ಬಿಗ್ ಬಾಸ್ ವಿಜೇತ ಪಾವಗಡ ಮಂಜು ಧರ್ಮಸ್ಥಳದಲ್ಲಿ
Tuesday, August 24th, 2021
ಉಜಿರೆ : ಬಿಗ್ ಬಾಸ್ ವಿಜೇತ ಪಾವಗಡ ಮಂಜು ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೆಗ್ಗಡೆಯವರು ಅವರನ್ನು ಗೌರವಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು. ಬಳಿಕ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಅವರ ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ, ತಮ್ಮ ರಾಘವ ಮತ್ತು ತಂಗಿ ಮಾನಸ ಉಪಸ್ಥಿತರಿದ್ದರು. ಪಾವಗಡ ಮಂಜು ಕಲರ್ಸ್ ಕನ್ನಡದ ಮಜಾ ಭಾರತದಲ್ಲಿ ಕಲಾವಿದರಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ತಮ್ಮ ಕುಟುಂಬದವರೊಂದಿಗೆ […]