ಸೆ. 11ರಂದು ಕೃಷ್ಣಜನ್ಮಾಷ್ಟಮಿ; ಉಡುಪಿ ರಥಬೀದಿಯಲ್ಲಿ ಗುರ್ಜಿ ನೆಡುವ ಮುಹೂರ್ತ
Tuesday, August 25th, 2020
ಉಡುಪಿ: ಕೃಷ್ಣ ಲೀಲೋತ್ಸವದ ಪೂರ್ವತಯಾರಿಯ ಅಂಗವಾಗಿ ಸೋಮವಾರ ರಥಬೀದಿಯಲ್ಲಿ ಗುರ್ಜಿ ನೆಡುವ ಮುಹೂರ್ತ ನೆರವೇರಿತು. ಪರ್ಯಾಯ ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಕೃಷ್ಣ ಲೀಲೋತ್ಸವ ನಡೆಯಲಿದೆ. ಸೆ. 11ರಂದು ಕೃಷ್ಣಮಠದಲ್ಲಿ ಕೃಷ್ಣಜನ್ಮಾಷ್ಟಮಿ ನಡೆಯಲಿದೆ. ಗುರ್ಜಿ ನೆಡುವ ವೇಳೆ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಾರುಪತ್ಯಗಾರರಾದ ಮುದರಂಗಡಿ ಲಕ್ಷ್ಮೀಶ ಭಟ್, ಕೊಠಾರಿಗಳಾದ ಶ್ರೀರಮಣ ಆಚಾರ್ಯ, ವ್ಯವಸ್ಥಾಪಕ ಗೋವಿಂದರಾಜ್, ಪದ್ಮನಾಭ ಮೇಸ್ತ್ರಿ, ಪ್ರದೀಪ್ ಕುಮಾರ್ ಇದ್ದರು.