Blog Archive

ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಾಲಯ ಆಗಬಾರದು: ಸಿದ್ದರಾಮಯ್ಯ

Monday, January 8th, 2018
Ramanath-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 76 ಕೋಟಿ ರೂಪಾಯಿ ವೆಚ್ಚದ ಅಭಿವೃದಿ ಕಾಮಗಾರಿಗಳನ್ನು ಉದ್ಘಾಟಿಸಿದರು . ಈ ನಡುವೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ಮೃತಪಟ್ಟ ದೀಪಕ್ ರಾವ್ ಹಾಗು ಅಬ್ದುಲ್ ಬಷೀರ್ ಅವರ ಸಾವಿಗೆ ಸಂತಾಪ ಸೂಚಿಸಲಾಯಿತು. ನಂತರ ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡಿದ ಅವರು, “ನಾವು ವಿಶ್ವ ಮಾನವರಾಗಬೇಕು. ಮೊದಲು ನಾವು […]

ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ: ಸಿದ್ದರಾಮಯ್ಯ ವ್ಯಂಗ್ಯ

Monday, January 8th, 2018
mangaluru

ಮಂಗಳೂರು: “ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ; ಆಗಾಗ ಬಣ್ಣ ಬದಲಾಯಿಸುವವರು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. “ಕೆಲವರಿಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬರುತ್ತದೆ ಎಂದು ಭಯವಿದೆ. ನಾನು ಸರಕಾರ ಹಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗುಜಾರಾತ್ ಹಾಗೂ ವಿದೇಶಕ್ಕೆ ತಮ್ಮ ಸ್ವಂತ ದುಡ್ಡಿನಲ್ಲಿ ಹೋಗುತ್ತಾರಾ?,” ಎಂದು ಪ್ರಶ್ನಿಸಿದರು . ದಕ್ಷಿಣ […]

ಕರಾವಳಿಯ ಜನರನ್ನು ಒಂದು ಗೂಡಿಸುವ, ಮಾನವೀಯತೆಯನ್ನು ಎತ್ತಿ ಹಿಡಿಯುವ ಉತ್ಸವವಾಗಲಿ -ಪ್ರಕಾಶ್ ರೈ

Saturday, December 23rd, 2017
mangaluru-2

ಮಂಗಳೂರು: ಕರಾವಳಿಯ ಉತ್ಸವ ಎಲ್ಲರನ್ನು ಒಂದು ಗೂಡಿಸುವ ಮಾನವೀಯತೆಯನ್ನು ಎತ್ತಿಹಿಡಿಯುವ ಉತ್ಸವವಾಗಬೇಕು ಎಂದು ಖ್ಯಾತ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಶುಭ ಹಾರೈಸಿದರು. ಇಂದಿನಿಂದ ಒಂದು ವಾರ ನಡೆಯಲಿರುವ ಕರಾವಳಿ ಉತ್ಸವಕ್ಕೆ ಮಂಗಳಾ ಕ್ರೀಡಾಂಗಣದ ಬಳಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ತೆಂಗಿನ ಹೂವಿನ ಗರಿ ಬಿಡಿಸಿ ಚಾಲನೆ ನೀಡಿ ಮಾತನಾಡಿದರು. ಹಲವಾರು ಭಾಷೆ ಸುಂದರ ಪರಿಸರವನ್ನು ಹೊಂದಿರುವ ನಾಡಿನಲ್ಲಿ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಟ್ಟು, ಎಳೆಯ ಮಕ್ಕಳ ಮನಸ್ಸಿನಲ್ಲಿ ಭಯದ ವಾತಾವರಣ ಮೂಡಿಸುವ […]

ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ 23ನೇ ಸಮ್ಮೇಳನ

Friday, December 22nd, 2017
communist-party

ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷವು ಒಂದು ಶಿಸ್ತುಬದ್ದ ಪಕ್ಷವಾಗಿದ್ದು ತನ್ನ ನಿರ್ಧಾರಗಳನ್ನು ಪ್ರಜಾಪ್ರಭುತ್ವವಾದಿ ನೆಲೆಯಲ್ಲಿ ನಿರೂಪಿಸುತ್ತದೆ. ಈ ನೆಲೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಸಮ್ಮೇಳನಗಳು ಅತಿ ಪ್ರಾಮುಖ್ಯವಾಗಿದೆ. ಗ್ರಾಮ ಮಟ್ಟದಿಂದ ಪ್ರಾರಂಭವಾಗುವ ಸಮ್ಮೇಳನಗಳು ಮುಂದುವರಿದು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ಕೊನೆಗೆ ದೇಶಮಟ್ಟದಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ಸಮ್ಮೇಳನಗಳಲ್ಲೂ ಹಿಂದಿನ ಮೂರು ವರ್ಷಗಳಲ್ಲಿ ಆದ ಬೆಳವಣಿಗೆ, ತೆಗೆದುಕೊಂಡ ನಿರ್ಣಯಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ವಿಶ್ಲೇಷಣೆ ನಡೆದು ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ […]

ಗೌರಿ ಹತ್ಯೆ: ವಿಶೇಷ ತನಿಖಾ ತಂಡ 3 ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ

Saturday, October 7th, 2017
gauri

ಮಂಗಳೂರು: ಗೌರಿ ಲಂಕೇಶ್‌ ಕೊಲೆ ಪ್ರಕರಣ ಕುರಿ ತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಸನಾತನ ಸಂಸ್ಥೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಜಾಡು ಹಿಡಿದು ಪೊಲೀಸರು ಮೂರು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೂ ಬಂದು ಹೋಗಿದ್ದಾರೆ. ಹೀಗಾಗಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿ ಸಿದ್ದ ಗೌರಿ ಲಂಕೇಶ್‌ ಹತ್ಯೆ ಪ್ರಕ ರಣದ ಹಿಂದೆ ದಕ್ಷಿಣ ಕನ್ನಡದ ನಂಟು ಇದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಪೊಲೀಸರು ಜಿಲ್ಲೆಯ ಪುತ್ತೂರು ತಾಲೂಕು ಕಡಬ […]

ಉಳ್ಳಾಲದಲ್ಲಿ ಡಿವಿಎಸ್, ಬಂಟ್ವಾಳದಲ್ಲಿ ಶೋಭಾ ಸ್ಪರ್ಧೆಯ ಸವಾಲ್

Tuesday, July 11th, 2017
election

ಮಂಗಳೂರು : ದಕ್ಷಿಣ ಕನ್ನಡದಲ್ಲಿ ನಡೆದ ಕೋಮು ಗಲಭೆಯ ಬಿಸಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲ ಉಂಟು ಮಾಡಿದ್ದು. ನಾಯಕರು ಚುನಾವಣಾ ಸ್ಪರ್ಧೆಯ ಸವಾಲನ್ನು ಒಡ್ಡಿದ್ದಾರೆ.  ಸಂಸದೆ ಶೋಭಾ ಹಾಗೂ ಸಚಿವ ಡಿ.ವಿ. ಸದಾನಂದ ಗೌಡರು  ವಿಧಾನಸಭಾ ಚುನಾವಣೆಯಲ್ಲಿ ನನ್ನ ಹಾಗೂ ಖಾದರ್ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಸಚಿವ ಬಿ. ರಮಾನಾಥ ರೈ ಸವಾಲೆಸೆದಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ ಸಂಸದೆ ಶೋಭಾ ಹಾಗೂ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮಾಹಿತಿ ಕೊರತೆಯಿದೆ. ಅವರು ತಮ್ಮ ಹೇಳಿಕೆ ಮೂಲಕ ಜಿಲ್ಲೆಯ […]

ರಾಜ್ಯ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೊಡುಗೆಗಳು

Thursday, March 16th, 2017
State budget

ಮಂಗಳೂರು  :- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬುಧವಾರ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಪ್ರಮುಖ ಕೊಡುಗೆಗಳು ದೊರಕಿವೆ; 50 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-67ರ ಮಂಗಳೂರು-ಅತ್ರಾಡಿ ರಸ್ತೆಯಲ್ಲಿ 2.5 ಕಿ.ಮೀ. ಉದ್ದ ರಸ್ತೆಯ ಅಭಿವೃದ್ಧಿ ( ಕಾವೂರು-ಮರಕಡ ಮಹಾನಗರಪಾಲಿಕೆ ಗಡಿಯಿಂದ ಕೆಂಜಾರು ವಿಮಾನ ನಿಲ್ದಾಣದ ಪ್ರವೇಶ ದ್ವಾರದವರೆಗೆ ಚತುಷ್ಫಥ ರಸ್ತೆ). ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿಸ್ತರಣೆಗೆ 286 ಎಕರೆ ಭೂಸ್ವಾಧೀನಕ್ಕಾಗಿ ಭಾರತ ವಿಮಾನ ನಿಲ್ದಾಣ […]

ದಕ್ಷಿಣ ಕನ್ನಡದಲ್ಲಿ ಮಕ್ಕಳ ಅಪಹರಣದ ಯಾವುದೇ ಜಾಲವಿಲ್ಲ: ಡಾ. ಸಂಜೀವ ಎಂ. ಪಾಟೀಲ

Monday, November 28th, 2016
Dcp-dr-sanjiv-m-patil

ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಕ್ಕಳ ಅಪಹರಣದ ಯಾವುದೇ ಜಾಲವಿಲ್ಲ ಎಂದು ಡಿಸಿಪಿ ಡಾ. ಸಂಜೀವ ಎಂ. ಪಾಟೀಲ ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಮಕ್ಕಳ ಜಾಲ ಸಕ್ರಿಯವಾಗಿದೆ, ಮಕ್ಕಳ ಅಪಹರಣವಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಿರುವ ಡಿಸಿಪಿ, ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶಗಳು ರವಾನೆಯಾಗುತ್ತಿವೆ. ಈ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹ ಆಧಾರ ರಹಿತ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಒಂದು ವೇಳೆ ಸಂಶಯಾಸ್ಪದ […]

ಕೇಂದ್ರ ಗೃಹ ಮಂತ್ರಾಲಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಪೌರ ರಕ್ಷಣಾ ಘಟಕ’ ಸ್ಥಾಪನೆ: ಶಿವಕುಮಾರ್‌

Wednesday, August 24th, 2016
Home-Guard-

ಮಂಗಳೂರು: ಕೇಂದ್ರ ಗೃಹ ಮಂತ್ರಾಲಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಪೌರ ರಕ್ಷಣಾ ಘಟಕ’ ಸ್ಥಾಪಿಸಲು ಆದೇಶ ನೀಡಿದ್ದು, ಮುಂದಿನ 5-6 ತಿಂಗಳಲ್ಲಿ ಇದರ ಸ್ಥಾಪನೆಯಾಗಲಿದೆ ಎಂದು ಗೃಹರಕ್ಷಕ ದಳದ ಎಡಿಜಿಪಿ ಎನ್‌. ಶಿವಕುಮಾರ್‌ ಹೇಳಿದರು. ಮಂಗಳೂರಿನ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಮಂಗಳವಾರ ಘಟಕಾಧಿಧಿಕಾರಿಗಳ ಸಭೆ ಬಳಿಕ ಅವರು ಮಾತನಾಡಿದರು. ಪೌರ ರಕ್ಷಣಾ ದಳ ಬೆಂಗಳೂರು ನಗರ, ಉತ್ತರ ಕನ್ನಡದ ಕೈಗಾ ಹಾಗೂ ರಾಯಚೂರಿನ ಶಕ್ತಿನಗರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ದೇಶದ ಯುದ್ಧ […]

ಜಿಲ್ಲೆ ಹೆಸರು ದಕ್ಷಿಣ ಕನ್ನಡವೇ ಇರಲಿ : ಎ.ಬಿ.ಇಬ್ರಾಹಿಂ

Monday, July 28th, 2014
DC AB Ibrahim

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆ ಹೆಸರನ್ನು ಮಂಗಳೂರು ಜಿಲ್ಲೆ ತುಳುನಾಡು ಮತ್ತಿತರ ಹೆಸರು ಸೂಕ್ತವೆಂದು ಸಾರ್ವಜನಿಕರ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದು, ಮಂಗಳೂರು ಜಿಲ್ಲೆ ಎಂಬುದಾಗಿ ಮಾರ್ಪಾಡು ಮಾಡುವ ವಿಚಾರವು ಅತೀ ಸೂಕ್ಷ್ಮ ವಿಚಾರವಾಗಿರುವುದರಿಂದ ಜಿಲ್ಲೆಯ ಜನ ದಕ್ಷಿಣಕನ್ನಡ ಎಂಬ ಹೆಸರಿನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿರುವುದರಿಂದ ಜಿಲ್ಲೆಯ ಹೆಸರನ್ನು ದಕ್ಷಿಣಕನ್ನಡ ಎಂದೇ ಮುಂದುವರಿಸುವಂತೆ ಹಾಗೂ ಜಿಲ್ಲೆಗೆ ಮರು ನಾಮಕರಣ ಆವಶ್ಯಕತೆ ಇಲ್ಲವೆಂಬುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಮ್ಮ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ರಾಜ್ಯದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳಿಗೆ […]