Blog Archive

ಉಡುಪಿ : ಗಾಂಜಾ ಮಾರಾಟ : ಇಬ್ಬರು ಆರೋಪಿಗಳ ಬಂಧನ

Friday, September 6th, 2019
ganjaa

ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳಿಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಲ ಮೂಲದ ಬಂಚಾರಾಮ್ ಮಿತ್ರ ಯಾನೆ ಬೌಚಾರಾಮ್ ಮಿತ್ರ(58) ಮತ್ತು ಮುಕುಲ್ ಮಹಾಂತ(58) ಬಂಧಿತ ಆರೋಪಿಗಳು ಆರೋಪಿಗಳು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕಕ್ಕುಂಜೆ ರೈಲ್ವೆ ಬ್ರಿಡ್ಜ್ ಬಳಿಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳಿಂದ ಗಾಂಜಾ, ಮೊಬೈಲ್ ಸುಮಾರು 70 ಸಾವಿರ […]

ಅತ್ತಾವರ ಬಾಬುಗುಡ್ಡೆ ಯಲ್ಲಿ ಡ್ರಗ್ ಮಾರಾಟ ಜಾಲದ ನಾಲ್ವರ ಬಂಧನ

Saturday, July 13th, 2019
Drugs Attavara

ಮಂಗಳೂರು : ಎಸಿಪಿ ಸೆಂಟ್ರಲ್ ಮತ್ತು ತಂಡ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಿನ್ನೆ ಅತ್ತಾವರ ಬಾಬುಗುಡ್ಡೆ ಒಂದನೇ ಕ್ರಾಸ್ ರಸ್ತೆಯಲ್ಲಿ 1 ಕೆ.ಜಿ. 200 ಗ್ರಾಂ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ. ಎಕ್ಕೂರು ಕಲ್ಕರ್ ಮನೆ ನಿವಾಸಿ ಪೃಥ್ವಿ ಪಿ. ಕುಮಾರ್(19), ವೆಲೆನ್ಸಿಯಾದ ಕ್ಲೆವಿನ್ ಸಲ್ಡಾನಾ(21), ಅತ್ತಾವರ ಬಾಬುಗುಡ್ಡೆಯ ವಿ.ಎಸ್. ನಿಖಿಲ್ (21) ಹಾಗೂ ಮಂಗಳಾದೇವಿಯ ಸಾಗರ್ ಅಮೀನ್ (23) ಬಂಧಿತ ಆರೋಪಿಗಳು. ಆರೋಪಿಗಳಿಂದ 1 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ ಐದು […]

ಕೊಕೈನ್ ಮಾರಾಟಗಾರನ ಬಂಧನ ; 1.60 ಲಕ್ಷ ಮೌಲ್ಯದ ಕೊಕೈನ್ ವಶ

Thursday, June 20th, 2019
Monish

ಮಂಗಳೂರು : ನಗರದಲ್ಲಿ ಗಾಂಜಾ ಹಾಗೂ ಮಾದಕ  ವಸ್ತುಗಳ ಮಾರಾಟ ಮಾಡಿ ಯುವಕರನ್ನು ಮತ್ತು ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುವ ಜಾಲವನ್ನು ತಡೆಗಟ್ಟಲು  ಪೊಲೀಸರು ಬಲೇ ಬೀಸಿದ್ದಾರೆ. ಇದರ ಅಂಗವಾಗಿ ನಗರದಲ್ಲಿ ಅಡ್ಡಾಡುತ್ತಿದ್ದ ಮೋನಿಶ್ (36) ದೇವಿ ಶ್ರೀ, ದತ್ತ  ಪ್ರಸಾದ್ ಲೇಔಟ್, ಸುಲ್ತಾನ್ ಬತ್ತೇರಿ ರೋಡ್, ಬೋಳೂರು  ನಿವಾಸಿಯನ್ನು ಬಂಧಿಸಿ ಆತನಿಂದ 1.60 ಲಕ್ಷ ಮೌಲ್ಯದ 16 ಗ್ರಾಂ ಕೊಕೈನ್ ವಶ ಪಡಿಸಿಕೊಂಡಿದ್ದಾರೆ. ಆತನಿಂದ  80 ಸಾವಿರ ನಗದು, ತೂಕದ ಯಂತ್ರ ವಶಪಡಿಸಿ ಕೊಳ್ಳಲಾಗಿದೆ.

ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರ ಬಂಧನ

Thursday, January 24th, 2019
Ganja

ಮಂಗಳೂರು : ನಗರದ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ ರಸ್ತೆಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂರು ಮಂದಿ ಯುವಕರನ್ನು ಕಂಕನಾಡಿ ನಗರ ಪೊಲೀಸರು  ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಜಿತಿನ್ (25) ತಂದೆ: ರಾಮಯ್ಯ ವಾಸ: ಕಕ್ಕೆ ಬೆಟ್ಟು ಮನೆ, ಕುಲಶೇಖರ, ಪದವು ಗ್ರಾಮ, ಮಂಗಳೂರು, ಮೋಹಿತ್ ಕುಮಾರ್ (27) ತಂದೆ: ಉಮೇಶ್ ಪೂಜಾರಿ ವಾಸ: ಪ್ರಕೃತಿ ಲೇಔಟ್, ಅಡ್ಯಾರ್ ಪದವು, ನೀರು ಮಾರ್ಗ, ಮಂಗಳೂರು ಮತ್ತು ಗುರುರಾಜ್ (25) ತಂದೆ: ಸುರೇಂದ್ರ ವಾಸ: ಶಿವನಗರ, ಮೂಡು […]

ತೋಟ ಬೆಂಗ್ರೆಯ ಪ್ರಗತಿ ಮೈದಾನದ ಬಳಿ ಗಾಂಜಾ ಸೇವನೆ: ಓರ್ವನ ಬಂಧನ

Tuesday, December 11th, 2018
arrested

ಮಂಗಳೂರು: ಇತ್ತೀಚೆಗೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮಂಗಳೂರಿನ ತೋಟ ಬೆಂಗ್ರೆಯ ಪ್ರಗತಿ ಮೈದಾನದ ಬಳಿ ಗಾಂಜಾ ಸೇವಿಸುತ್ತಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬಿಜೈ ಚರ್ಚ್ ರೋಡ್ ಸಮೀಪದ ಎರಿಲ್ ಪಿರೇರಾ(28) ಬಂಧಿತ ಆರೋಪಿ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್, ಉಪ ಪೊಲೀಸ್ ಆಯುಕ್ತ (ಕಾ&ಸು) ಹನುಮಂತರಾಯ, ಉಪ ಪೊಲೀಸ್ ಆಯುಕ್ತೆ (ಅಪರಾಧ ಮತ್ತು ಸಂಚಾರ) ಉಮಾ ಪ್ರಶಾಂತ, ಮಂಗಳೂರು ಉತ್ತರ ವಿಭಾಗದ ಸಹಾಯಕ […]

ಕೊಲೆ ಪ್ರಕರಣ: ಅಪರಾಧಿಗೆ 8 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ

Wednesday, October 31st, 2018
court-complex

ಮಂಗಳೂರು: 2014ರಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬಜಾಲ್ ಜಲ್ಲಿಗುಡ್ಡೆ ಜಯರಾಜ್ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿಗೆ ಸೆಷನ್ಸ್ ನ್ಯಾಯಾಲಯವು ಎಂಟು ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತೇವರತೆಪ್ಪ ನಿವಾಸಿ ಮಾಲ್ತೇಶ್ ಅಲಿಯಾಸ್ ಟಿಕ್ಕಿ ಮೋಹನನಿಗೆ ಮಂಗಳೂರಿನ ಆರನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಎಂಟು ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಬಸ್ ಕಂಡಕ್ಟರ್ […]

ಗಾಂಜಾ ಸೇವಿಸಿದ ನಾಲ್ವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

Saturday, September 22nd, 2018
Manipal-police

ಮಣಿಪಾಲ : ಗಾಂಜಾ ಸೇವಿಸಿದ್ದ ಮಣಿಪಾಲದ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಸೆ.19ರಂದು ಸಂಜೆ ವೇಳೆ ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಾದ ರಿಷಿವೀರ್(20), ಪ್ರೀತಂ ಗುಪ್ತ(19), ಜಿ.ಪ್ರತೀಕಣ (20) ಹಾಗೂ ಸಾಯಿ ಚರಣ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದರು. ಇವರನ್ನು ಪರೀಕ್ಷಿಸಿದ ವೈದ್ಯರು ಈ ನಾಲ್ವರು ಕೂಡ ಗಾಂಜಾ ಸೇವಿಸಿರುವುದಾಗಿ ದೃಢ ಪತ್ರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಮ್ನಿಯಲ್ಲಿ ಗಾಂಜಾ ಪತ್ತೆ..ಆರೋಪಿ ಸೆರೆ!

Monday, July 30th, 2018
omni-ganja

ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಲಡ್ಕದಿಂದ ಬಿ.ಸಿ ರೋಡ್ ಕಡೆಗೆ ಸಂಚರಿಸುತ್ತಿದ್ದ ಓಮ್ನಿ ವಾಹನ ತಪಾಸಣೆ ಮಾಡಿದಾಗ ಓಮ್ನಿಯಲ್ಲಿ ಗಾಂಜಾ ಪತ್ತೆಯಾಗಿದೆ. ಬಂಟ್ವಾಳದ ಗೋಳ್ತಮಜಲುವಿನ ಅಲೀಮ್ ಎಂಬಾತ ಗಾಂಜಾ ಸಾಗಿಸುತ್ತಿದ್ದ ಆರೋಪಿ. ಮೆಲ್ಕಾರ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಓಮ್ನಿ ವಾಹನವನ್ನು ತಪಾಸಣಾ ಸ್ಥಳದಿಂದ ಸ್ವಲ್ಪ ದೂರ ನಿಲ್ಲಿಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಸುತ್ತುವರಿದು ಬಂಧಿಸಿದ್ದು, ಆತನ ಕಾರಿನಲ್ಲಿದ್ದ 2,33,550 ರೂ. ಮೌಲ್ಯದ 2 ಕಿಲೋ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಪೊಲೀಸರ ಸೆರೆ..!

Monday, July 23rd, 2018
police-nab

ಮಂಗಳೂರು: ಮಂಗಳೂರು ನಗರಕ್ಕೆ ಕೇರಳದಿಂದ ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಗಾಂಜಾ ಸಾಗಿಸುತ್ತಿದ್ದ ಕಾರು ಸಮೇತ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಬಳಿ ಕಾರನ್ನು ಪತ್ತೆ ಹಚ್ಚಿ ಅಕ್ರಮವಾಗಿ ಗಾಂಜಾವನ್ನು ಹೊಂದಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು ಕೃಷ್ಣಾಪುರದ ನಿವಾಸಿ ಕೇಶವ ಸನಿಲ್(47) ಎಂದು ಗುರುತಿಸಲಾಗಿದ್ದು, ಆತನಿಂದ 1.830 ಕೆಜಿ ಗಾಂಜಾ, ಮೊಬೈಲ್ […]

ಗಾಂಜಾ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

Monday, July 23rd, 2018
ganja-case

ಮಂಗಳೂರು: ಗಾಂಜಾ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿವೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬೋಂದೆಲ್ನ ಪಚ್ಚನಾಡಿ ಗ್ರಾಮದ ಸಾರಕೋಡಿಯ ಗೌರವ್ ಕೋಟ್ಯಾನ್ (25) ಬಂಧಿತ ಆರೋಪಿ. ಈತನ ವಿರುದ್ಧ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿತ್ತು. ಆರೋಪಿ ತಲೆಮರೆಸಿಕೊಂಡಿದ್ದರಿಂದ ಆತನ ಶೋಧ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದರು. ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ ಅವರ ನೇತೃತ್ವದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಆರೋಪಿಯು ಈ ಹಿಂದೆ ಮಂಗಳೂರು ದಕ್ಷಿಣ […]