ನೇತ್ರಾವತಿ ನದಿಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣು
Monday, December 19th, 2016ಮಂಗಳೂರು: ಮಹಿಳೆಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಕಂಕನಾಡಿ ಬೈಪಾಸ್ ರಸ್ತೆಯ ವಿಜಯ್ ಎಂಬುವರ ಪತ್ನಿ ತುಳಸಿ (51) ಆತ್ಮಹತ್ಯೆಗೆ ಶರಣಾದ ಮಹಿಳೆ. ಜೆಪ್ಪು ಸಮೀಪ ಬಸ್ಸಿನಿಂದ ಇಳಿದ ಮಹಿಳೆ ನೇತ್ರಾವತಿ ಸೇತುವೆವರೆಗೆ ನಡೆದುಕೊಂಡು ಬಂದಿದ್ದು, ಅಲ್ಲಿ ವ್ಯಾನಿಟಿ ಬ್ಯಾಗ್ ಹಾಗೂ ಚಪ್ಪಲಿಯನ್ನು ಇಟ್ಟು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ತುಳಸಿ ನದಿಗೆ ಹಾರುವುದನ್ನು ಕಂಡ ದ್ವಿಚಕ್ರ ಸವಾರರೊಬ್ಬರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ […]