Blog Archive

ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ: ಪೇಜಾವರ ಶ್ರೀ

Tuesday, June 5th, 2018
pejwar-shree

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಸಂಪೂರ್ಣ ಸಮಾಧಾನ ಇಲ್ಲ ಅಂತಷ್ಟೆ ನಾನು ಹೇಳಿದ್ದೆ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಸ್ಪಷ್ಟನೆ ನೀಡಿದರು. ಮೈಸೂರು ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ.‌ ಕಪ್ಪು ಹಣ, ಗಂಗಾ ನದಿ ಶುದ್ಧೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ […]

ಮೊದಲ ಹಂತದಲ್ಲಿ ಜೆಡಿಎಸ್‌ನ 9 ಶಾಸಕರಿಗೆ ಸಚಿವ ಸ್ಥಾನ: ಹೆಚ್.ಡಿ.ಕುಮಾರಸ್ವಾಮಿ

Tuesday, June 5th, 2018
kumarswamy-2

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲ ರಚನೆಯ ಮೊದಲ ಹಂತದಲ್ಲಿ ಜಾತ್ಯತೀತ ಜನತಾ ದಳದ 9 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ತಮ್ಮ ಪಕ್ಷದ 8 ರಿಂದ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ಚೀಕರಿಸಲಿದ್ದಾರೆ. ಇನ್ನು ಮೂರು ನಾಲ್ಕು ಸಚಿವ ಸ್ಥಾನಗಳ ಬಗ್ಗೆ ಆಯ್ಕೆ ನಡೆಯಲಿದೆ. ಸಂಪುಟದಲ್ಲಿ ಸ್ಥಾನ ಮತ್ತು ಖಾತೆಗಳ ಹಂಚಿಕೆ ಬಗ್ಗೆ ಜೆಡಿಎಸ್ ಶಾಸಕರಲ್ಲಿ […]

ರಾಮನಗರ ಕ್ಷೇತ್ರದಿಂದ ಮಧು ಬಂಗಾರಪ್ಪ ಕಣಕ್ಕೆ..?

Saturday, June 2nd, 2018
madhu-bangarappa

ರಾಮನಗರ: ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಹೊಂದಾಣಿಕೆಯಾಗಿ ಏಕೈಕ ಅಭ್ಯರ್ಥಿ ನಿಲ್ಲಿಸುವ ಇಂಗಿತ ವ್ಯಕ್ತಪಡಿಸಿವೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧುಬಂಗಾರಪ್ಪ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮಧುಬಂಗಾರಪ್ಪ ಅಭ್ಯರ್ಥಿಯಾಗುವ ಬಗ್ಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿದ್ದು, ಇಬ್ಬರೂ ಮುಖಂಡರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರದಿಂದ ಸಿಎಂ‌ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿ ಗೆದ್ದಿದ್ದರು. […]

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಕೊನೆಗೂ ಖಾತೆ ಹಂಚಿಕೆ… ಯಾವ ಪಕ್ಷಕ್ಕೆ ಯಾವ ಖಾತೆ?

Friday, June 1st, 2018
g-parameshwara

ಬೆಂಗಳೂರು: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಕೊನೆಗೂ ಖಾತೆ ಹಂಚಿಕೆ ಮಾಡಿಕೊಂಡಿವೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಹಾಗೂ ಡಿಸಿಎಂ ಪರಮೇಶ್ವರ್‌ ಬೆಳಗ್ಗೆ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಇಬ್ಬರ ನಡುವೆ ಖಾತೆ ಹಂಚಿಕೆ ನಿರ್ಧಾರಕ್ಕೆ ಬರಲಾಯ್ತು. ಇದೀಗ ಒಪ್ಪಂದ ಪ್ರಕಾರ ಜೆಡಿಎಸ್‌ಗೆ 12 ಹಾಗೂ ಕಾಂಗ್ರೆಸ್‌ 22 ಖಾತೆಗಳನ್ನು ಹಂಚಿಕೊಳ್ಳಲಾಗಿದೆ. ಖಾತೆಗಳ ಹಂಚಿಕೆ ವಿವರ ಇಂತಿದೆ: ಜೆಡಿಎಸ್‌: 1. ಮಾಹಿತಿ, ಇಂಟೆಲಿಜೆನ್ಸ್‌‌, ಪ್ಲಾನಿಂಗ್‌ ಆ್ಯಂಡ್‌ ಸ್ಟ್ಯಾಟಿಟಿಕ್ಸ್‌‌, 2. ಹಣಕಾಸು ಮತ್ತು ಅಬಕಾರಿ […]

ಮಧ್ಯಾಹ್ನದ ಹೊತ್ತಿಗೆ ರೈತರಿಗೆ ಗುಡ್ ನ್ಯೂಸ್: ಜಿ.ಟಿ. ದೇವೇಗೌಡ

Wednesday, May 30th, 2018
g-t-devegowda

ಬೆಂಗಳೂರು: ರೈತರ ಸಾಲಮನ್ನ ಕುರಿತು ಇಂದು ಸಿಎಂ ನಿರ್ಧಾರ ಪ್ರಕಟಿಸಲಿರುವ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಭೇಟಿ ಮಾಡಿ ಚರ್ಚಿಸಿದರು. ಜೆಪಿ ನಗರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ಅವರು, ಕೆಲ ಸಮಯ ಸಿಎಂ ಹೆಚ್‌ಡಿಕೆ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ ನಂತರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಅವರನ್ನು ಭೇಟಿ ಮಾಡಿದ್ದೇನೆ ಎಂದರು. ಅಲ್ಲದೆ, ಮಧ್ಯಾಹ್ನದ […]

ಶುರವಾಯ್ತು ನೋಡಿ, ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಹಗ್ಗಜಗ್ಗಾಟ

Saturday, May 26th, 2018
Kumara swamy

ಬೆಂಗಳೂರು : ಮೈತ್ರಿ ಸರ್ಕಾರ ನಡೆಸಿರುವ ಕಾಂಗ್ರೆಸ್- ಜೆಡಿಎಸ್ ನಾಯಕರು ಈಗಾಗಲೇ 22:12ರ ಅನುಪಾತದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದು, ಖಾತೆ ಹಂಚಿಕೆ ವಿಚಾರವಾಗಿ ಹಗ್ಗ ಜಗ್ಗಾಟ ನಡೆಸಿದ್ದಾರೆ. ಪ್ರಮುಖ ಖಾತೆ ನಮಗೇ ಬೇಕೆಂದು ದೇವೇಗೌಡರಿಗೆ ಈಗಾಗಲೇ ಕಾಂಗ್ರೆಸ್ಗೆ ಪಟ್ಟಿ ಕಳುಹಿಸಿದ್ದು, ಉಭಯ ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ. ಇನ್ನು ಹಣಕಾಸು, ಲೋಕೋಪಯೋಗಿ, ಸಮಾಜ ಕಲ್ಯಾಣ, ಇಂಧನ, ಗೃಹ ಇಲಾಖೆಗಳು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ತಿಳಿಸಿದರೆ ಹಣಕಾಸು, ಲೋಕೋಪಯೋಗಿ, ಇಂಧನ ಖಾತೆಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಸರ್ಕಾರ ರಚನೆಯಾಗಿನಿಂದ […]

2ನೇ ಬಾರಿಗೆ ಸ್ಪೀಕರ್‌ ಸ್ಥಾನ ಅಲಂಕರಿಸಿದ ರಮೇಶ್‌ ಕುಮಾರ್‌

Friday, May 25th, 2018
ramesh-kumar

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿ ಕಾಂಗ್ರೆಸ್ ಪಕ್ಷದ ಕೆ.ಆರ್.ರಮೇಶ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆ ಕಲಾಪ ಮಧ್ಯಾಹ್ನ 12.20ರ ಸುಮಾರಿಗೆ ಆರಂಭವಾಗುತ್ತಿದ್ದಂತೆಯೇ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಸ್ಪೀಕರ್ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಸಮ್ಮತಿ ಇರುವುದಾಗಿ ಸುರೇಶ್ […]

ಇಂದೇ ಸಾಲಮನ್ನಾ ಘೋಷಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

Friday, May 25th, 2018
yedeyurappa

ಬೆಂಗಳೂರು: ಇಂದಿನ ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಲಿಲ್ಲವೆಂದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು. ವಿಧಾನಸಭೆ ಕಲಾಪಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಈಗ ಬಹುಮತ ಇಲ್ಲ ಸಾಲಮನ್ನಾ ಮಾಡಲಾಗಲ್ಲ ಎಂಬ ಮಾತುಗಳನ್ನು ಆಡುತ್ತಿದ್ದಾರೆ, ಆದರೆ ನಾವು ಹಾಗಾಗಲು ಬಿಡುವುದಿಲ್ಲ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು. ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ, ಉಲ್ಲಂಘಿಸುವಂತಿಲ್ಲ ‘ಬಿಜೆಪಿಯ ಎಲ್ಲ ಶಾಸಕರು ಸಿಂಹದ ಮರಿಗಳಂತೆ ವಿಧಾನಸಭೆಯಲ್ಲಿ ಕೂತು ಸರ್ಕಾರದ […]

ಬಹುಮತ ಸಾಬೀತಿಗೆ ಯಾವುದೇ ಭಯ ಇಲ್ಲ: ಸಿಎಂ ಹೆಚ್.ಡಿ.ಕುಮಾರಸ್ವಾಮಿ

Friday, May 25th, 2018
kumarswamy

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತು ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತಂದೆ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು. ಪದ್ಮನಾಭನಗರದಲ್ಲಿರುವ ಗೌಡರ ನಿವಾಸ ಅಮೋಘಕ್ಕೆ ಆಗಮಿಸಿದ ಹೆಚ್‌ಡಿಕೆ, ಬಹುಮತ ಸಾಬೀತುಪಡಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ದೇವೇಗೌಡರು ಹಲವು ಮಹತ್ವದ ಸಲಹೆಗಳನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಬಹುಮತ ಸಾಬೀತಿಗೆ ಯಾವುದೇ ಭಯ ಇಲ್ಲ ಎಂದು ಹೇಳಿದರು. ನಂತರ ಸಿಎಂ ಗೃಹ ಕಚೇರಿ ಕೃಷ್ಣಾಗೆ […]

ಜೆಡಿಎಸ್ -ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿ ಒಂಬತ್ತು ದಿನಗಳಿಂದಲೂ ಕೂಡಿ ಹಾಕಿದರು

Thursday, May 24th, 2018
resort

ಬೆಂಗಳೂರು : ಬಿಜೆಪಿ ವಿಶ್ವಾಸ ಮತ ಯಾಚನೆ ಮಾಡದೇ ಸದನ ದಿಂದ ಹೊರನಡೆದ ಮೇಲೆ ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿ ಕುಮಾರ ಸ್ವಾಮಿಗೆ ಮುಖ್ಯ ಮಂತ್ರಿ ಆಸೆ ತೋರಿಸಿ ಹೇಗಾದರೂ ಮಾಡಿ ರಾಜ್ಯಭಾರ  ಮಾಡಬೇಕು ಎನ್ನುವ ಆತುರದಲ್ಲಿರುವ ಕಾಂಗ್ರೆಸ್ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಗರದ ರೆಸಾರ್ಟ್ ವೊಂದರಲ್ಲಿ ಇರಿಸಿದ್ದಾರೆ, ಚುನಾವಣೆಯಲ್ಲಿ ಆತಂತ್ರ ಫಲಿತಾಂಶ ದೊರೆತ ನಂತರ ಕಳೆದ ಒಂಬತ್ತು ದಿನಗಳಿಂದಲೂ ಶಾಸಕರು ಅವರ ಕುಟುಂಬದಿಂದ ದೂರ ಉಳಿದಿದ್ದಾರೆ. […]