Blog Archive

ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿ ರವಿಕುಮಾರ್

Friday, September 29th, 2017
ganja

ಮಂಗಳೂರು: ಕೊಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಪುತ್ತೂರು ಮುಕ್ರಂಪಾಡಿಯ ರವಿಕುಮಾರ್ (28) ಎಂಬಾತನನ್ನು ಬರ್ಕ್ ಪೊಲೀಸರು ಬಂಧಿಸಿದ್ದಾರೆ.ಆರೋಪಿಯಿಂದ 2,800 ರೂ. ಬೆಲೆಯ 115 ಗ್ರಾಂ. ಗಾಂಜಾ ಮತ್ತು 1,000 ರೂ.ಬೆಲೆಯ ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾಪತ್ತೆಯಾಗಿದೆ. ಕಾರಾಗೃಹದ ಬಳಿ ಸುಳಿದಾಡುತ್ತಿದ್ದ ಈತನನ್ನು ಸಂಶಯದಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದನ್ನು ಕೇರಳದ ಗಡಿ ತಲಪಾಡಿಯಿಂದ ಮಾರಾಟಕ್ಕೆ ತಂದಿರುವುದಾಗಿ ಆರೋಪಿ ರವಿ ಕುಮಾರ್‌ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಹಳೆ ಪ್ರಕರಣವೊಂದರ ಆರೋಪಿಯಾಗಿರುವ ಈತ 17 […]

ಶ್ರೀಲಂಕಾದಿಂದ ನವಮಂಗಳೂರು ಬಂದರಿಗೆ ಬಂದ ಭಾರಿ ಪ್ರಮಾಣದಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳು

Saturday, September 16th, 2017
ganja

ಮಂಗಳೂರು :  ನವಮಂಗಳೂರು ಬಂದರಿಗೆ ಶ್ರೀಲಂಕಾದಿಂದ ಬಂದಿರುವ ಬಂದ ಕಂಟೇನರ್ ಒಂದರಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಪತ್ತೆಯಾಗಿದೆ. ಗುರುವಾರ ಬಂದಿರುವ ಕಂಟೇನರ್ ನಲ್ಲಿ ಭಾರಿ ಪ್ರಮಾಣದಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು ಅದನ್ನು ಕೇಂದ್ರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ಕೊಲಂಬೊದಿಂದ ಹಡಗಿನ ಮೂಲಕ ಕೆಲವು ದಿನಗಳ ಹಿಂದೆ ಬಂದ ಕಂಟೇನರ್ ನಲ್ಲಿ ಇದು ಪತ್ತೆಯಾಗಿದೆ. ಶುಕ್ರವಾರ ಕಂಟೇನರ್ ನ ಎಸಿ ರಿಪೇರಿಗೆ ತೆರಳಿದ ತಾಂತ್ರಿಕ ಸಿಬ್ಬಂದಿಗಳು ಕಂಟೇನರ್ ನಲ್ಲಿ ಭಾರಿ ಪ್ರಮಾಣದ […]

ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ

Thursday, February 2nd, 2017
Ganja

ಮಂಗಳೂರು: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ನಗರದ ಕೂಳೂರು ಬಳಿ ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿಗಳಾದ ಬಿ.ಸಿ.ರೋಡ್ ಟೋಲ್‌ಗೇಟ್‌ನಲ್ಲಿ ಕೆಲಸ ಮಾಡುವ ಕಾರ್ತಿಕ್‌ರಾಜ್ (21) ಹಾಗೂ ನಗರದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಪೃಥ್ವಿ (20) ಬಂಧಿತರು. ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಾವೂರು ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ […]

ಗಾಂಜಾ ಸಾಗಿಸುತ್ತಿದ್ದ ಆರೋಪಿ ಬೈಕ್ ಸಮೇತ ಪೊಲೀಸರ ವಶಕ್ಕೆ

Saturday, December 17th, 2016
Ganja

ಪುತ್ತೂರು: ವಿಟ್ಲದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬೈಕ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬೈಕ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಬ್ಬಾಸ್ ಅಲಿಯಾಸ್ ಖಾಲಿದ್ ಬಂಧಿತ. ಸುಮಾರು 500 ಗ್ರಾಂ ಅಕ್ರಮ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬೈಕ್‌ನಲ್ಲಿ ಪುತ್ತೂರಿಗೆ ಗಾಂಜಾ ಸಾಗಿಸುತ್ತಿದ್ದ ಎನ್ನಲಾಗಿದೆ.

ಸಾಲ್ಮರದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

Friday, December 16th, 2016
Mahammad Ashraf

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸಾಲ್ಮರದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಮಹಮ್ಮದ್ ಅಶ್ರಫ್(37) ಗಾಂಜಾ ಸಾಗಣೆ ಪ್ರಕರಣದಡಿ ಬಂಧಿತನಾದ ವ್ಯಕ್ತಿ. ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪುತ್ತೂರು ಪೊಲೀಸರು ಗುರುವಾರ ಸಂಜೆ ದಾಳಿ ನಡೆಸಿದಾಗ ಪಡ್ನೂರು ಗ್ರಾಮದ ಶಾಂತಿನಗರದ ಮಹಮ್ಮದ್ ಅಶ್ರಫ್ ಬಲೆಗೆ ಬಿದ್ದಿದ್ದಾನೆ. ಆತನ ಬಳಿ 500 ಗ್ರಾಂ ಗಾಂಜಾ ಪತ್ತೆಯಾಗಿದೆ. ನಗರ ಠಾಣಾ […]

ಜೈಲಿನಲ್ಲಿ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದ ಮೂವರ ಬಂಧನ

Thursday, December 1st, 2016
Ganja

ಮಂಗಳೂರು: ಜೈಲಿನಲ್ಲಿ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದ ಮೂವರನ್ನು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಬಂಧಿಸಲಾಗಿದೆ. ಸ್ಟೀವನ್, ಪ್ರಶಾಂತ್, ಸೂರಜ್ ಬಂಧಿತ ಆರೋಪಿಗಳು. ಇವರು ತೊಕ್ಕೊಟ್ಟು ಸಮೀಪದ ಕುತ್ತಾರ್ ನಿವಾಸಿಗಳು. ಇವರು ಉಳ್ಳಾಲ ಮೂಲದ ಕೈದಿಗೆ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜೈಲು ಸಿಬಂದಿ ಮಾಹಿತಿಯಂತೆ ಬರ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Thursday, November 17th, 2016
Muhammad

ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯ ಹರೇಕಳ ಗ್ರಾಮದ ನ್ಯೂಪಡ್ಪು ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಕೊಣಾಜೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಜನಾಡಿ ಮಸೀದಿ ಸಮೀಪದ ನಿವಾಸಿ ಮಹಮ್ಮದ್(40) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 250 ಗ್ರಾಂ ತೂಕದ ಗಾಂಜಾ ಮತ್ತು ಗಾಂಜಾವನ್ನು ಅಡಗಿಸಿಟ್ಟಿದ್ದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಸ್ನಲ್ಲಿ ಸಾಗಿಸುತ್ತಿದ್ದ 5.200 ಕಿಲೋ ಗಾಂಜಾ ಸಹಿತ ಚೌಕಿ ನಿವಾಸಿ ಸೆರೆ

Thursday, August 25th, 2016
Ganja

ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ 5.200 ಕಿಲೋ ಗಾಂಜಾ ಸಹಿತ ಓರ್ವನನ್ನು ವಾಮಂಜೂರು ಚೆಕ್‌ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಚೆಕ್‌ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ. ಮಂಗಳವಾರ ಸಂಜೆ 4 ಗಂಟೆಗೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನ್ನು ತಪಾಸಣೆ ನಡೆಸುತ್ತಿದ್ದಾಗ ಚೌಕಿ ಆಜಾದ್ ನಗರ ನಿವಾಸಿ ಮೊಹಮ್ಮದ್‌ರ ಪುತ್ರ ಅಹಮ್ಮದ್(45) ಎಂಬಾತನಿಂದ ಗಾಂಜಾ ವಶಪಡಿಸಲಾಗಿದ್ದು ಈತನನ್ನು ಸೆರೆಹಿಡಿದಿದ್ದಾರೆ. ಈ ಮಾಲನ್ನು ಕಾಸರಗೋಡು ರೈಲ್ವೇ […]

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80 ಕಿಲೋ ಗಾಂಜಾ ವಶಕ್ಕೆ

Tuesday, February 16th, 2016
Duster Ganja

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80ಕಿಲೋ ಗಾಂಜಾವನ್ನು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಓಡಿ ಪರಾರಿಯಾಗಿದ್ದಾರೆ. ಸೋಮವಾರ ಸಂಜೆ 3 ಘಂಟೆ ಸಮಾರಿಗೆ ಕುಂಜತ್ತೂರು ತೂಮಿನಾಡು ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಸಂಶಯಗೊಂಡ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸುವ ವೇಳೆ ಪೋಲೀಸರು ಬೆನ್ನಟ್ಟಿದ ವೇಳೆ ಕಾರನ್ನು ನಿಲ್ಲಿಸಿ ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಎಲ್ 14- […]

ಕುಂಬಳೆ ಪೊಲೀಸರಿಂದ ಗಾಂಜಾ ಸಹಿತ ವ್ಯಕ್ತಿಯ ಬಂಧನ

Tuesday, February 9th, 2016
Sharath Kumar

ಕುಂಬಳೆ: 470 ಗ್ರಾಂ ಗಾಂಜಾ ಸಹಿತ ಸುಳ್ಯ ಕಾಂತಮಂಗಿಲದ ದೇವರಾಯ ಎಂಬವರ ಪುತ್ರ ಶರತ್ ಕುಮಾರ್(54)ನನ್ನು ಶಿರಿಯಾ ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಕುಂಬಳೆ ಸಿ.ಐ ಅನೂಪ್ ಕುಮಾರ್ ಗಸ್ತು ತಿರುಗುತ್ತಿದ್ದಾಗ ಸಂಶಯಾಸ್ಪದವಾಗಿ ಶರತ್ ಕುಮಾರನನ್ನು ವಶಕ್ಕೆ ತೆಗೆಯಲಾಯಿತು.ಬಳಿಕ ನಡೆಸಿದ ತಪಾಸಣೆಯಲ್ಲಿ 470 ಗ್ರಾಂ ಗಾಂಜಾ,700 ರೂ.ನಗದು ಪತ್ತೆಹಚ್ಚಲಾಗಿದೆ.ಈ ಹಿನ್ನೆಲೆಯಲ್ಲಿ ಬಂಧಿಸಿ ದೂರು ದಾಖಲಿಸಲಾಗಿದ್ದು ಶರತ್ ಕುಮಾರ್ ನ ವಿರುದ್ದ ಸುಳ್ಯ ಠಾಣೆಯಲ್ಲಿ 2011 ರಲ್ಲಿ ಗಾಂಜಾ ಸಾಗಾಟ ಆರೋಪದ ದೂರು ದಾಖಲಿಸಲಾಗಿತ್ತೆಂದು ತಿಳಿದುಬಂದಿದೆ.