Blog Archive

ಕೋವಿಡ್-19 ಸೋಂಕಿನ ಸಂಭಾವ್ಯ ಮೂರನೇ ಅಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

Saturday, July 24th, 2021
KV Rajendra

ಮಂಗಳೂರು : ಕೋವಿಡ್-19 ಸೋಂಕಿನ ಮೊದಲ ಹಾಗೂ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಸಂಭಾವ್ಯ ಮೂರನೇ ಅಲೆ ಎದುರಾದಲ್ಲೀ ಅದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು. ಅವರು ಜು.23ರ ಶುಕ್ರವಾರ ನಗರದ ವೆನ್‍ಲಾಕ್ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ […]

ದನ ಕಟ್ಟುವ ವಿಷಯದಲ್ಲಿ ತಂದೆಯಿಂದ ಪೆಟ್ರೋಲ್ ದಾಳಿಗೊಳಗಾಗಿದ್ದ ಮಗ ಸಾವು

Thursday, July 1st, 2021
Vishwanath-Shetty

ಮಂಗಳೂರು : ದನ ಕಟ್ಟುವ ವಿಷಯದಲ್ಲಿ ಉಂಟಾದ ಜಗಳದಲ್ಲಿ ತಂದೆಯೇ ಮಗನ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸ್ವಾಮಿತ್ ಶೆಟ್ಟಿ (25) ಜು.01 ರ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೆಪ್ಪಿನಮೊಗರು ತಾರ್ದೊಲ್ಯದ ದನ ಕಟ್ಟುವ ವಿಷಯದಲ್ಲಿ ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು. ಆರೋಪಿ ತಂದೆ ವಿಶ್ವನಾಥ ಶೆಟ್ಟಿ ಯಾನೆ ತಿಪ್ಪಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಘಟನೆ ನಡೆದಂದೇ ಮಂಗಳೂರು ಗ್ರಾಮಾಂತರ ಪೊಲೀಸರು […]

ಅಂಗವೈಕಲ್ಯವಿದೆ ಎಂದು ಜನಿಸಿರುವ ಮಗುವನ್ನು ಆಸ್ಪತ್ರೆಯ ನೀರಿನ ತೊಟ್ಟಿಗೆ ಹಾಕಿದ ದಂಪತಿ

Sunday, June 13th, 2021
infant

ಚಾಮರಾಜನಗರ : ಅಂದಾಜು 6 ದಿನದ ಗಂಡು ಶಿಶುವನ್ನು ಅಂಗವೈಕಲ್ಯ ಹೊತ್ತುಕೊಂಡು ಜನಿಸಿರುವ ಕಾರಣ ಹೆತ್ತವರು  ಮಗುವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಖಾಸಗಿ ಆಸ್ಪತ್ರೆಯ ಖಾಲಿ ನೀರಿನ ತೊಟ್ಟಿಯಲ್ಲಿ ಎಸೆದ ಘಟನೆ  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಅಂದಾಜು 6 ದಿನದ ಗಂಡು ಶಿಶು ಇದಾಗಿದ್ದು, ಕರುಳಬಳ್ಳಿ ಕತ್ತರಿಸದೇ ಹಾಗೆ ಬಿಟ್ಟಿದ್ದು ಕಂಡುಬಂದಿದೆ. ಆಸ್ಪತ್ರೆ ಶವಾಗಾರದ ಬಳಿ ಪ್ಲಾಸ್ಟಿಕ್ ಕವರಿನಲ್ಲಿ ಶಿಶು ಶವ ಪತ್ತೆಯಾಗಿದೆ. ಸಿಬ್ಬಂದಿ ಹೋದಾಗ ದುರ್ನಾತ […]

ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 45 ಕ್ಕೆ ಏರಿಕೆ, ಇಬ್ಬರು ಬಲಿ

Saturday, June 12th, 2021
Black Fungus

ಮಂಗಳೂರು : ದ.ಕ. ಜಿಲ್ಲೆಯಲ್ಲಿ  ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳ ಸಂಖ್ಯೆ  45 ಕ್ಕೆ ಏರಿದೆ.  ಶನಿವಾರ ಹೊಸತಾಗಿ 2 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಬಲಿಯಾಗಿದ್ದಾರೆ. ಪತ್ತೆಯಾದ ಎರಡು ಹೊಸ ಪ್ರಕರಣವು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬ್ಲ್ಯಾಕ್ ಫಂಗಸ್ ಗೆ ಇಬ್ಬರು ಬಲಿಯಾಗಿದ್ದು  ಒಬ್ಬರು ಚಿಕ್ಕಮಗಳೂರಿನವರು ಮತ್ತು ಇನ್ನೊಬ್ಬರು ಹಾಸನ ಜಿಲ್ಲೆಗೆ ಸೇರಿದವರಾಗಿದ್ದಾರೆ.  ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 12 ಮಂದಿಯ ಸಹಿತ ಬ್ಲ್ಯಾಕ್ […]

ಶಿವಮೊಗ್ಗ ಜಿಲ್ಲೆಯಲ್ಲಿ ಕವಾಸಕಿ ರೋಗಕ್ಕೆ ನಾಲ್ವರು ಮಕ್ಕಳು ಬಲಿ

Tuesday, June 8th, 2021
Kawasaki Disease

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ ದಾಖಲಾದ 8 ಮಕ್ಕಳಲ್ಲಿ ನಾಲ್ವರು ಮಕ್ಕಳು ಬಲಿಯಾಗಿದ್ದಾರೆ. ರಾಜ್ಯದ ಎಲ್ಲೆಡೆ ಕವಾಸಕಿ ರೋಗ ಭೀತಿ ಉಲ್ಬಣಿಸಿದ್ದು, ಈ ಕವಾಸಕಿ ರೋಗಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಕಳೆದ 15 ದಿನದಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ 8 ಮಕ್ಕಳಲ್ಲಿ ರೋಗ ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ, ಅಪೌಷ್ಠಿಕತೆ ಸಮಸ್ಯೆ ಇರುವ ಮಕ್ಕಳಲ್ಲಿ ಕವಾಸಕಿ ರೋಗ […]

ಕಾಂಗ್ರೆಸ್ ಯುವ ಮುಖಂಡನ ಅಂತ್ಯಕ್ರಿಯೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ, 25 ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲು

Monday, June 7th, 2021
Mahanthesh

ಗದಗ: ಕಾಂಗ್ರೆಸ್ ಯುವ ಮುಖಂಡನ  ಅಂತ್ಯಕ್ರಿಯೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 25 ಕ್ಕೂ ಹೆಚ್ಚು ಮಂದಿ  ಮೇಲೆಯ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 25 ಕ್ಕೂ ಹೆಚ್ಚು ಮಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. ಗದಗ ನಗರದ ಗಂಗಾಪೂರ ನಿವಾಸಿಯಾದ ಮಹಾಂತೇಶ ಬೆಳಧಡಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರವಾದ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಜೂನ್ 5 ರಂದು ಗದಗದಲ್ಲಿ ಅವರ ಅಂತ್ಯ ಸಂಸ್ಕಾರ ನಡೆದಿತ್ತು. ಈ ಸಂದರ್ಭದಲ್ಲಿ […]

ಸರಕಾರದಲ್ಲಿ18 ವಯಸ್ಸಿನವರಿಗೆ ಲಸಿಕೆ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ 850 ರೂ.ಗೆ ಸಿಗುತ್ತದೆ : ಲುಕ್ಮಾನ್

Tuesday, June 1st, 2021
lukman

ಮಂಗಳೂರು : ಸರಕಾರ 18ರಿಂದ 44ರ ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸ್ಥಗಿತ ಮಾಡಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ ಇದು ಮೋದಿ ಸರಕಾರ  ಶ್ರೀಮಂತರಿಗೆ ಮಾಡಿಕೊಟ್ಟ ಸವಲತ್ತು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಿಗೆ, ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರಕಾರ ಕೇವಲ ಶ್ರೀಮಂತರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. ಜನ ವಿರೋಧಿ […]

ಕಾಪು: ಬೈಕ್ – ರಿಕ್ಷಾ ಅಪಘಾತ; ಗಾಯಾಳು ಸಾರಿಗೆ ಉದ್ಯಮಿ ಹರಿದಾಸ್ ಭಟ್ ಸಾವು

Thursday, May 27th, 2021
GN Bhat

ಕಾಪು: ಕುರ್ಕಾಲು-ಸುಭಾಶ್ ನಗರ ಬಳಿ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಪಾಂಗಾಳ ಜೆ. ಎನ್. ಮೋಟಾರ್ಸ್ ನ ಮಾಲೀಕ ಹರಿದಾಸ್ ಭಟ್ (65) ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮೃತ ಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ಕುರ್ಕಾಲು ಸುಭಾಶ್ ನಗರ ಸಮೀಪದ ದ್ವಾರದ ಬಳಿ ಬೈಕ್‌ಗೆ ರಿಕ್ಷಾ ಡಿಕ್ಕಿ ಹೊಡೆದು ಹರಿದಾಸ್ ಭಟ್ ಅವರಿಗೆ ಗಂಭೀರ ಏಟಾಗಿತ್ತು. ತತ್‌ಕ್ಷಣ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಸುಮಾರು 45 ವರ್ಷಗಳಿಂದಲೂ ಸಾರಿಗೆ ಉದ್ಯಮ ನಡೆಸುತ್ತಿರುವ […]

ಖಾಸಗಿ ಆಸ್ಪತ್ರೆಯಲ್ಲಿ 9 ಬೆರಳುಳ್ಳ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Thursday, May 27th, 2021
9 finger baby

ವಿಜಯನಗರ : ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ  9 ಬೆರಳುಳ್ಳ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿ ಅಚ್ಚರಿ‌ ಮೂಡಿಸಿದ್ದಾಳೆ. ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20ನೇ ಕೇಸ್, ಒಂಬತ್ತು ಬೆರಳುಳ್ಳ ಮಗು ಜನನವಾಗುವುದು ತೀರಾ ವಿರಳ ಎಂದು ವೈದ್ಯರು ತಿಳಿಸಿದ್ದಾರೆ. ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ ಕೆಲ‌ ಸಮಯದವರೆಗೂ ನೋಡಿ ಬಳಿಕ ಕುಟುಂಬಸ್ಥರು ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ. ವೈದ್ಯರು ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಿದ್ದು,ಮಗುವನ್ನು ಹೊರಗೆ ತೆಗೆದಿದ್ದಾರೆ. ಗಂಡು ಮಗುವಿನ […]

ಕೋವಿಡ್ – 19 ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಲು ಮನವಿ

Tuesday, May 25th, 2021
private Hospital

ಬೆಂಗಳೂರು : ಕೋವಿಡ್ ಸಾಂಕ್ರಾಮಿಕ ರೋಗ ದಿನ ದಿನಕ್ಕೂ ಉಲ್ಬಣಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದು ಆರೋಗ್ಯ ಸೇವಾಕರ್ತರ ಬಹು ಮುಖ್ಯ ಹೊಣೆಗಾರಿಕೆಯಾಗಿರುತ್ತದೆ. ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಜೊತೆಗೂಡಿ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕಾಗಿದೆ. ಕೋವಿಡ್ – 19ರಿಂದ ಬಳಲುತ್ತಿರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವುದು ಅತ್ಯಂತ ಅವಶ್ಯಕವಾಗಿದೆ. ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನೊಂದಿಗೆ ನೋಂದಾವಣಿ ಮಾಡಿಕೊಳ್ಳಬೇಕೆಂದು ಈ ಮೂಲಕ ಎಲ್ಲಾ […]