Blog Archive

ಮಂಗಳೂರು ನೆಹರೂ ಮೈದಾನಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ

Sunday, November 1st, 2020
Kannada Rajyotsava

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು  ನೆಹರೂ ಮೈದಾನದಲ್ಲಿ  65ನೇ ಕನ್ನಡ ರಾಜ್ಯೋತ್ಸವದ  ಧ್ವಜಾರೋಹಣ ನೆರವೇರಿಸಿ ಬಳಿಕ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ  ಅವರ ಪೂರ್ತಿ ಸಂದೇಶ ಇಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ, ಈ ದಿನ ಆಚರಿಸುತ್ತಿರುವ 65ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ, ತಮ್ಮೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವೇ ಧನ ಧಾನ್ಯ, ಕನ್ನಡವೇ ಮನೆ ಮಾನ್ಯ, ಕನ್ನಡವೇ ಎನಗಾಯ್ತು ಕಣ್ಣು –ಕಿವಿ-ಬಾಯಿ.. ಇದು ಮುತ್ಸದ್ಧಿ ನೇತಾರ, ಸಂವಿಧಾನ […]

ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನ ಜಿಲ್ಲೆಯಾದ್ಯಂತ ನವೆಂಬರ್ ಅಂತ್ಯಕ್ಕೆ ಪ್ರಾರಂಭ – ಕೋಟ ಶ್ರೀನಿವಾಸ ಪೂಜಾರಿ

Tuesday, October 6th, 2020
yakshagana

ಮಂಗಳೂರು :  ಯಕ್ಷಗಾನ ಕಲಾವಿದರು ವೃತ್ತಿಯನ್ನು ಕಳೆದುಕೊಳ್ಳಬಾರದು ಎಲ್ಲಾ ರೀತಿಯ ಸೂಕ್ತ ಮುಂಜಾಗೃತ ಕ್ರಮದೊಂದಿಗೆ ಸಂಪ್ರದಾಯದ ಪ್ರಕಾರ ಕರಾವಳಿಯ ಗಂಡುಕಲೆ ಯಕ್ಷಗಾನ ಜಿಲ್ಲೆಯಾದ್ಯಂತ ನವೆಂಬರ್ ಅಂತ್ಯಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಯಕ್ಷಗಾನ ಮೇಳಗಳ ಸಂಚಾಲಕರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಕೋವಿಡ್–19 ನಿಂದಾಗಿ ಯಕ್ಷಗಾನ ಕಲಾವಿದರ ಸ್ಥಿತಿ ಸಂಕಷ್ಟದಲ್ಲಿ ಸಿಲುಕಿದ್ದು, ಯಾವುದೇ ಕಲಾವಿದನಿಗೆ ಅನ್ಯಾಯವಾಗದಂತೆ ಶೀಘ್ರದಲ್ಲಿಯೇ ಸರಕಾರದಿಂದ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು […]

ಮಂಗಳೂರಿನಲ್ಲಿ ಗಾಂಧಿ ಜಯಂತಿ ಆಚರಣೆ

Friday, October 2nd, 2020
Gandhi jayanthi

ಮಂಗಳೂರು : ದ.ಕ.‌ ಜಿಲ್ಲಾಡಳಿತ ಮತ್ತು ಭಾರತ್ ಸೇವಾದಳದ ಆಶ್ರಯದಲ್ಲಿ ಪುರಭವನದ ಎದುರಿನ ಗಾಂಧಿ ಪ್ರತಿಮೆ ಬಳಿ ಗುರುವಾರ ಬೆಳಗ್ಗೆ ಗಾಂಧಿ ಜಯಂತಿ ಆಚರಣೆ ನಡೆಯಿತು. ಗಾಂಧಿ ಟೋಪಿ ಧರಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಗಣ್ಯರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾತ್ಮ ಗಾಂಧೀಜಿ ಪ್ರೀತಿ, ನ್ಯಾಯ ಪರವಾಗಿ ನಿಷ್ಠವಾಗಿ ಹೋರಾಡಿ ದೇಶ ಪ್ರೇಮದೊಂದಿಗೆ ಸ್ವಾತಂತ್ರ್ಯ ತಂದವರು. ಶಾಂತಿ ಮತ್ತು ಸೌಹಾರ್ದದೊಂದಿಗೆ ದೇಶವನ್ನು ಒಂದುಗೂಡಿಸಿದ ಅವರ ಆದರ್ಶ […]

ರಾಜ್ಯ ಸಂಪುಟದಲ್ಲಿ ಸಚಿವ ಪುನರ್‌ ರಚನೆ; ಕೋಟ ಶ್ರೀನಿವಾಸ ಪೂಜಾರಿ ದೆಹಲಿಗೆ

Tuesday, August 18th, 2020
srinivas Poojary

ಮಂಗಳೂರು : ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿಗಳು ಈಗಾಗಲೇ ಶುರುವಾಗಿದೆ. ಏತನ್ಮಧ್ಯೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಿಢೀರನೇ ದೆಹಲಿಗೆ ತೆರಳಿದ್ದಾರೆ. ಪುನರ್‌ ರಚನೆ ಶೀಘ್ರದಲ್ಲೇ ಆಗಲಿದ್ದು ಉಡುಪಿಯಿಂದ ಶಾಸಕ ಸುನೀಲ್‌ ಕುಮಾರ್‌ ಕಾರ್ಕಳ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸುಳ್ಯದ ಎಸ್‌ ಅಂಗಾರ ಈ ಮೂವರ ಪೈಕಿ ಯಾರಿಗಾದರೂ ಇಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಈಗ ಸಚಿವ ಕೋಟ ಶ್ರೀನಿವಾಸ ಅವರು ದೆಹಲಿಗೆ ತೆರಳಿರುವುದು ಸಚಿವ ಸ್ಥಾನ ಉಳಿಸುವ […]

ಸರ್ಕಾರದ ಜನ ಸ್ನೇಹಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪುವಂತೆ ಮಾಡುವುದು ನಮ್ಮಉದ್ದೇಶ : ಕೋಟ ಶ್ರೀನಿವಾಸ ಪೂಜಾರಿ

Saturday, August 15th, 2020
independence day

ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ 74ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಿ  ಸ್ವಾತಂತ್ರ್ಯೋತ್ಸದ  ಸಂದೇಶ ನೀಡಿದರು. ಗೌರವವಂದನೇ ಸ್ವೀಕರಿಸಿದ ಬಳಿಕ ಮಾತನಾಡಿದ ಉಸ್ತುವಾರಿ ಸಚಿವರು  ಸುಮಾರು 5 ಕೋಟಿ ಜನರು ಆಯುಷ್ಮಾನ್ ಭಾರತ್, ಕಿಸಾನ್‌‌‌ ಸಮ್ಮಾನ್‌‌ ಮುಂತಾದ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡಿದ್ದಾರೆ. ಬಿ.ಎಸ್‌‌. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ರೈತರ ಪರವಾಗಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಾವು ರೈತರ ಬೆಳೆ ಸಮೀಕ್ಷೆ […]

ದೇವರ ದರ್ಶನಕ್ಕೆ ತೆರೆದುಕೊಂಡ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ

Monday, June 8th, 2020
Temple Visit

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಂಗಳೂರು ಮೇಯರ್ ದಿವಾಕರ್, ಕಾರ್ಪೊರೇಟರ್ ಮನೋಹರ್ ಶೆಟ್ಟಿ ಮೊದಲಾದವರು  ಜೂನ್ 8 ರ ಸೋಮವಾರ ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಕದ್ರಿ ದೇವಾಲಯದಲ್ಲಿ ಸರ್ಕಾರದ ಸೂಚನೆಯಂತೆ ಸ್ಯಾನಿಟೈಸರ್‌ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಗ್ರಹಗಳು, ಕಂಬಗಳು, ಗೋಡೆಗಳು ಇತ್ಯಾದಿಗಳನ್ನು ಮುಟ್ಟಬಾರದು, ತೀರ್ಥ ಪ್ರಸಾದ ಹಂಚಬಾರದು ಎಂದು ದೇವಾಲಯಗಳಿಗೆ ಆದೇಶಿಸಲಾಗಿದ್ದು ಸಾಮಾಜಿಕ ಅಂತರದೊಂದಿಗೆ ಮುಗಗವಸು ಧರಿಸುವುದು […]

ಮುಂದೂಡಲ್ಪಟ್ಟ ಸರಕಾರದ ಸಪ್ತಪದಿ ವಿವಾಹ ಕಾರ್ಯಕ್ರಮ ಶೀಘ್ರದಲ್ಲೇ ಆರಂಭ

Monday, June 1st, 2020
Muzurai

ಮಂಗಳೂರು : ಕೋವಿಡ್-19 ಸೋಂಕಿನಿಂದ ಮುಂದೂಡಲ್ಪಟ್ಟಿ ರುವ ಸಪ್ತಪದಿ ವಿವಾಹ ಕಾರ್ಯಕ್ರಮ ನಿಶ್ಚಿತವಾಗಿ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ. ಸಪ್ತಪದಿ ವಿವಾಹ ಕಾರ್ಯಕ್ರಮ ಎ.26 ಮತ್ತು ಮೇ 24 ರಂದು ನಡೆಯಬೇಕಿತ್ತು. ಆದರೆ ಸೋಂಕಿನ ಕಾರಣದಿಂದ ಅದು ಮುಂದೂಡಲ್ಪಟ್ಟಿದೆ. ಈ ವಿವಾಹ ಕಾರ್ಯಕ್ರಮ ನಿಶ್ಚಿತವಾಗಿ ನಡೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸಪ್ತಪದಿ ವಿವಾಹಕ್ಕೆ ರಾಜ್ಯಾದಾದ್ಯಂತ 4500 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 1500 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮುಖ್ಯಮಂತ್ರಿಗಳು 50 ಜನರಿದ್ದು ವಿವಾಹ ಕಾರ್ಯಕ್ರಮ ನಡೆಸಬಹುದು […]

ಜೂನ್ 1ರಿಂದ ರಾಜ್ಯದ ದೇವಸ್ಥಾನ ತೆರೆಯಲು ಸರ್ಕಾರ ಸಮ್ಮತಿ

Tuesday, May 26th, 2020
Srinivas poojary

ಮಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜೂನ್ 1ರಿಂದ ರಾಜ್ಯದ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನ ಗಳನ್ನು ತೆರೆಯುವುದರ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ. ಇನ್ನು ಸದ್ಯಕ್ಕೆ ಜಾತ್ರೆ, ಸಮಾರಂಭಗಳಿಗೆ ಅವಕಾಶ ಇಲ್ಲ ನೀಡಲಾಗಿಲ್ಲ. ದೇವಸ್ಥಾನಗಳಲ್ಲಿ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ ಎಂದರು. ನಾಳೆಯಿಂದ ರಾಜ್ಯ 52 ದೇವಸ್ತಾನಗಳ ಆನ್ ಲೈನ್ ಸೇವೆಗೆ […]

ಮದ್ಯ ಮಾರಾಟ ಅಧಿಕ ದರ ವಸೂಲಿ ಮಾಡಿದರೆ ಲೈಸನ್ಸ್ ರದ್ದು : ಸಚಿವರ ಎಚ್ಚರಿಕೆ

Friday, May 8th, 2020
KotaSrinivas

ಮಂಗಳೂರು  : ಜಿಲ್ಲೆಯ ಮದ್ಯದಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ನಡೆದ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಅಧಿಕ ದರ ವಸೂಲಿ ಮಾಡುವ ಪ್ರಕರಣ ಕಂಡು ಬಂದರೆ ಅಂತಹ ಮದ್ಯದಂಗಡಿಗಳ ಪರವಾನಿಗೆ ರದ್ದುಪಡಿಸಲು ಸೂಚನೆ ನೀಡಿದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಎಲ್ಲಾ […]

ಇಂದಿನಿಂದ ಮಂಗಳೂರಲ್ಲಿ ಬಟ್ಟೆಯಂಗಡಿ ಓಪನ್

Thursday, May 7th, 2020
cloth-shop

ಮಂಗಳೂರು :  ಸಾರ್ವಜನಿಕರ ಬೇಡಿಕೆ ಮೇರೆಗೆ ಜಿಲ್ಲೆಯಲ್ಲಿ ಗುರುವಾರದಿಂದ ಎಲ್ಲಾ ರೀತಿಯ ವಸ್ತ್ರದ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಗಳು ತಿಳಿಸಿದರು.. ಈ ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಂಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಆದರೆ ಮಾಲ್ ಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.