Blog Archive

ಜಿಲ್ಲೆಯ ಸೋತ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಸಚಿವ ಯು.ಟಿ.ಖಾದರ್ ಮಾತುಕತೆ

Sunday, June 10th, 2018
ut-kadher

ಮಂಗಳೂರು: ನೂತನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಭಾನುವಾರ  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಮಂದಿ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದವರು ಸೋಲನುಭವಿಸಿದರು. ಯುಟಿ ಖಾದರ್ ಒಬ್ಬರೇ ಗೆದ್ದು ಕಾಂಗ್ರೆಸ್ಸಿನ ಮಾನ ಉಳಿಸಿದ್ದರು. ಬಂಟ್ವಾಳ ಶಾಸಕರಾಗಿದ್ದ ಬಿ. ರಮಾನಾಥ ರೈ, ಮೂಡಬಿದ್ರೆ ಶಾಸಕರಾಗಿದ್ದ ಅಭಯಚಂದ್ರ ಜೈನ್, ಬೆಳ್ತಂಗಡಿ ಶಾಸಕರಾಗಿದ್ದ ವಸಂತ ಬಂಗೇರ, ಪುತ್ತೂರು ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರನ್ನು ನಿವಾಸಕ್ಕೆ ತೆರಳಿ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ […]

ಹೆಗ್ಗಡೆಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ

Tuesday, April 24th, 2018
veerenda-hegde

ಧರ್ಮಸ್ಥಳ: ಸುರಾನ ವಿದ್ಯಾ ಸಂಸ್ಥೆಗಳ ವತಿಯಿಂದ ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಸುರಾನ ವಿದ್ಯಾ ಸಂಸ್ಥೆಗಳ ವತಿಯಿಂದ 2017 ರ ಸಾಲಿನ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಸುರಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಅರ್ಚನಾ ಸುರಾನ ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿದ ಹೆಗ್ಗಡೆಯವರು ಮಾತನಾಡಿ ಸುರಾನ […]

ಮಂಜುಶ್ರೀ ಆಗೋಗ್ಯಧಾಮ ಮತ್ತು ವಿವೇಕಾನಂದ ಜಾಗತಿಕ ಆರೋಗ್ಯ ಕೇಂದ್ರ ಡಿ.ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ

Thursday, April 5th, 2018
veerendra-hegde

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಗುರುವಾರ ಬೆಂಗಳೂರಿನಲ್ಲಿ ಎಸ್ ವ್ಯಾಸ್ ವಿಶ್ವವಿದ್ಯಾಲಯದಲ್ಲಿ ಮಂಜುಶ್ರೀ ಆಗೋಗ್ಯಧಾಮ ಮತ್ತು ವಿವೇಕಾನಂದ ಜಾಗತಿಕ ಆರೋಗ್ಯ ಕೇಂದ್ರವನ್ನು ಉದ್ಟಾಟಿಸಿದರು. ಸಂಸ್ಥೆಯ ಕುಲಾಧಿಪತಿ ಡಾ. ನಾಗೇಂದ್ರ ಗುರೂಜಿ ಹೆಗ್ಗಡೆಯವರನ್ನು ಗೌರವಿಸಿ ಅಭಿನಂದಿಸಿದರು.

ಧರ್ಮಸ್ಥಳ: 15ನೇ ವರ್ಷಕ್ಕೆ ಸಂಪೂರ್ಣ ಸುರಕ್ಷಾ

Friday, March 30th, 2018
veerendra-hegde

ಬೆಳ್ತಂಗಡಿ: ಸಂಪೂರ್ಣ ಸುರಕ್ಷಾ ಯೋಜನೆಯು ಜನರಲ್ಲಿ ವಿಶೇಷ ಚೈತನ್ಯ ಉಂಟು ಮಾಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಸದಸ್ಯರ ಸಹಭಾಗಿತ್ವದಲ್ಲಿ ಮಾಡಿಕೊಳ್ಳಲಾದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆ 2018-19ರ ಸಾಲಿನ ವಿಮಾ ಪ್ರೀಮಿಯಂ ಮೊತ್ತವನ್ನು ವಿವಿಧ ವಿಮಾ ಕಂಪೆನಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ಧರ್ಮಸ್ಥಳ ಯೋಜನೆಯ ಅನುದಾನದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಈ ವಿಮಾ ಯೋಜನೆಯ 2018-19ನೇ ಸಾಲಿಗೆ ಸುಮಾರು 10 […]

ಉಪ ಸಭಾಪತಿ ತಂಬಿದೊರೈ ಧರ್ಮಸ್ಥಳ ಭೇಟಿ

Tuesday, February 27th, 2018
veerendra-hegade

ಉಜಿರೆ: ಲೋಕಸಭೆಯ ಉಪ ಸಭಾಪತಿ ತಂಬಿ ದೊರೈ ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು. ದೇವರ ದರ್ಶನದ ಬಳಿಕ ಅವರು ಸುಬ್ರಹ್ಮಣ್ಯಕ್ಕೆ ಪ್ರಯಾಣ ಬೆಳೆಸಿದರು.

ಮಹಾಶಿವರಾತ್ರಿ ವಿಶೇಷ… ಶಿವಪಂಚಾಕ್ಷರಿ ಪಠಣ ಉದ್ಘಾಟನೆ

Wednesday, February 14th, 2018
dharmastala

ಮಂಗಳೂರು: ದೇವರ ಬಗ್ಗೆ ಭಯ ಇರಬಾರದು. ಭಕ್ತಿ, ಪ್ರೀತಿ ಮತ್ತು ನಂಬಿಕೆ ಇರಬೇಕು. ದೇವರ ಭಕ್ತಿ ಮಾಡುವಾಗ ಭಯ, ಸಂಶಯ, ಅಪನಂಬಿಕೆ ಇರಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಆಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣವನ್ನು ಅವರು ಉದ್ಘಾಟಿಸಿ ಮಾತನಾಡಿದರು. ದೇಹ ಮತ್ತು ಆತ್ಮದ ವ್ಯತ್ಯಾಸವನ್ನು ನಾವು ಅರಿತು ಸತ್ಕಾರ್ಯ, ವ್ರತ, ನಿಯಮಗಳು, ಉಪವಾಸ, ಭಕ್ತಿ, ಪ್ರಾರ್ಥನೆ ಮೊದಲಾದ ಧ್ಯಾನದಿಂದ ನಮ್ಮ ದೋಷಗಳನ್ನೆಲ್ಲ ಕಳೆದು ಆತ್ಮವನ್ನು ಪವಿತ್ರ ಹಾಗೂ ಪರಿಶುದ್ಧವಾಗಿ ಮಾಡಬೇಕು. […]

ಮುಂದಿನ ವರ್ಷ ಧರ್ಮಸ್ಥಳದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ

Monday, February 5th, 2018
shravanabelagola

ಮಂಗಳೂರು: ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ. ಧರ್ಮಸ್ಥಳದ ರತ್ನಗಿರಿಯಲ್ಲಿ ನಡೆದ ಬಾಹುಬಲಿ ಸ್ವಾಮಿ ಮೂರ್ತಿಯ 36ನೇ ವರ್ಷದ ಪ್ರತಿಷ್ಠಾ ಮಹೋತ್ಸವ ವರ್ಧಂತ್ಯುತ್ಸವ ಹಾಗೂ 216 ಕಲಶಗಳಿಂದ ಪಾದಾಭಿಷೇಕದ ಬಳಿಕ ಅವರು ಹೇಳಿದ್ದಾರೆ. ಪೂಜ್ಯ ಆಚಾರ್ಯ ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರ ನೇತೃತ್ವ ಹಾಗೂ ಉಪಸ್ಥಿತಿಯೊಂದಿಗೆ ಶ್ರವಣಬೆಳಗೊಳದ ಕರ್ಮಯೋಗಿ ಚಾರುಕೀರ್ತಿ […]

ಮುನಿಸಂಘ ಧರ್ಮಸ್ಥಳ ಪುರ ಪ್ರವೇಶ : ಭವ್ಯ ಸ್ವಾಗತ

Monday, January 22nd, 2018
dharmastala

ಉಜಿರೆ: ಧರ್ಮಸ್ಥಳ ಬಸದಿಯಲ್ಲಿರುವ ಐತಿಹಾಸಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯು ಹವಳದ ಬಣ್ಣ ಹೊಂದಿರುವುದು ವಿಶಿಷ್ಟವಾಗಿದೆ. ಶಾಂತಚಿತ್ತರಾಗಿ ಈ ಮೂರ್ತಿಯ ದರ್ಶನ ಮಾಡಿ ಪ್ರಾರ್ಥನೆ ಮತ್ತು ಧ್ಯಾನ ಮಾಡಿದರೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಪರಮಪೂಜ್ಯ ಆಚಾರ್ಯ ಶ್ರೀ 108 ದೇವನಂದಿ ಮಹಾರಾಜ್ ಹೇಳಿದರು. ಧರ್ಮಸ್ಥಳಕ್ಕೆ ತಮ್ಮ ಸಂಘದೊಂದಿಗೆ ಭಾನುವಾರ ಸಂಜೆ ಪುರ ಪ್ರವೇಶ ಮಾಡಿದಾಗ ಅವರಿಗೆ ಭವ್ಯ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ […]

ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ, ಧರ್ಮದ ಅನುಷ್ಠಾನದ ಅಕ್ಷಯ ನಿಧಿ ಧರ್ಮಸ್ಥಳ :ಮುನಿಸಂಘ

Thursday, January 18th, 2018
munisanga

ಉಜಿರೆ: ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಹಾಗೂ ಮುನಿಸಂಘದವರು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ ಮಾಡಿದಾಗ ಪ್ರವೇಶ ದ್ವಾರದಿಂದ ಭಕ್ತಿ ಪೂರ್ವಕ ಸ್ವಾಗತ ಮಾಡಿ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ ಬಳಿಕ ಮಂಗಲ ಪ್ರವಚನ ನೀಡಿದ ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ಅನುಷ್ಠಾನದಲ್ಲಿದ್ದು ಧರ್ಮದ ಅಕ್ಷಯ […]

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ

Thursday, January 11th, 2018
dharmastala

ಉಜಿರೆ: ಅತಿಯಾದ ಸುಖ-ಭೋಗದಿಂದ ವ್ಯಕ್ತಿತ್ವ ನಾಶವಾಗುತ್ತದೆ. ಮನುಷ್ಯ ಸತ್ಯ, ಧರ್ಮ, ನ್ಯಾಯದಿಂದ ವಿಚಲಿತನಾಗಿ ಅಧರ್ಮ, ಅನ್ಯಾಯದ ಮಾರ್ಗವನ್ನು ಅನುಸರಿಸುತ್ತಾನೆ. ತ್ಯಾಗ ಜೀವನದಿಂದ ಭೋಗ ಜೀವನದ ಕಡೆಗೆ ಸಾಗುತ್ತಾನೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು. ಮಾಲಕರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ನಡೆದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ ಹಣ ಕೊಡುವುದರಿಂದ ಪರಿವರ್ತನೆ ಆಗುವುದಿಲ್ಲ. ಹಣದ ಸದ್ವಿನಿಯೋಗದ […]