ಭಾನುವಾರ ರಾತ್ರಿ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಧರ್ಮಸ್ಥಳದಲ್ಲಿ ವಿಶೇಷ ಪ್ರಾರ್ಥನೆ
Sunday, April 5th, 2020
ಧರ್ಮಸ್ಥಳ : ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಇಂದು, ಭಾನುವಾರ ರಾತ್ರಿ 9 ಗಂಟೆಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಕೊರೊನಾ ನಿರ್ಮೂಲನೆಗಾಗಿ ನಾವೆಲ್ಲ ವಿಶ್ವದ ಎಲ್ಲಾ ಜನರೊಂದಿಗೆ ಏಕತೆ, ಸಂಘಟನೆ ಮತ್ತು ಪ್ರಜ್ಞೆಯೊಂದಿಗೆ ಹೋರಾಟ ನಡೆಸುತ್ತಿದ್ದೇವೆ. ಪ್ರಧಾನಿಯವರ ಸಲಹೆಯಂತೆ ಎಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಮನೆಯಲ್ಲಿ ಜ್ಯೋತಿ ಬೆಳಗಿಸಿ ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವದ ಎಲ್ಲಾ […]