Blog Archive

ರಾಮನಗರದಲ್ಲಿರುವ ಪಾದರಾಯನಪುರ ದಲ್ಲಿ ಐದು ಮಂದಿಗೆ ಕೊರೋನಾ ಸೋಂಕು

Friday, April 24th, 2020
padarayanapura

ಬೆಂಗಳೂರು : ರಾಮನಗರದಲ್ಲಿರುವ ಪಾದರಾಯನಪುರ ದಲ್ಲಿ ಗಲಾಟೆ ಎಬ್ಬಿಸುವ ಐದು ಮಂದಿ ಪುಂಡರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಶುಕ್ರವಾರ ಜಿಲ್ಲಾಡಳಿತದ ಮಾಹಿತಿ ಹೇಳಿದೆ. ಹಾಗಾಗಿ ಆರೋಪಿಗಳನ್ನು ರಾಮನಗರದಿಂದ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಆರೋಪಿಗಳ ಸ್ಥಳಾಂತರಕ್ಕೆ 14 KSRTC ಬಸ್ ಕಳುಹಿಸಿದೆ. ಜಿಲ್ಲಾಡಳಿತ. ಬೆಳಿಗ್ಗೆ 10 ಗಂಟೆಯೊಳಗಾಗಿ ಶಿಫ್ಟ್ ಮಾಡಬೇಕೆಂದು ಡಿಕೆ ಸುರೇಶ್ ಸೂಚನೆ ನೀಡಿದ್ದಾರೆ. ಸೋಂಕಿತರನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುವ ಏರ್ಪಾಟು ಮಾಡಲಾಗಿದೆ ಎನ್ನಲಾಗಿದೆ.  

ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ಕೊರೋನಾ ಸೋಂಕು, 87 ಸಾವಿರದ 320 ಮಂದಿ ಮೃತ

Thursday, April 9th, 2020
corona

ಪ್ಯಾರಿಸ್: ಕೊರೋನಾ ಸೋಂಕು ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದಲ್ಲಿ ಕಾಣಿಸಿಕೊಂಡ ಸೋಂಕಿನ ಬಗ್ಗೆ ಎಎಫ್ ಪಿ ಸಂಸ್ಥೆ ರಾಷ್ಟ್ರೀಯ ಪ್ರಾಧಿಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯನ್ನಾಧರಿಸಿ ಅಂಕಿಅಂಶಗಳನ್ನು ನೀಡಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಬಹುತೇಕ ದೇಶಗಳು ಅತಿ ಗಂಭೀರ ಕೇಸುಗಳನ್ನು ಮಾತ್ರ ಪರೀಕ್ಷೆ […]

ರಾಜ್ಯದಲ್ಲಿ 151 ಜನರಿಗೆ ಕೊರೋನಾ ಸೋಂಕು, ನಾಲ್ವರು ಮೃತ, 12 ಡಿಸ್ಚಾರ್ಜ್

Sunday, April 5th, 2020
corona

ಬೆಂಗಳೂರು:  ರಾಜ್ಯ ಸರ್ಕಾರ ಭಾನುವಾರ  ಸಂಜೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಒಟ್ಟು 151 ಜನರಿಗೆ ಈ ಸೋಂಕು ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ. 12 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಸೋಂಕು ಪೀಡಿತ 135 ವ್ಯಕ್ತಿಗಳಲ್ಲಿ 132 ಮಂದಿ ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಮೂವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ. ನಿನ್ನೆ ಸಂಜೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಏಳು ಹೊಸ ಕೋವಿಡ್-19 ಸೋಂಕಿತರು […]

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಏಳು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

Sunday, March 29th, 2020
Kasaragod Corona

ಕಾಸರಗೋಡು :  ರವಿವಾರ ಕೇರಳ ರಾಜ್ಯದಲ್ಲಿ 20 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ, ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ  ರವಿವಾರದಂದು ಏಳು ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಸೋಕಿತರೆಲ್ಲರೂ ವಿದೇಶದಿಂದ ಬಂದವರಾಗಿದ್ದಾರೆ. ಶನಿವಾರ ಒಂದು ಪ್ರಕರಣ ಮಾತ್ರ ದೃಢ ಪಟ್ಟಿದ್ದರೆ. ಆದರೆ, ರವಿವಾರ ಏಳು ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89ಕ್ಕೇರಿಕೆಯಾಗಿದೆ. ಕಾಸರಗೋಡು ಏಳು, ಕಣ್ಣೂರು ಎಂಟು, ತಿರುವನಂತಪುರ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ. ಈ ಪೈಕಿ ಹದಿನೆಂಟು ಮಂದಿ […]

ಭಾರತದಲ್ಲಿ ಮುಂದುವರಿದ ಕೊರೋನಾ ಸೋಂಕು : ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆ

Thursday, March 5th, 2020
virus

ನವದೆಹಲಿ : ಚೀನಾದಲ್ಲಿ ಮಹಾಮಾರಿಯಾಗಿ ಹಬ್ಬಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ 29 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಭಾರತದಲ್ಲಿ ಇದುವರೆಗೂ ಈ ಮಾರಣಾಂತಿಕ ವೈರಸ್ಗೆ ಬಲಿಯಾಗಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ. ದೇಶದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗಿರುವುದರಿಂದ ದೆಹಲಿಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಒಂದೇಕಡೆ ಸೇರಿಸುವುದನ್ನು ನಿರ್ಬಂಧಿಸಲಾಗಿದೆ. ಆದಷ್ಟು ಗುಂಪುಗೂಡುವುದನ್ನು ಕಡಿಮೆ ಮಾಡಲು ಸೂಚನೆ ನೀಡಲಾಗಿದೆ. ಒಂದುವೇಳೆ ಮಕ್ಕಳಲ್ಲಿ ಕೆಮ್ಮು, ಕಫ, ಉಸಿರಾಟದ ತೊಂದರೆ, ಜ್ವರದ ಲಕ್ಷಣಗಳು ಕಾಣಿಸಿದರೆ ತಕ್ಷಣ ವೈದ್ಯರ ಬಳಿ […]