ಇಂದು ಸಿಗಡಿ ವೈರಸ್ ಪತ್ತೆಹಚ್ಚುವ ಡಯಾಗ್ನಾಸ್ಟಿಕ್ ಕಿಟ್ ಬಿಡುಗಡೆ

Saturday, March 8th, 2014
MNC-Fish

ಮಂಗಳೂರು: ಮಂಗಳೂರು ಮೀನುಗಾರಿಕೆ ಕಾಲೇಜು ಹೈಬ್ರಿಡೋಮಾ ಟೆಕ್ನಾಲಜಿ ಬಳಸಿ ಅಭಿವೃದ್ಧಿಪಡಿಸಿದ ಸಿಗಡಿಯಲ್ಲಿನ ವೈರಸ್ ಪತ್ತೆಹಚ್ಚುವ ಡಯಾಗ್ನಾಸ್ಟಿಕ್ ಕಿಟ್ ಮಾ. 8 ರಂದು ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದಿಲ್ಲಿ ಭಾರತ ಕೃಷಿ ಅನುಸಂದಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್ ಅವರು ಡಯಾಗ್ನಾಸ್ಟಿಕ್ ಕಿಟ್‌ನ್ನು ಮುಂಬೈನ ಫ್ರಾನ್ಸ್ ಅಂತಾರಾಷ್ಟ್ರೀಯ ವಿರ್ಬ್ಯಾಕ್ ಸಂಸ್ಥೆಗೆ ಹಸ್ತಾಂತರಿಸುವರು ಎಂದು ಮೀನುಗಾರಿಕೆ ಕಾಲೇಜಿನ ಡೀನ್ ಡಾ.ಕೆ.ಎಂ. ಶಂಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಕಿಟ್‌ನಿಂದ ರೈತರು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸಿಗಡಿಯಲ್ಲಿರುವ ಬಿಳಿಚುಕ್ಕೆ […]