ಅನರ್ಹ ಶಾಸಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
Saturday, November 16th, 2019ಮೈಸೂರು : ಕೋರ್ಟ್ ತೀರ್ಪು ಬಂದ ನಂತರ ಆಪರೇಷನ್ ಕಮಲದ ಸತ್ಯವನ್ನು ಒಬ್ಬೊಬ್ಬರಾಗಿ ಬಾಯ್ಬಿಡುತ್ತಿದ್ದು, ಇದು ಜನರಿಗೆ ಅರ್ಥವಾಗುತ್ತದೆ, ಇವರೆಲ್ಲ ಅನರ್ಹರೇ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದರು. ಇಂದು ತಮ್ಮ ಮನೆ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಪರೇಷನ್ ಕಮಲದ ರಹಸ್ಯವನ್ನು ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರು ಸತ್ಯ ಹೇಳುತ್ತಿದ್ದಾರೆ ಇದು ಜನರಿಗೆ ಅರ್ಥವಾಗುತ್ತದೆ. ಇವರೆಲ್ಲಾ ಅನರ್ಹರೇ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಅನರ್ಹತೆಯ ಪಟ್ಟ ಕಟ್ಟಿಕೊಂಡೆ ಜನರ ಬಳಿಗೆ ಹೋಗಬೇಕು […]