Blog Archive

ಕೊರೋನ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ- 303, ನಾಲ್ಕು ಸಾವು, ಉಡುಪಿ – 319, ಕಾಸರಗೋಡು – 295

Monday, October 12th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 303 ಮಂದಿಗೆ ಕೊರೋನ ಸೋಂಕು ತಗುಲಿದ್ದು4 ಮಂದಿ ಮೃತಪಟ್ಟಿದ್ದಾರೆ. 194 ಮಂದಿ ಗುಣಮುಖ ರಾಗಿದ್ದಾರೆ. ಉಡುಪಿಯಲ್ಲಿ ಮತ್ತೆ 319 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 1,99,759 ಮಂದಿಯ ಪರೀಕ್ಷೆ ಮಾಡಿಸಲಾಗಿದೆ. ಆ ಪೈಕಿ 1,72,927 ಮಂದಿಯ ವರದಿ ನೆಗೆಟಿವ್ ಮತ್ತು 26,832 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಒಟ್ಟು 609 ಮಂದಿ ಸಾವಿಗೀಡಾಗಿದ್ದಾರೆ. 21,938 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 4,285 ಸಕ್ರಿಯ ಪ್ರಕರಣಗಳಿವೆ. […]

ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ – 258, ಸಾವು 9, ಉಡುಪಿ ಜಿಲ್ಲೆ – 158, ಸಾವು 3, ಕಾಸರಗೋಡು -257

Sunday, October 4th, 2020
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 258 ಮಂದಿಗೆ ಕೊರೊನಾ ದೃಢಪಟ್ಟಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 566 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,019 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 344 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 17,709 ಮಂದಿ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ 5,744 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,361 ಮಾಸ್ಕ್ ಉಲ್ಲಂಘನೆ ಪ್ರಕರಣ ವರದಿಯಾಗಿದ್ದು, 5,30,885 ದಂಡ ವಸೂಲಿ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ ಕೊರೆತ, ಜಿಲ್ಲಾಧಿಕಾರಿ ಭೇಟಿ

Thursday, September 17th, 2020
Kamagari

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ಕೊರೆತ  ತೀವ್ರವಾಗಿದ್ದು, ಸಮುದ್ರ ಭಾಗದಲ್ಲಿ ವಾಸವಾಗಿರುವ ಜನರಲ್ಲಿ ಆಂತಕ ಮನೆ ಮಾಡಿದೆ. ಕಡಲ ಕೊರೆತ ಸಮಸ್ಯೆಯ ಹಾನಿ ತಡೆಗಟ್ಟಲು ಸರ್ಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅದಷ್ಟು ಬೇಗನೆ ರೂಪಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮ್ಯಾರಿಟೈಮ್ ಬೋರ್ಡ್ ಸಿಇಓ ಕಪಿಲ್ ಮೋಹನ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲೆಯ ವಿವಿದೆಡೆ ಕಡಲಕೊರೆತ ನಿಯಂತ್ರಣಕ್ಕೆ ನಡೆಯುತ್ತಿರುವ ವಿವಿಧ […]

ಕೊರೊನಾ ಪಾಸಿಟಿವ್ ಪ್ರಕರಣಗಳು : ದಕ್ಷಿಣ ಕನ್ನಡ ಜಿಲ್ಲೆ247 , ಉಡುಪಿ ಜಿಲ್ಲೆ 217 , ಕಾಸರಗೋಡು ಜಿಲ್ಲೆ 99

Wednesday, August 26th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 247 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10774ಕ್ಕೆ ಏರಿಕೆಯಾಗಿದೆ. 247 ಮಂದಿ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 85 ಮಂದಿಗೆ ಕೊರೊನಾ ದೃಢಪಟ್ಟಿದೆ. 72 ಐಎಲ್‌ಐ ಪ್ರಕರಣಗಳಾಗಿದ್ದು, 11 ಸಾರಿ ಪ್ರಕರಣಗಳಾಗಿವೆ. 78 ಮಂದಿಯ ಸೋಂಕಿನ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಮಂಗಳವಾರದಂದು 218 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಇಲ್ಲಿಯ ತನಕ 8136 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದಂತಾಗಿದೆ. ಮಂಗಳವಾರ […]

ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ 193 ಐದು ಸಾವು, ಉಡುಪಿ ಜಿಲ್ಲೆ 117 ಎರಡು ಸಾವು

Sunday, August 23rd, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಆಗಸ್ಟ್ 23 ರಂದು 193 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10330 ಕ್ಕೆ ಏರಿದೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರ  117 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10126 ಕ್ಕೆ ಏರಿಕೆಯಾಗಿದೆ. ಭಾನುವಾರದ ಪಾಸಿಟಿವ್ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 130, ಬಂಟ್ವಾಳದಲ್ಲಿ 21, ಸುಳ್ಯದಲ್ಲಿ 19, ಪುತ್ತೂರಿನಲ್ಲಿ 6, ಬೆಳ್ತಂಗಡಿಯಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 9 ಮಂದಿಗೆ ಪಾಸಿಟಿವ್‌ ಆಗಿದೆ.  193 ಸೋಂಕಿತರ […]

ಕೊರೊನಾ ಪಾಸಿಟಿವ್ : ದಕ್ಷಿಣ ಕನ್ನಡ ಜಿಲ್ಲೆ 234, ಸಾವು ನಾಲ್ಕು, ಉಡುಪಿ ಜಿಲ್ಲೆ 375, ಕಾಸರಗೋಡು ಜಿಲ್ಲೆ 174

Thursday, August 20th, 2020
coronavirus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 234 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬುಧವಾರ 115 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಬುಧವಾರದ ವರದಿ ಪ್ರಕಾರ  ಒಟ್ಟು ಸೋಂಕಿತರ ಸಂಖ್ಯೆ 9535ಕ್ಕೆ ಏರಿಕೆಯಾಗಿದೆ. ಈ ವರೆಗೆ  6942 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಸದ್ಯ ದ.ಕ ಜಿಲ್ಲೆಯಲ್ಲಿ 2303 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಇನ್ನು ಕೊರೊನಾ ಸೋಂಕಿಗೆ ಬುಧವಾರ ನಾಲ್ವರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 290ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಸಂಪರ್ಕದಿಂದ 35 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. […]

ಕೊರೊನಾ ಸೋಂಕು ಆಗಸ್ಟ್ 17 : ದಕ್ಷಿಣ ಕನ್ನಡ ಜಿಲ್ಲೆ 144, ಎಂಟು ಮಂದಿ ಸಾವು, ಉಡುಪಿ ಜಿಲ್ಲೆ 270

Tuesday, August 18th, 2020
CORONA

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 144 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೆ ಎಂಟು ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,022ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಮೂವರು, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ತಲಾ ಓರ್ವರು, ಮೂವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪ್ರಮಾಣದ ದಿನೇದಿನೇ ಹೆಚ್ಚುತ್ತಲೇ ಸಾಗಿದೆ. ಸೋಮವಾರವೂ 144 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಸೋಂಕಿತರ ಸಂರ್ಪದಲ್ಲಿದ್ದ 21 […]

ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳನ್ನುತೆರೆದರು, ಕೇರಳ ಪೊಲೀಸರು ಮಾತ್ರ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ

Wednesday, August 12th, 2020
kerala border

ಕಾಸರಗೋಡು : ಕೇರಳ-ಕರ್ನಾಟಕ ಗಡಿ ರಸ್ತೆ ಮುಚ್ಚಿರುವುದು  ಕೇಂದ್ರ ಸರಕಾರದ ಮಾರ್ಗ ಸೂಚಿಯ  ವಿರುದ್ಧವಾಗಿದೆ  ಹಾಕಲಾಗಿರುವ ಮಣ್ಣನ್ನು ತೆರವು ಗೊಳಿಸದಿದ್ದಲ್ಲಿ ಸ್ವಾತಂತ್ರ್ಯ ದಿನದಂದು ಮಣ್ಣು ತೆರವುಗೊಳಿಸುವ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ಯುವಮೋರ್ಚಾ ಕಾಸರಗೋಡು ಜಿಲ್ಲಾ ಘಟಕ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆದೇಶದಂತೆ ಕರ್ನಾಟಕ ಗಡಿ ತೆರೆಯಲಾಗಿದೆ‌. ಆದರೂ ಕೇರಳ ಪೊಲೀಸರು ಆ ಮಾರ್ಗವಾಗಿ ಸಂಚರಿಸಲು ಬಿಡುತ್ತಿಲ್ಲ.  ಅಂತಾರಾಜ್ಯ ಪಾಸ್ ನೀಡಲು ಅವೈಜ್ಞಾನಿಕ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ. […]

ಕೊರೊನಾ ಸೋಂಕು ಜುಲೈ 31 : ದಕ್ಷಿಣ ಕನ್ನಡ ಜಿಲ್ಲೆ 204 , ಉಡುಪಿ ಜಿಲ್ಲೆ 213, ಕಾಸರಗೋಡು 52

Friday, July 31st, 2020
corona virus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ  204 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 5713ಕ್ಕೆ ಏರಿಕೆಯಾಗಿದೆ. ಶುಕ್ರವಾರದಂದು ಮತ್ತೆ 70 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇಲ್ಲಿಯ ತನಕ 2631 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 2929 ಮಂದಿ ಜಿಲ್ಲೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ 75 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 63 ಮಂದಿಯಲ್ಲಿ ಐಎಲ್ ಐ ಪ್ರಕರಣ ಪತ್ತೆಯಾಗಿದೆ. 14 ಮಂದಿಯಲ್ಲಿ ಸಾರಿ ಪ್ರಕರಣ ದೃಢಪಟ್ಟಿದೆ. […]

ಕೊರೊನಾ ಸೋಂಕು ಜುಲೈ 30 : ದಕ್ಷಿಣ ಕನ್ನಡ ಜಿಲ್ಲೆ 198, ಉಡುಪಿ ಜಿಲ್ಲೆ 248, ಕಾಸರಗೋಡು ಜಿಲ್ಲೆ 28

Friday, July 31st, 2020
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಜುಲೈ 30 ರಂದು 198 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢ ಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 5506ಕ್ಕೆ ಏರಿಕೆಯಾಗಿದೆ. ಗುರುವಾರ ಪತ್ತೆಯಾದ ಸೋಂಕಿನ ಪ್ರಕರಣಗಳ ಪೈಕಿ 27 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 80 ಐಎಲ್ ಐ ಪ್ರಕರಣಗಳಾಗಿವೆ. 14 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 73 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ನಾಲ್ವರು ಅಂತರಾಷ್ಟ್ರೀಯ ಪ್ರಯಾಣ ಮುಗಿಸಿ ಬಂದವರಲ್ಲಿ ಸೋಂಕು ಕಂಡುಬಂದಿದೆ. ಗುರುವಾರದಂದು ಮತ್ತೆ […]