ಚಿಂತನೆಗಳು ಬದಲಾದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ

Tuesday, October 2nd, 2018
alwas-clg

ಮೂಡುಬಿದಿರೆ: ಪ್ರತಿಯೊಬ್ಬರು ತಮ್ಮ ಚಿಂತನೆಗಳಿಗೆ ಒಂದು ಚೌಕಟ್ಟನ್ನು ಹಾಕಿಕೊಂಡು, ಅದರೊಳಗೆ ಬಂಧಿಯಾಗಿರುತ್ತಾರೆ. ಆ ಚೌಕಟ್ಟಿನಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಮಾತ್ರ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಡಾ. ಶ್ರೀನಿವಾಸ್ ನಂದಗೋಪಾಲ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನಲ್ಲಿ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ನಡೆದ “ವ್ಯಕ್ತಿತ್ವ ವಿಕಸನ”ದ ಒಂದು ದಿನದ ತರಬೇತಿ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಸಮಸ್ಯೆಗಳಿಗೆ ಭ್ರಷ್ಟಚಾರವಾಗಲೀ, ಅನಕ್ಷರತೆಯಾಗಲಿ ಮುಖ್ಯ ಕಾರಣವಲ್ಲ. ಬದಲಾಗಿ ನಮ್ಮಲ್ಲಿರುವ ಕುಂಠಿತ ಚಿಂತನೆಗಳೆ ನಮ್ಮನ್ನು […]