ದಕ್ಷಿಣ ಕನ್ನಡಕ್ಕೆ ಬಂದ ಮಿಡತೆಗಳ ಹಿಂಡು, ಕೃಷಿಕರಲ್ಲಿ ಆತಂಕ
Sunday, May 31st, 2020
ಕಡಬ : ಉತ್ತರ ಭಾರತದಲ್ಲಿ ರೈತರನ್ನು ಕಂಗೆಡಿಸಿದ ಮಿಡತೆಗಳ ಹಾವಳಿ ಇದೀಗ ಕರಾವಳಿಗೂ ಕಾಲಿಟ್ಟಿದ್ದು, ದ.ಕ ಜಿಲ್ಲೆಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ರೆಂಜಿಲಾಡಿ ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಪರಿಸರದಲ್ಲಿ ಸಂಜೆ ವೇಳೆ ಮಿಡತೆಯ ಹಿಂಡು ದಿಢೀರನೆ ಕಂಡುಬಂದಿದೆ. ಮಿಡತೆಯು ಪ್ರೌಢಾವಸ್ಥೆ ಹಂತ ಮಾದರಿಯನ್ನು ಪರಿಶೀಲನೆಗಾಗಿ ಕೀಟತಜ್ಞರಿಗೆ ಕಳುಹಿಸಲಾಗಿದೆ ಹಾಗೂ ಕೀಟಶಾಸ್ತ್ರಜ್ಞರಿಂದ ಮಿಡತೆಯ ಗುರುತಿಸುವಿಕೆಯ ಹಂತದಲ್ಲಿದೆ. ಮಿಡತೆ ಹಾವಳಿಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. […]