Blog Archive

ಕೋವಿಡ್ ಸಿದ್ದತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

Thursday, June 25th, 2020
sslc exam

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 95 ಪರೀಕ್ಷಾ ಕೇಂದ್ರಗಳಲ್ಲಿ 30835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 95 ಪರೀಕ್ಷಾ ಕೇಂದ್ರಗಳಲ್ಲಿ ಇದಕ್ಕಾಗಿ 1585 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಬಂಟ್ವಾಳ – 5300, ಬೆಳ್ತಂಗಡಿ – 3849, ಮಂಗಳೂರು ಉತ್ತರ – 6584, ಮಂಗಳೂರು ದಕ್ಷಿಣ – 5968, ಮೂಡಬಿದ್ರೆ – 2107, ಪುತ್ತೂರು – 5007, ಸುಳ್ಯ – 2020 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿಗೆ ಕೊರೊನಾ ಸೋಂಕು ದೃಢ, ಉಡುಪಿಯಲ್ಲಿ11

Tuesday, June 23rd, 2020
CORONA

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಮಂದಿಗೆ ಕೊರೊನಾ ದೃಢಪಟ್ಟಿದ್ದು, ಆರು ಮಂದಿ ಗುಣಮುಖರಾಗಿದ್ದಾರೆ. 8 ಜನ ಸೋಂಕಿತರ ಪೈಕಿ ನಾಲ್ಕು ಮಂದಿ ರೋಗಿ-8318 ಪ್ರಾಥಮಿಕ ಸಂಪರ್ಕವುಳ್ಳವರಾಗಿದ್ದು, ಇಬ್ಬರು ತೀವ್ರ ಉಸಿರಾಟದ ತೊಂದರೆ, ಒಬ್ಬರು ಐಎಲ್ಐ ಮತ್ತು ಒಬ್ಬರು ಕುವೈತ್‌ನಿಂದ ಬಂದವರಾಗಿದ್ದಾರೆ. ಎಂಟು ಮಂದಿಯಲ್ಲಿ ನಾಲ್ಕು ಮಹಿಳೆಯರು ನಾಲ್ಕು ಪುರುಷರಿದ್ದಾರೆ. ಹೆರಿಗೆಯಾದ ಮಹಿಳೆಯೂ ಸೇರಿ 6 ಜನ ಗುಣಮುಖರಾಗಿದ್ದಾರೆ. 28 ವರ್ಷದ ಗರ್ಭಿಣಿಗೆ ಇತ್ತೀಚೆಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಬಳಿಕ ಬಂದ ಗಂಟಲು ದ್ರವದ […]

ಕೊರೊನಾಗೆ ದಕ್ಷಿಣ ಕನ್ನಡದಲ್ಲಿ 70 ವರ್ಷದ ವೃದ್ಧ ಬಲಿ

Tuesday, June 23rd, 2020
corona death

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ, 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇದು ಕೊರೋನಾಗೆ ಸಂಬಂಧಿಸಿದಂತೆ 9ನೇ ಬಲಿಯಾಗಿ ದೆ. ಬೆಂಗಳೂರಿನಿಂದ  ಜೂನ್‌‌ 7 ರಂದು ಅವರು  ಆಗಮಿಸಿದ್ದರು. ತೀವ್ರ ಉಸಿರಾಟದ ತೊಂದರೆ (ಎಸ್‌‌‌ಎಆರ್‌ಐ) ಯಿಂದ ಜೂನ್‌‌ 12 ರಂದು ಮಂಗಳೂರಿನ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ  ಮಧುಮೇಹ ಹಾಗೂ ನ್ಯೂಮೋನಿಯಾ ಸಂಬಂದಿತ ಕಾಯಿಲೆಗಳು ಇದ್ದವು.

ಕೊರೊನಾ ಪಾಸಿಟಿವ್ ಸೋಂಕು ಜೂನ್ 14 : ದಕ್ಷಿಣ ಕನ್ನಡ -5, ಉಡುಪಿ -21, ಕರ್ನಾಟಕ – 176

Sunday, June 14th, 2020
corona-virus

ಮಂಗಳೂರು  :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಜೂನ್ 14 ರಂದು ಐವರಲ್ಲಿ ಕೊರೊನಾ ಪಾಸಿಟಿವ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಮೂವರು ದುಬೈನಿಂದ ಮರಳಿದವರಾಗಿದ್ದು, ಇಬ್ಬರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಹನ್ನೊಂದು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯಲ್ಲಿ ರವಿವಾರ ಮತ್ತೆ 21 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಪೈಕಿ ಹದಿನೆಂಟು ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. ಉಳಿದಂತೆ ಉತ್ತರ ಪ್ರದೇಶ ಹಾಗೂ ತಮಿಳುನಾಡಿನಿಂದ ಮರಳಿದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ೫೩ ವರ್ಷದ ವ್ಯಕ್ತಿಯಲ್ಲಿ ಸೋಂಕು […]

ಭಾನುವಾರ ಕೋವಿಡ್-19 ಸೋಂಕಿತರ ಸಂಖ್ಯೆ : ದಕ್ಷಿಣ ಕನ್ನಡ – 17, ಉಡುಪಿ-13

Sunday, June 7th, 2020
corona-virus

ಮಂಗಳೂರು: ರಾಜ್ಯ ಆರೋಗ್ಯ ಬುಲೆಟಿನ್ ಮಾಹಿತಿ ಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 17 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 192ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ 17 ಮಂದಿ ಸೋಂಕಿತರಲ್ಲಿ 16 ಮಂದಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಾಗಿದ್ದು ಒಬ್ಬರು ಗೋವಾದಿಂದ ಬಂದವರಾಗಿದ್ದಾರೆ. ಇಂದಿನ ಸೋಂಕಿತರಲ್ಲಿ 15 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರಾಗಿದ್ದಾರೆ. ಇವರೆಲ್ಲರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 192 ಜನರಿಗೆ ಸೋಂಕು ಧೃಢವಾಗಿದ್ದು, […]

ಕೊರೊನಾ ಪಾಸಿಟಿವ್‌‌ ಪ್ರಕರಣ : ದ.ಕ ಜಿಲ್ಲೆ24, ಉಡುಪಿ ಜಿಲ್ಲೆ 121

Saturday, June 6th, 2020
corona virus

ಮಂಗಳೂರು, : ದ.ಕ ಜಿಲ್ಲೆಯಲ್ಲಿ ಜೂನ್ 6ರಂದು ಶನಿವಾರ 24 ಕೊರೊನಾ ಪ್ರಕರಣ ಪತ್ತೆಯಾಗಿದ್ದರೆ, ಉಡುಪಿಯಲ್ಲಿ 121 ಕೊರೊನಾ ಪಾಸಿಟಿವ್‌‌ ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡದಲ್ಲಿ ಶನಿವಾರ ಹದಿನೈದು ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 65 ಸಕ್ರಿಯ ಪ್ರಕರಣಗಳಿದ್ದು, 103 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಏಳು ಸಾವುಗಳು ದಾಖಲಾಗಿವೆ. ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 121 ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. 16 ಮಕ್ಕಳು ಸೇರಿದಂತೆ ಎಪ್ಪತ್ತೆಂಟು ಪುರುಷರು ಮತ್ತು […]

ದಕ್ಷಿಣ ಕನ್ನಡಕ್ಕೆ ಬಂದ ಮಿಡತೆಗಳ ಹಿಂಡು, ಕೃಷಿಕರಲ್ಲಿ ಆತಂಕ

Sunday, May 31st, 2020
grasshopper

ಕಡಬ  :  ಉತ್ತರ ಭಾರತದಲ್ಲಿ ರೈತರನ್ನು ಕಂಗೆಡಿಸಿದ ಮಿಡತೆಗಳ ಹಾವಳಿ ಇದೀಗ ಕರಾವಳಿಗೂ ಕಾಲಿಟ್ಟಿದ್ದು, ದ.ಕ ಜಿಲ್ಲೆಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ರೆಂಜಿಲಾಡಿ ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಪರಿಸರದಲ್ಲಿ ಸಂಜೆ ವೇಳೆ ಮಿಡತೆಯ ಹಿಂಡು ದಿಢೀರನೆ ಕಂಡುಬಂದಿದೆ. ಮಿಡತೆಯು ಪ್ರೌಢಾವಸ್ಥೆ ಹಂತ ಮಾದರಿಯನ್ನು ಪರಿಶೀಲನೆಗಾಗಿ ಕೀಟತಜ್ಞರಿಗೆ ಕಳುಹಿಸಲಾಗಿದೆ ಹಾಗೂ ಕೀಟಶಾಸ್ತ್ರಜ್ಞರಿಂದ ಮಿಡತೆಯ ಗುರುತಿಸುವಿಕೆಯ ಹಂತದಲ್ಲಿದೆ. ಮಿಡತೆ ಹಾವಳಿಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. […]

ಸರಕಾರಿ ಸಾಲಮನ್ನಾದ ಹೆಚ್ಚಿನ ಲಾಭ ಪಡೆದವರು ದಕ್ಷಿಣ ಕನ್ನಡ, ಉಡುಪಿ ಮೀನುಗಾರರು

Sunday, May 31st, 2020
fishing

ಭಟ್ಕಳ : ರಾಜ್ಯ ಸರಕಾರ ಘೋಷಣೆ ಮಾಡಿದ್ದ ಮೀನುಗಾರರ ಸಾಲಮನ್ನಾದ ಲಾಭವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರೇ ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದಾರೆ ಎಂದು ಇಲ್ಲಿಯ ಮೀನುಗಾರರ ಮುಖಂಡ ವಸಂತ ಖಾರ್ವಿ ಹೇಳಿದ್ದಾರೆ. ಅವರು ನಗರದ ಮಾವಿನಕುರ್ವೆ ಬಂದರಿನ ಬೋಟ್‌ ಯೂನಿಯನ್‌ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಸಮುದಾಯದವರಿಗೂ ನೆರವು ನೀಡುತ್ತಿದೆ. ಆದರೆ ಮೀನುಗಾರರನ್ನು ಕಡೆಗಣಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಮೀನು ಕ್ಷಾಮ ಕಳೆದೆರಡು ವರ್ಷಗಳಿಂದ ಮೀನುಗಾರರನ್ನು […]

ದಕ್ಷಿಣ ಕನ್ನಡದಲ್ಲಿ ಗುರುವಾರ 6 ಮಂದಿಯಲ್ಲಿ ಕೊರೊನಾ ದೃಢ

Thursday, May 28th, 2020
corona-virus

ಮಂಗಳೂರು : ದೇಶದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವು ಗೊಳ್ಳುತ್ತಿದ್ದಂತೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರಿದೆ. ಇಂದು ಮತ್ತೆ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿಗೆ ಒಳಗಾದ ಬಹುತೇಕ ಮಂದಿ ಮಹಾರಾಷ್ಟ್ರದ ಮುಂಬಯಿಂದಲೇ ಬಂದವರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಗುರುವಾರ ಒಂದೇ ದಿನ 6 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು , 61, 18 ವರ್ಷದ ಮಹಿಳೆ, 62 , 50 , 24, 36 ವರ್ಷದ ಪುರುಷರಲ್ಲಿ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಮಹಾರಾಷ್ಟ್ರದ ರಾಜ್ಯದಿಂದ […]

ಬಂಟ್ವಾಳದಲ್ಲಿ ಮತ್ತೆ ಮೂವರಿಗೆ ಕೋವಿಡ್ -19 ಸೋಂಕು, ಜಿಲ್ಲೆಯಲ್ಲಿ ಜನರಲ್ಲಿ ಮಡುಗಟ್ಟಿದ ಆತಂಕ

Saturday, May 9th, 2020
Bantwal Covid

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಒಂದೇ ಮನೆಯ ಮೂವರಿಗೆ ಇಂದು ಕೋವಿಡ್ -19 ಸೋಂಕು ದೃಢವಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆತಂಕ ಮತ್ತಷ್ಟು ಹೆಚ್ಚಿದೆ. ಈ ಹಿಂದೆ ಸೋಂಕು ದೃಢವಾಗಿದ್ದ ಸೋಂಕಿತ ಸಂಖ್ಯೆ 578ರ ಸಂಪರ್ಕದಿಂದ ಈಗ ಮತ್ತೆ ಮೂವರಿಗೆ ಸೋಂಕು ತಾಗಿದೆ. 30 ವರ್ಷದ ಪುರುಷ, 60 ಮತ್ತು 70 ವರ್ಷದ ಇಬ್ಬರು ಮಹಿಳೆಯರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢಪಟ್ಟಿದೆ. ಇವರು ಮೊದಲು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯ ಮಹಿಳೆಯ ದ್ವಿತೀಯ ಸಂಪರ್ಕದವರಾಗಿದ್ದಾರೆ. […]