ಕದ್ರಿ ದೇವಾಲಯದಲ್ಲಿ ಗುಂಡು ಸಿಡಿತ, ಹಿನ್ನಲೆ ಇನ್ನೂ ನಿಗೂಢ
Monday, April 1st, 2013ಮಂಗಳೂರು : ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹೊರ ಅಂಗಣದಲ್ಲಿ ಫೈರ್ ಆದ ಗುಂಡಿನ ತುಣುಕೊಂದು ಭಾನುವಾರ ಪತ್ತೆಯಾಗಿ ದೇವಾಲಯದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಕಂಡುಬಂಡಿತು. ಮಂಗಳೂರಿನಲ್ಲಿ ಅವಿನಾಶ್ ಮೊಸಾಯಿಕ್ ಉದ್ಯಮ ನಡೆಸುತ್ತಿರುವ ಉದ್ಯಮಿ ಪ್ರಕಾಶ್ ಶೇರಿಗಾರ್ ಅವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರವನ್ನು ಸಂಪ್ರದಾಯದಂತೆ ದೇವರ ಮುಂದಿಡಲು ಭಾನುವಾರ ಕುಟುಂದ ಸಮೇತರಾಗಿ ಅವರು ಕದ್ರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಕದ್ರಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಗುಡಿಗೆ ಪ್ರವೇಶಿಸುವ […]