ನೀಡಿದ್ದಳು. ಬಂಧಿತ ಮುಸ್ತಾಫನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Thursday, November 17th, 2016
Muhammad

ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯ ಹರೇಕಳ ಗ್ರಾಮದ ನ್ಯೂಪಡ್ಪು ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಕೊಣಾಜೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಜನಾಡಿ ಮಸೀದಿ ಸಮೀಪದ ನಿವಾಸಿ ಮಹಮ್ಮದ್(40) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 250 ಗ್ರಾಂ ತೂಕದ ಗಾಂಜಾ ಮತ್ತು ಗಾಂಜಾವನ್ನು ಅಡಗಿಸಿಟ್ಟಿದ್ದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.