ಖಾಸಗಿ ಹಾಸ್ಟೆಲ್​ ನಲ್ಲಿ 11 ಕೆಜಿ ಗಾಂಜಾ ಪತ್ತೆ, ಒಬ್ಬ ವ್ಯಕ್ತಿಯ ಬಂಧನ

Tuesday, January 4th, 2022
Sullia Ganja

ಸುಳ್ಯ : ಖಾಸಗಿ ಹಾಸ್ಟೆಲ್ ಒಂದರಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ 11.5 ಕೆಜಿ ಗಾಂಜಾವನ್ನು ಸುಳ್ಯ ಹಾಗು ಪುತ್ತೂರು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಕೊಠಡಿಯೊಂದನ್ನು ಬಾಡಿಗೆಗೆ ಪಡೆದ ಪಲ್ಲತ್ತೂರಿನ ಮೊಯ್ದಿನ್ ಕುಂಞಿ ಎಂಬವರು ತನ್ನ ಕುಟುಂಬದೊಂದಿಗೆ ಇಲ್ಲಿ ವಾಸವಾಗಿದ್ದು, ಇಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಸುಳ್ಯ ಹಾಗೂ ಪುತ್ತೂರಿನ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ತಪಾಸಣೆ ಸಂದರ್ಭದಲ್ಲಿ […]

ಗಾಂಜಾ ಸಾಗಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಬಂಧನ

Monday, December 13th, 2021
Ganja students

ಮಂಗಳೂರು : ತೊಕ್ಕೊಟ್ಟು ಸಮೀಪದ ಬಗಂಬಿಲ ಎಂಬಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ತ್ರಿಶ್ಶೂರ್‌ನ ಆದರ್ಶ್ ಜ್ಯೋತಿ (22) ಮತ್ತು ಕೊಟ್ಟಾಯಂನ ಯೋಯಲ್ ಜೋಯ್ಸ್ (22) ಎಂದು ಗುರುತಿಸಲಾಗಿದೆ. ಆದರ್ಶ್ ಬಿಡಿಎಸ್ ಮತ್ತು ಯೋಯಲ್ ನರ್ಸಿಂಗ್ ವಿದ್ಯಾರ್ಥಿಗಳು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬಗಂಬಿಲ ಪರಿಸರದಲ್ಲಿ ಇವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಸುಮಾರು 220 ಗ್ರಾಂ ತೂಕದ ಗಾಂಜಾ ಇವರ […]

ನಿಂಬೆಹಣ್ಣು ಚೀಲಗಳ ನಡುವೆ ಅಕ್ರಮವಾಗಿ 40 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ವಶ

Saturday, July 3rd, 2021
Ganja

ಮಂಗಳೂರು: ನಿಂಬೆಹಣ್ಣು ತುಂಬಿದ ಚೀಲಗಳ ನಡುವೆ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 40 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಶಿಹಾಬುದ್ದೀನ್ ಹಾಗೂ ಲತೀಫ್ ಬಂಧಿತರು. ನಗರದ ಕೊಟ್ಟಾರಚೌಕಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಬೊಲೆರೊ ವಾಹನ ಸಮೇತ ಒಟ್ಟು 11.17 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ರಾಕೆಟ್  ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ಬೀದರಹಳ್ಳಿಯಿಂದ 3.50 ಲಕ್ಷ ರೂ.ಮೌಲ್ಯದ 55 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. […]

ಮಾದಕ ವಸ್ತುಗಳನ್ನು ನಿಯಂತ್ರಿಸುವಲ್ಲಿ ಬೆಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ : ಗೃಹ ಸಚಿವ

Saturday, June 26th, 2021
bommai

ಬೆಂಗಳೂರು : ಮಾದಕ ವಸ್ತುಗಳ ಸಾಗಾಟ, ಮಾರಾಟ ನಿಯಂತ್ರಿಸುವಲ್ಲಿ ಬೆಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಪ್ರಯುಕ್ತ ಮಾತನಾಡಿದ ಅವರು, ಪೊಲೀಸರು ವಶಪಡಿಸಿಕೊಂಡಿದ್ದ ಶೇ.60ರಷ್ಟು ಮಾದಕ ವಸ್ತುವನ್ನು ನಾಶಪಡಿಸಿದ್ದೇವೆ. ಇನ್ನು, 40ರಷ್ಟು ಎಫ್‌ಎಸ್ಎಸ್ ಪರೀಕ್ಷಾ ಹಂತದಲ್ಲಿದೆ ಎಂದರು. ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ವರ್ಷ ಜಪ್ತಿಯಾದ ಮಾದಕ ವಸ್ತುಗಳ ವಿಲೇವಾರಿ ನಡೆಯಿತು. ಈ ಕಾರ್ಯಕ್ರಮದಲ್ಲಿ […]

ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ, ಗಾಂಜಾ ಹಾಗೂ ಎಂಡಿಎಂಎ ವಶ

Monday, June 14th, 2021
omanian

ಮಂಗಳೂರು :  ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ ಹಾಗೂ ಹಿಮಾಚಲ ಪ್ರದೇಶದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು  ಬಂಧಿಸಿದ್ದಾರೆ. ಬಂಧಿತರನ್ನು ಒಮನ್ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ (34) ಹಾಗೂ ಹಿಮಾಚಲ ಪ್ರದೇಶದ ರಾಮ್ (22) ಎಂದು ಗುರುತಿಸಲಾಗಿದೆ. ಒಮನ್ ಪ್ರಜೆ ಅಹ್ಮದ್ ಮುಸಬಾ 6 ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ. ಈ ಮಧ್ಯೆ ನಗರದ ಹೊಟೇಲೊಂದರಲ್ಲಿ ಹಿಮಾಚಲ ಪ್ರದೇಶದ ರಾಮ್ ಜತೆ ಬಂಧಿಸಲಾಗಿದ್ದು, ಬಂಧಿತರಿಂದ ಎಂಡಿಎಂಎ […]

ಖಾನ್‌ ಯುನಿಸ್‌ ಮತ್ತು ರಫಾಹ್‌ ನಗರಗಳ ಸುತ್ತಮುತ್ತ ಇಸ್ರೇಲ್‌ ದಾಳಿ 6 ಸಾವು

Wednesday, May 19th, 2021
gaja

ಗಾಜಾ :  ಇಸ್ರೇಲ್‌ ಸೈನಿಕರ ಮತ್ತು ಹಮಸ್ ಉಗ್ರರ ಸಂಘರ್ಷ ಮುಂದುವರಿದಿದ್ದು  ಗಾಜಾದಲ್ಲಿ ಬುಧವಾರ ಬೆಳಿಗ್ಗೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ. ಖಾನ್‌ ಯುನಿಸ್‌ ಮತ್ತು ರಫಾಹ್‌ ನಗರಗಳ ಸುತ್ತಮುತ್ತ 52 ಯುದ್ಧ ವಿಮಾನಗಳ ಮೂಲಕ 40 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಹಮಸ್ ಉಗ್ರರು ಬಳಸುತ್ತಿದ್ದ ಸುರಂಗಗಳ ಮೇಲೆಯೂ ದಾಳಿ ನಡೆಸಲಾಗಿದೆ. ಧರ್ಮ ಪ್ರಚಾರಕರು ಸೇರಿದಂತೆ ಸುಮಾರು 40 ಮಂದಿ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ […]

ಬ್ರೀಜ್ ಕಾರಿನಲ್ಲಿ ಗಾಂಜಾ ಸಾಗಾಟ, ಮೆಲ್ಕಾರ್ ನಲ್ಲಿ ಇಬ್ಬರ ಬಂಧನ

Thursday, November 12th, 2020
breez Ganja

ಬಂಟ್ವಾಳ : ಬ್ರೀಜ್  ಕಾರೊಂದರಲ್ಲಿ ಬಿ.ಸಿ.ರೋಡಿನಿಂದ ಮಾಣಿ ಮಾರ್ಗದಲ್ಲಿರುವ ಮೆಲ್ಕಾರ್ ಬಸ್ ನಿಲ್ದಾಣದ ಸಮೀಪ  ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಡಿಸಿಐಬಿ ಪೊಲೀಸರು, 1.48 ಕೆಜಿ ಗಾಂಜಾ ಮತ್ತು ಕಾರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಬಂದರು ಅನ್ಸಾರಿ ಕ್ರಾಸ್ ರೋಡ್ ನಿವಾಸಿ ಟಿ.ಪಿ.ಫಾರೂಕ್ (50) ಮತ್ತು ನೇಪಾಳದ ನಿವಾಸಿ, ಸದ್ಯ ಪಿವಿಎಸ್ ವೃತ್ತದ ಬಳಿ ಪಿಜಿಯಲ್ಲಿ ವಾಸವಿರುವ ಸಾಗರ್ ಸಿಂಗ್ (22) ಬಂಧಿತ ಆರೋಪಿಗಳು. ಇಬ್ಬರೂ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದು, ಬಳಿಕ ಅವರ ವಶದಲ್ಲಿದ್ದ ಒಟ್ಟು […]

ಚೋನಡ್ಕ ಎಂಬಲ್ಲಿ ಚೀಮೇನಿ ಪೊಲೀಸರಿಂದ ಹತ್ತು ಕಿಲೋ ಗಾಂಜಾ ವಶ

Monday, October 12th, 2020
chonadka

ಕಾಸರಗೋಡು : ಚೀಮೇನಿ ಠಾಣಾ ವ್ಯಾಪ್ತಿಯ ಚೋನಡ್ಕ ಎಂಬಲ್ಲಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಕುಖ್ಯಾತ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಾರಟ್ ನೌಶಾದ್ (40) ಹಾಗೂ ಸಂಶುದ್ದೀನ್ (42) ಎಂದು ಗುರುತಿಸಲಾಗಿದೆ . ಸೋಮವಾರ  ಮಧ್ಯಾಹ್ನ ಚೀಮೇನಿ ಠಾಣಾ ವ್ಯಾಪ್ತಿಯ ಚೋನಡ್ಕ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಆದರೆ. ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು ಕೂಡಲೇ ಎಲ್ಲಾ […]

ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದ ನಟಿ ವಿರುದ್ಧ ಎಫ್‍ಐಆರ್

Friday, September 4th, 2020
ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದ ನಟಿ ವಿರುದ್ಧ ಎಫ್‍ಐಆರ್

ಬೆಂಗಳೂರು :  ಗಾಂಜಾ ತುಳಸಿ ಗಿಡ ಇದ್ದಂತೆ ಎಂದು ವಿವಾದಿತ ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ. ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದು ನಿವೇದಿತಾ ಹೇಳಿದ್ದರು. ಈ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎ.ದೀಪಕ್ ಎಂಬುವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳ ಸೆರೆ

Saturday, August 22nd, 2020
ganja

ಉಡುಪಿ : ಕಂಟೈನರ್ ಲಾರಿಯಲ್ಲಿ ಉತ್ತರಪ್ರದೇಶದಿಂದ ಮಂಗಳೂರಿಗೆ ಬಿದಿರು ತುಂಬಿಸಿಕೊಂಡು ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮಾವರ ತಾಲೂಕು ಹೇರೂರು ಬಳಿ ಪೊಲೀಸರು ತಡೆದು ತಪಾಸಣೆ ನಡೆಸಿ ಸುಮಾರು 49 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ತಮಿಳುನಾಡಿನ ತಿರುವನ್ ವೆಲ್ಲಿ ಜಿಲ್ಲೆಯ ಕರುತಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ವಾನು ಹಲ್ ದಾರ್ (30) ಎಂದು ಗುರುತಿಸಲಾಗಿದೆ. ಆರೋಪಿಗಳು  ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ […]