Blog Archive

ಇಬ್ಬರು ಮಕ್ಕಳು ಸೇರಿ, ದಕ್ಷಿಣ ಕನ್ನಡ ಜಿಲ್ಲೆಯ11 ಮಂದಿಯಲ್ಲಿ ಕೊರೊನಾ ಸೋಂಕು

Wednesday, May 27th, 2020
Mangalore Covid

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  11 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಇಂದು ದೃಢವಾದ 11 ಮಂದಿಯಲ್ಲಿ 10 ಮಂದಿ ಮಹಾರಾಷ್ಟ್ರ ಹಾಗೂ ಒಬ್ಬರು ಗುಜರಾತ್ ರಾಜ್ಯದಿಂದ ಹಿಂತಿರುಗಿದವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಬುಧವಾರದ ಆರೋಗ್ಯ ಇಲಾಖೆಯ ಬೆಳಗ್ಗಿನ ಬುಲೆಟಿನ್ ಪ್ರಕಾರ  3, 11, ವರ್ಷದ ಮಕ್ಕಳಿಗೂ ಸೋಂಕು ತಗುಲಿದೆ. ಇದಲ್ಲದೆ 36, 59,17, 45, 37 ಮಹಿಳೆ ಹಾಗೂ 35, 46, 39 ವರ್ಷದ ಪುರುಷರಲ್ಲಿ ಸೋಂಕು […]

ಬೆಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಕೋವಿಡ್ 19 ಸೋಂಕು

Tuesday, May 26th, 2020
Mangalore COVID

ಮಂಗಳೂರು : ಕತಾರ್‌ನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಕೊರೊನಾ ಪಾಸಿಟಿವ್‌ ಆಗಿದ್ದು ಅವರು ಬೆಂಗಳೂರಿನಲ್ಲಿಯೇ ಇರುವ ಕಾರಣದಿಂದಾಗಿ ಅವರನ್ನು ಅಲ್ಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದ.ಕ. ಜಿಲ್ಲೆಯವರಾದ ಮೂವರು ಕತಾರ್‌ನಿಂದ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಬೆಂಗಳೂರಿಗೆ ಬಂದ ಬಳಿಕ ಅವರನ್ನು ಅಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ಕೊರೊನಾ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಮೇ 25 ರ ಸಂಜೆ 5 ರಿಂದ ಮೇ 26 ರ ಮಧ್ಯಾಹ್ನ 12 ರವರೆಗೆ ದಕ್ಷಿಣ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂರು ಹೊಸ ಕೋವಿಡ್ ಪ್ರಕರಣಗಳು ಪತ್ತೆ

Monday, May 25th, 2020
mangaluru-corona

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂರು ಕೋವಿಡ್-19 ಹೊಸ ಪ್ರಕರಣಗಳು ವರದಿಯಾಗಿದೆ. ಇದಿರಿಂದ ಜಿಲ್ಲೆಯ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಈ ಮೂವರು ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 30, 25, 55 ವರ್ಷದ ಮೂವರು ಪುರುಷರಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ. ಈ ಮೂವರು ಮಹಾರಾಷ್ಟ್ರದ ಮುಂಬಯಿ ಮತ್ತು ಪೂನಾದಿಂದ ಬಂದಿದ್ದರು. ಇವರನ್ನು ಬೆಳ್ತಂಗಡಿಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಸದ್ಯ ಇವರಿಗೆ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇಂದು […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 6 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ

Thursday, May 21st, 2020
dubai returnee

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಗುರುವಾರ 6 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದುಬೈನಿಂದ ಮೇ 18 ರಂದು ಬಂದ ಎರಡನೇ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿತ್ತು, ಅದರಲ್ಲಿ  6 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಪಾಸಿಟಿವ್ ಬಂದ 6 ಮಂದಿ ಪುರುಷರಾಗಿದ್ದು, ಐವರು ದ.ಕ ಜಿಲ್ಲೆಯವರಾಗಿದ್ದು ಓರ್ವ ಮಾತ್ರ ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿದ್ದಾರೆ ಮೇ 18 ರಂದು ದುಬೈನಿಂದ  178 ಮಂದಿ ಪ್ರಯಾಣಿಕರು ಬಂದಿದ್ದರು, ಅದರಲ್ಲಿ 110 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 61ಕ್ಕೇರಿದೆ. ಆ ಪೈಕಿ […]

ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು

Monday, May 18th, 2020
mangalore-covid

ಮಂಗಳೂರು : ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಸೋಮವಾರ ದ.ಕ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದ ರಾಯಗಡದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ 30 ವರ್ಷದ ವ್ಯಕ್ತಿ ಹಾಗೂ ಮಂಗಳೂರಿನ ಯಯ್ಯಾಡಿ ನಿವಾಸಿಯಾಗಿರುವ 55 ವರ್ಷದ ಮಹಿಳೆಯೂ ತೀವ್ರ ಉಸಿರಾಟದ ತೊಂದರೆ (SARI) ಹಾಗೂ ಜ್ವರದಿಂದ ಬಳಲುತ್ತಿದ್ದು, ತಪಾಸಣೆಗೆಂದು ಕೋವಿಡ್ ಆಸ್ಪತ್ರೆಗೆ ಬಂದಾಗ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಈವರೆಗೆ 54 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 48 ಪ್ರಕರಣಗಳು ಜಿಲ್ಲೆಯ ನಿವಾಸಿಗಳದ್ದಾಗಿದೆ.  ಈ ಪೈಕಿ 10 ಮಂದಿ ಗುಣಮುಖರಾಗಿದ್ದಾರೆ. […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೋವಿಡ್-19 ಸೋಂಕು ಪ್ರಕರಣ ಪತ್ತೆ

Friday, May 1st, 2020
Covid 19

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಒಬ್ಬರು ಗುರುವಾರ  ಸಾವನ್ನಪ್ಪಿದ ಮಹಿಳೆಯ ನೆರೆಮನೆಯಲ್ಲಿ ವಾಸವಿದ್ದವರು, ಇನ್ನೊಬ್ಬರು ಕೋವಿಡ್-19 ಪಾಸಿಟಿವ್ ಆಗಿದ್ದ ಮಹಿಳೆಯ ಪತಿ ಎಂದು ತಿಳಿದು ಬಂದಿದೆ. ಒಂದು ಪ್ರಕರಣ ಬಂಟ್ವಾಳದಲ್ಲಿ ದೃಢವಾದರೆ ಮತ್ತೊಂದು ಮಂಗಳೂರಿನ ಬೋಳೂರು ವ್ಯಕ್ತಿಗೆ ಸೋಂಕು ತಾಗಿರುವುದು ಖಚಿತವಾಗಿದೆ. ಬಂಟ್ವಾಳದ 69 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದೆ. ಇವರಿಗೆ ಸೋಂಕಿತ ಸಂಖ್ಯೆ 390ರ ಸಂಪರ್ಕದಿಂದ ಸೋಂಕು ತಾಗಿದೆ. ಏಪ್ರಿಲ್ 19ರಂದು ಕೋವಿಡ್-19 ಸೋಂಕಿಗೆ ಬಲಿಯಾದ ಮಹಿಳೆಯ ಸಂಬಂಧಿಯಾಗಿರುವ ಇವರು ಸಾವನ್ನಪ್ಪಿದ ಮಹಿಳೆಯ ನೆರೆಮನೆಯಲ್ಲಿ […]

ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ವೈರಸ್ ಬಂದಿದ್ದು ದುಬೈನಿಂದ

Friday, May 1st, 2020
corona-entry

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಗೆ  ಕೊರೋನಾ ವೈರಸ್ ಬಂದಿದ್ದು ವಿದೇಶದಿಂದ.  ಮಾರ್ಚ್ 22ರಂದು ಮೊದಲ ಕೋವಿಡ್ ಸೋಂಕು  ಜಿಲ್ಲೆಯಲ್ಲಿ  ಪತ್ತೆಯಾಗಿತ್ತು. ದುಬೈನಿಂದ ಆಗಮಿಸಿದ  ಯುವಕನೊಬ್ಬನಲ್ಲಿ ಕೋವಿಡ್‌-19  ವೈರಾಣು ಪತ್ತೆಯಾಗಿತ್ತು. ಮೇಲೆ ಎಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರು ಒಂದಿಲ್ಲೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೇರಿದ್ದು, ಆ ಪೈಕಿ ಓರ್ವ ಭಟ್ಕಳ, ಓರ್ವ ಉಡುಪಿ ಹಾಗೂ ನಾಲ್ವರು ಕೇರಳದವರಾಗಿದ್ದಾರೆ. ಉಳಿದ 16 ಮಂದಿ ದ.ಕ. ಜಿಲ್ಲೆಯವರು. ಒಟ್ಟು ಸೋಂಕಿತರ […]

ಕೋರೋನಾ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6ನೇ ಸ್ಥಾನಕ್ಕಿಳಿದಿದೆ

Monday, April 13th, 2020
Corona case

ಮಂಗಳೂರು : ಕೋರೋನಾ ಪ್ರಕರಣಗಳಲ್ಲಿ ಬೆಂಗಳೂರು, ‌ಮೈಸೂರು ನಂತರ 3 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6ನೇ ಸ್ಥಾನಕ್ಕಿಳಿದಿದೆ. ಜಿಲ್ಲೆಯ ಮಟ್ಟಿಗೆ ಇದು ಸಮಾಧಾನಕರ ಸಂಗತಿ. ಆದರೂ, ಇನ್ನೂ ಬಹಳಷ್ಟು ಜಾಗರೂಕರಾಗಿರಬೇಕಿದೆ.  ಜಿಲ್ಲೆಯಲ್ಲಿ 12 ಪ್ರಕರಣಗಳಲ್ಲಿ 8 ಮಂದಿ ಗುಣಮುಖರಾಗಿದ್ದಾರೆ. ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಸೋಮವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 26 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇನ್ನೂ 24 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ. ಜ್ವರದ ಹಿನ್ನೆಲೆಯಲ್ಲಿ 7 ಮಂದಿಯ ಮೇಲೆ ನಿಗಾ ಇಡಲಾಗಿದೆ. […]

ದಕ್ಷಿಣ ಕನ್ನಡ ಜಿಲ್ಲೆ ರವಿವಾರವೂ ಸಂಪೂರ್ಣ ಬಂದ್

Saturday, March 28th, 2020
Kota Srinivas

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಬಂದ್ ಅನಿವಾರ್ಯವಾಗಿದ್ದು, ಶನಿವಾರದಂತೆ ರವಿವಾರವೂ ಸಂಪೂರ್ಣ ಬಂದ್ ಆಗಿರಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರವೂ ಸಂಪೂರ್ಣ ಬಂದ್ ಮುಂದುವರಿಯಲಿದ್ದು, ಹಾಲು ವಿತರಣೆಗೆ ಸಂಪೂರ್ಣ ರಿಯಾಯಿತಿ ಇದೆ. ಮನೆ ಮನೆಗೂ ವಿತರಕರು ಹಾಲು ಹಾಕುತ್ತಾರೆ. ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಔಷಧಾಲಯ ಎಂದಿನಂತೆ ತೆರೆಯಲಿದೆ. ಔಷಧ ಖರೀದಿಗೆ ನಿಗದಿತ ಕಾರಣ ಇದ್ರೆ ಮಾತ್ರ ಅನುಮತಿಯಿದೆ. ಸಿಲಿಂಡರ್ ಪೂರೈಕೆ, ಪೆಟ್ರೋಲ್ ಬಂಕ್ ಗಳು ತೆರೆದಿರಲಿದೆ. […]

ಮಾರ್ಚ್ 28ರಂದು ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ಥಗಿತ : ಕೋಟ ಶ್ರೀನಿವಾಸ ಪೂಜಾರಿ

Saturday, March 28th, 2020
Kota

ಮಂಗಳೂರು : . ದ.ಕ. ಜಿಲ್ಲೆಯ ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ.  ಮಾರ್ಚ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವು ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 7 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದ.ಕ. ಜಿಲ್ಲೆಯ ಕಾಸರಗೋಡು, […]