Blog Archive

ರಾಹುಲ್ ಗಾಂಧಿ ಮುಂದೆ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ

Wednesday, March 21st, 2018
janardhana-poojary

ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಸಂಜೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದಿಂದ ವಾಪಾಸಾಗುವಾಗ ರಾಹುಲ್ ಗಾಂಧಿಯ ಮುಂದೆಯೇ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ನೀವೇ ಊಹಿಸಿ ಪ್ರವಾಸದ ಭಾಗವಾಗಿ ರಾಹುಲ್ ಗಾಂಧಿ ಸಂಜೆ ನೆಹರೂ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಂತರ ರೊಸಾರಿಯೋ ಚರ್ಚ್ ಗೆ ಭೇಟಿ ನೀಡಿದ ಅವರು ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ತೆರಳಿದರು. ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ […]

ಬಂಗಾರಪ್ಪ ಬಗ್ಗೆ ಬರೆದಿದ್ದೆಲ್ಲ ಸತ್ಯ: ಪೂಜಾರಿ ಮತ್ತೆ ತಡವಿಕೊಂಡರು!

Wednesday, February 14th, 2018
bangarappa

ಮಂಗಳೂರು: “ನನ್ನ ಆತ್ಮಚರಿತ್ರೆಯಲ್ಲಿ ಏನು ಬರೆದಿದ್ದೇನೋ ಅವೆಲ್ಲವೂ ಸತ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸತ್ಯವನ್ನೇ ಹೇಳಿರುವುದು” ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮರುಮುದ್ರಿತ ‘ಸಾಲ ಮೇಳದ ಸಂಗ್ರಾಮ’ ಬಿಡುಗಡೆಗೊಳಿಸಿ ಅವರು ಮಾತನಾಡಿ, ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವುದೆಲ್ಲ ಸುಳ್ಳು ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರಿಗೆ ವೇದಿಕೆಯಿಂದಲೇ ಉತ್ತರಿಸಿದರು. ಪೂಜಾರಿ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ ಎಂದ […]

ನನ್ನ ಆತ್ಮಕತೆಯಲ್ಲಿ ಸುಳ್ಳಿಲ್ಲ… ಜನಾರ್ದನ ಪೂಜಾರಿ

Wednesday, February 14th, 2018
janardhan-poojary

ಮಂಗಳೂರು: ನನ್ನ ಆತ್ಮಕತೆಯಲ್ಲಿ ಸುಳ್ಳಿಲ್ಲ. ಇದಕ್ಕಾಗಿಯೇ ನಾರಾಯಣ ಗುರು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥ ಹಾಗೂ ಸರ್ವ ದೇವರ ಕಾಲಿಗೆ ಸಮರ್ಪಿಸಿ ಅದನ್ನು ಬಿಡುಗಡೆ ಮಾಡಿದ್ದೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನಲ್ಲಿಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಹೇಳಿದ್ದಾರೆ. ಜನಾರ್ದನ ಪೂಜಾರಿ ಅವರ ಆತ್ಮಕತೆ `ಸಾಲಮೇಳದ ಸಂಗ್ರಾಮ’ದ ಮರು ಮುದ್ರಿತ ಕೃತಿಯ ಅನಾವರಣ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲೂ ಜನಾರ್ದನ ಪೂಜಾರಿ ಅವರು, ಸಚಿವ ರಮಾನಾಥ ರೈ ವಿರುದ್ಧ ಹೆಸರು ಹೇಳದೆ ಅಸಮಾಧಾನ […]

ಜನಾರ್ದನ ಪೂಜಾರಿ ಓರ್ವ ನೈಜ ಆರೆಸ್ಸೆಸ್ಸಿಗ: ಮಧು ಬಂಗಾರಪ್ಪ ಆರೋಪ

Friday, February 9th, 2018
bangarappa

ಮಂಗಳೂರು: ಕರಾವಳಿಯಲ್ಲಿ ಗಲಾಟೆಗಳಾಗಲು, ಬಿಲ್ಲವ ಯುವಕರು ದಾರಿ ತಪ್ಪಲು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರೇ ಕಾರಣ. ಕಾರಣಗಳಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿರುವ ಬಿಲ್ಲವ ಯುವಕರ ಬಗ್ಗೆ ಅವರಿಗೆ ಕಿಂಚಿತ್ತೂ ಕನಿಕರ ಇಲ್ಲ. ನಾನು ತಿಳಿದಮಟ್ಟಿಗೆ ಜನಾರ್ದನ ಪೂಜಾರಿ ಓರ್ವ ನೈಜ ಆರೆಸ್ಸಿಸ್ಸಿಗ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪೂಜಾರಿ ಆತ್ಮಚರಿತ್ರೆ ಎನ್ನಲಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಪಕ್ಕದಲ್ಲಿಟ್ಟುಕೊಂಡೇ […]

‘ಇಂದಿರಾ ಗಾಂಧಿಗೆ ಬಂಗಾರಪ್ಪ ಹೊಡೆಯಲು ಹೋಗಿದ್ದರು ಅನ್ನೋದು‌ ಸುಳ್ಳು’

Friday, February 9th, 2018
indira-gandhi

ಮಂಗಳೂರು: ಸಾಲಮೇಳದ ಸಂಗ್ರಾಮ’ದಲ್ಲಿ ಪ್ರಸ್ತಾಪವಾಗಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಸಾರೆಕೊಪ್ಪ ಬಂಗಾರಪ್ಪ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಮಧು ಬಂಗಾರಪ್ಪ ವ್ಯಗ್ರರಾಗಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಇಂದಿರಾಗಾಂಧಿಯವರಿಗೆ ಬಂಗಾರಪ್ಪ ಹೊಡೆಯಲು ಹೋಗಿದ್ದಾರೆ ಅನ್ನುವುದು ಸುಳ್ಳು. ಹೊಡೆಯುವ ಚಾಳಿ ಬಂಗಾರಪ್ಪನರದ್ದಲ್ಲ. ಹೊಡೆಯುವ ಚಾಳಿ ಕರಾವಳಿಯ ಜನರದ್ದು. ಜನಾರ್ದನ ಪೂಜಾರಿಯಂತವರಿಂದ ಕರಾವಳಿಯಲ್ಲಿ ಹೊಡೆಯುವ ಚಾಳಿ ಬಂದಿದೆ,” ಎಂದು ಕಿಡಿಕಾರಿದರು. ಜನಾರ್ದನ ಪೂಜಾರಿ ಆತ್ಮಕಥೆಯಲ್ಲಿನ ಕೆಲವು ಸ್ಫೋಟಕ ಸತ್ಯಗಳು! “ಜನಾರ್ದನ ಪೂಜಾರಿ ಗೆದ್ದಿರೋದಕ್ಕಿಂತ ಸೋತಿರೋದು ಜಾಸ್ತಿ. ಜನಾರ್ದನ […]

ಗಾಂಧೀಜಿಗೆ ಅವಮಾನವಾದರೂ ಪ್ರತಿಭಟನೆಯಾಗುತ್ತಿಲ್ಲ: ದಿನೇಶ್‌ ಅಮಿನ್‌ಮಟ್ಟು

Wednesday, January 31st, 2018
gandhiji-1

ಮಂಗಳೂರು: ಮಹಾತ್ಮ ಗಾಂಧೀಜಿಗೆ ಅವಮಾನ, ದೂಷಣೆ ಮಾಡಿದರೂ ಕೂಡಾ ಪ್ರತಿಭಟನೆಯಾಗುತ್ತಿಲ್ಲ. ಅದೇ ಬಸವಣ್ಣ, ಅಂಬೇಡ್ಕರ್‌‌ಗೆ ಅವಮಾನ ಮಾಡಿದರೆ ಪ್ರತಿಭಟನೆಯಾಗುತ್ತಿದೆ. ಇದು ಗಾಂಧೀಜಿಗೆ ಬಂದ ದುಸ್ಥಿತಿ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು. ನಗರದ ನೆಹರೂ ಮೈದಾನದಲ್ಲಿ ನಡೆದ `ಸೌಹಾರ್ದತೆಗಾಗಿ ಕರ್ನಾಟಕ’ ವತಿಯಿಂದ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರನ್ನು ವಿವಿಧ ವರ್ಗದವರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿರುವುದರಿಂದ ಗಾಂಧೀಜಿಗೆ ಈ ಸ್ಥಿತಿ ಬಂದಿದೆ. ಗಾಂಧೀಜಿ ಒಂದು ವರ್ಗಕ್ಕೆ ಸೇರಿದವರಲ್ಲ. ಅದು ಅವರ […]

ಜನಾರ್ದನ ಪೂಜಾರಿ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ ಬಿಡುಗಡೆ

Saturday, January 27th, 2018
salamela

ಮಂಗಳೂರು: ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ ಶುಕ್ರವಾರ ಲೋಕಾರ್ಪಣೆಗೊಂಡಿತು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. ತಮ್ಮ ಸುದೀರ್ಘ 45 ವರ್ಷಗಳ ರಾಜಕೀಯ ಜೀವನವನ್ನು ತಮ್ಮ ಈ ಆತ್ಮಕಥೆಯಲ್ಲಿ ಪೂಜಾರಿ ದಾಖಲಿಸಿದ್ದಾರೆ. ಬಿಡುಗಡೆ ದಿನದ ಪ್ರಯುಕ್ತ 300 ರೂ. ಪುಸ್ತಕ 50 ರೂ.ಗೆ ವಿತರಣೆ ಮಾಡಲಾಯಿತು. ಪುಸ್ತಕ ಕೊಳ್ಳಲು ಜನಾರ್ದನ ಪೂಜಾರಿಯವರ ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದು ಕಂಡು ಬಂತು. ಕಾರ್ಯಕ್ರಮದಲ್ಲಿ […]

ಜ. 26: “ಸಾಲ ಮೇಳದ ಸಂಗ್ರಾಮ” ಅನಾವರಣ

Tuesday, January 23rd, 2018
autobiography

ಮಂಗಳೂರು: ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆಯುಳ್ಳ, ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್‌ ಮುಖಂಡ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಆತ್ಮಕಥೆ “ಸಾಲ ಮೇಳದ ಸಂಗ್ರಾಮ’ ಜ. 26ರಂದು ಸಂಜೆ 5.30ಕ್ಕೆ ಕುದ್ರೋಳಿ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಬಿಡುಗಡೆಗೊಳ್ಳಲಿದೆ. ಸೋಮವಾರ ಕುದ್ರೋಳಿ ಕ್ಷೇತ್ರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಿ. ಜನಾರ್ದನ ಪೂಜಾರಿ ಅವರು, ಪುಸ್ತಕ ಬಿಡುಗಡೆ ಮಾಡು ವಂತೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕೋರಿ ಕೊಂಡಿದ್ದೆವು. ಆದರೆ […]

ದಕ್ಷಿಣ ಕನ್ನಡ ಎಸ್‌ಪಿ ವರ್ಗಾವಣೆ : ಪೂಜಾರಿ ವಾಗ್ದಾಳಿ!

Tuesday, January 23rd, 2018
sudheer-kumar

ಮಂಗಳೂರು:’ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪದೇ-ಪದೇ ವರ್ಗಾವಣೆ ಮಾಡುವುದು ಸರಿಯಲ್ಲ. ವರ್ಗಾವಣೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಇದ್ದರೆ ಅದರ ಪರಿಣಾಮವನ್ನು ಅವರು ಅನುಭವಿಸುತ್ತಾರೆ’ ಎಂದು ಜನಾರ್ದನ ಪೂಜಾರಿ ಹೇಳಿದರು. ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ತಪ್ಪು ನಿರ್ಧಾರಗಳ ಬಗ್ಗೆ ಮುಖ್ಯಮಂತ್ರಿ, ಸಚಿವರನ್ನು ಹೇಳುವವರು, ಕೇಳುವವರು ಇಲ್ಲವೇ ? ಎಂದು ಪ್ರಶ್ನಿಸಿದರು’. ‘ದಕ್ಷಿಣ ಕನ್ನಡದ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರ ವರ್ಗಾವಣೆ ಹಿಂದೆ ಮುಖ್ಯಮಂತ್ರಿಗಳ ಕೈವಾಡವಿದ್ದರೆ ಅದನ್ನು ನಾನು ಖಂಡಿಸುತ್ತೇನೆ. ಜಿಲ್ಲಾ […]

ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೂ ಸಿದ್ಧ: ರಮಾನಾಥ ರೈ

Monday, January 1st, 2018
ramanath

ಮಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರಿಗೆ ಅವಹೇಳನ ಮಾಡಲಾಗಿದೆ ಎಂಬ ವಿಚಾರದ ಬಗ್ಗೆ ಅರಣ್ಯ ಸಚಿವ ಬಿ. ರಮಾನಾಥ ರೈ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಮಾನಾಥ್‌ ರೈ, ನಾನು ಜನಾರ್ದನ ಪೂಜಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ರಾಜಕೀಯ ಕಾರಣಕ್ಕೆ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೂ ಸಹ ಸಿದ್ಧ ಎಂದಿದ್ದಾರೆ. ಈ ಬಗ್ಗೆ ಪೂಜಾರಿಯವರಿಗೂ ವೈಯಕ್ತಿಕವಾಗಿ ಹೇಳಿದ್ದೇನೆ. ಅವರು ಹಿರಿಯರು, ಅವರ ಮೇಲೆ ನನಗೆ ಅಪಾರ ಗೌರವ […]