Blog Archive

ಕಾಲು ಜಾರಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

Monday, October 28th, 2019
sachin

ಉಡುಪಿ : ಹೆಬ್ರಿ ಸಂತೆಕಟ್ಟೆಯ ಜೋಮ್ಲು ತೀರ್ಥ ಜಲಪಾತಕ್ಕೆ ತೆರಳಿ ನೀರು ಪಾಲಾಗಿದ್ದ ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯ ಕಾಡೂರು ಗಣಪೆ ನಿವಾಸಿ ಶೇಖರ್ ಶೆಟ್ಟಿ ಎಂಬುವರ ಪುತ್ರ ಸಚಿನ್ ಕುಮಾರ್ ಶೆಟ್ಟಿ (24) ಅವರ ಮೃತದೇಹ ಇಂದು ಪತ್ತೆಯಾಗಿದೆ. ಸಚಿನ್ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿಯ ರಜೆಗೆ ಊರಿಗೆ ಬಂದಿದ್ದರು. ಭಾನುವಾರದಂದು ಸಚಿನ್ ಸೇರಿದಂತೆ ಏಳು ಮಂದಿ ಜೋಮ್ಲು ತೀರ್ಥಕ್ಕೆ ತೆರಳಿದ್ದು, ಈ ವೇಳೆ ಸಚಿನ್ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನಂತರ ಈತ […]

ಸುಬ್ರಹ್ಮಣ್ಯ : ದೀಪಾವಳಿ ಹಿನ್ನೆಲೆ ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ

Monday, October 28th, 2019
Subrahmanya

ಸುಬ್ರಹ್ಮಣ್ಯ : ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ದೀಪಾವಳಿ ಹಿನ್ನೆಲೆ ಪುರಾತನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ದೀಪಾಳೆ ಪ್ರತಿಷ್ಠಾಪನೆ ಹಬ್ಬವನ್ನು ಸಂಭ್ರಮದಿಂದ ನೆರವೇರಿಸಲಾಯಿತು. ಕರಾವಳಿ ಪ್ರದೇಶಗಳಲ್ಲಿ ಪ್ರತೀ ವರ್ಷವು ಈ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ […]

ಮಂಗಳೂರಿನ ಲಕ್ಷ್ಮೀ ಪ್ಯಾನ್ಸಿ ಸೆಂಟರ್‌ನಲ್ಲಿ ದೀಪಾವಳಿಗೆ ಬಂದಿದೆ ಆಕರ್ಷಕ ಗೂಡುದೀಪಗಳು

Wednesday, October 23rd, 2019
gudu-deepa

ಮಂಗಳೂರು : ದೀಪಾವಳಿ ಎಂದರೆ ಬೆಳಕಿನ ಹಬ್ಬ, ಜೊತೆಗೆ ಸಾಂಪ್ರದಾಯಿಕ  ಬೆಳಕಿನ ದೀಪಗಳಿಂದ ಮನೆಯನ್ನು ಅಂಗಡಿಗಳನ್ನು ಶೃಂಗರಿಸುವ ಹಬ್ಬ. ಒಂದು ಕಡೆ ಪಟಾಕಿಗಳ ಗೌಜಿಯಾದರೆ, ಮನೆಯೋಳಗೆ ಸಿಹಿ ಸವಿಯುವ ಸಂಭ್ರಮ. ಈ ಬಾರಿ ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು ದೀಪಗಳು ನಾನಾ ಅಕಾರದಲ್ಲಿ ಗ್ರಾಹಕರನ್ನು […]

ಈ ಬಾರಿಯ ದೀಪಾವಳಿಗೆ ಮಂಗಳೂರಿಗೆ ಬಂದಿದೆ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು

Saturday, November 3rd, 2018
VivekTraders

ಮಂಗಳೂರು  : ದೀಪಗಳ ಹಬ್ಬ ದೀಪಾವಳಿಗೆ ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಎಲ್ಲರ ಮನೆಯನ್ನೂ ಬೆಳಗಿಸಲೂ ಇದೀಗ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮನೆಯಲ್ಲೆ ತಯಾರಿಸಬಹುದಾದ ಈ ಆಕಾಶ ಬುಟ್ಟಿಯನ್ನು ನಾವು ಇಲ್ಲಿಯವೆರೆಗೆ ಚೀನಾದಿಂದ ಖರೀದಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಬಂದೊಂದಗಿತ್ತು!! ಆದರೆ ಈ ಬಾರಿ ಚೀನಾದ ಆಕಾಶ ಬುಟ್ಟಿಗೆ ಗುಡ್ ಬೈ ಹೇಳುವ ಸಂದರ್ಭ ಬಂದಿದ್ದು ಸಮರ್ಪಣಾ ಟ್ರಸ್ಟ್ ನಿಂದ ಮಾರುಕಟ್ಟೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಪರಿಚಯಿಸಿದ್ದಾರೆ. […]

ಆಳ್ವಾಸ್‌ನಲ್ಲಿ ದೀಪಾವಳಿ ಸಾಂಸ್ಕೃತಿಕ ಸಂಭ್ರಮ

Saturday, November 11th, 2017
alvas

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಸಾಯಂಕಾಲ ‘ಆಳ್ವಾಸ್ ದೀಪಾವಳಿ 2017 ಸಾಂಸ್ಕೃತಿಕ ವೈಭವ ನಡೆಯಿತು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾತೀರ್ಥ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಆಳ್ವಾಸ್ ಮುಖ್ಯಸ್ಥ ಡಾ.ಎಂ ಮೋಹನ ಆಳ್ವ, ತುಳುನಾಡಿನ ಸಾಂಪ್ರಾದಾಯಿಕ ತುಳಸೀ ಪೂಜೆ, ಕೃಷಿ ಪರಿಕರಗಳಿಗೆ ಪೂಜೆ, ಸರಸ್ವತಿ ಪೂಜೆ, ಲಕ್ಷ್ಮೀ ಪೂಜೆ, ಗೋಪೂಜೆ ನೆರವೇರಿಸಿದರು. ಕದ್ರಿ ನವನೀತ ಶೆಟ್ಟಿ ಬಲೀಂದ್ರ ಪೂಜೆ ಮಹತ್ವವನ್ನು ತಿಳಿಸಿದರು. ಚೌಟರ […]

ಮೂಡಬಿದಿರೆ: ದೀಪಾವಳಿ ಪ್ರಯುಕ್ತ ಗಾಣಿಗರ ಸಂಘದಿಂದ ಗೂಡುದೀಪ ಸ್ಪರ್ಧಾ ಸಂಭ್ರಮ

Thursday, October 19th, 2017
gududeepa computition

ಮಂಗಳೂರು: ಸಪಲಿಗರ ಯಾನೆ ಗಾಣಿಗರ ಸಂಘದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಮೂಡಬಿದಿರೆಯ ಬೆಟ್ಕೇರಿ ಫ್ರೆಂಡ್ಸ್‌, ತುಳು ಕೂಟ ಬೆದ್ರ ಇವುಗಳ ಸಹಭಾಗಿತ್ವದಲ್ಲಿ ಸಮಾಜ ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ಏರ್ಪಡಿಸಿದ್ದ ಹತ್ತನೇ ವರ್ಷದ ಗೂಡುದೀಪ ಸ್ಪರ್ಧಾ ಸಂಭ್ರಮೋತ್ಸವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಂದ 113 ಪ್ರವೇಶಿಕೆಗಳು ಗಮನ ಸೆಳೆಯುವಂತಿದ್ದವು. ಟೂತ್‌ಪೇಸ್ಟ್‌ ಟ್ಯೂಬು, ಮುಚ್ಚಳಗಳನ್ನು ಬಳಸಿ 8 ತಿಂಗಳ ಪರಿಶ್ರಮದಿಂದ ಮಂಗಳೂರು ರಥಬೀದಿಯ ವಿಠಲ್‌ ಭಟ್‌ ಅವರು ನಿರ್ಮಿಸಿದ ಗೂಡುದೀಪದಲ್ಲಿ ದೊಡ್ಡ ಗಾತ್ರದ 912, ಸಣ್ಣ ಗಾತ್ರದದ 1455 […]

ಮಂಗಳೂರು ದೀಪಾವಳಿ ಹಬ್ಬಕ್ಕೆ ಸಾಮಗ್ರಿ ಖರೀದಿಯಲ್ಲಿ ಜನರು

Wednesday, October 18th, 2017
diwali

ಮಂಗಳೂರು: ಜಿಎಸ್‌‌ಟಿ ಬಿಸಿ ಇದ್ದರೂ ಮನೆ, ಮನ ಬೆಳಗುವ ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸಗಳ ಗೂಡು ದೀಪ, ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಿಂದೆ ಮನೆಗಳಲ್ಲಿಯೇ ಗೂಡು ದೀಪಗಳು ತಯಾರಾಗುತ್ತಿದ್ದವು. ಆದರೆ ಇಂದು ನಿರಾಸಕ್ತಿಯ ಜೊತೆಗೆ ಮೈತುಂಬ ಕೆಲಸಗಳ ಮಧ್ಯೆ ಇಂತಹ ಕುಸುರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಅತ್ಯಾಕರ್ಷಕ ಗೂಡು ದೀಪಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಉದ್ಯೋಗ ನಿಮಿತ್ತ ಉತ್ತರ ಕರ್ನಾಟಕದಿಂದ ಮಂಗಳೂರಿನಲ್ಲಿ […]

ಕದ್ರಿ ಮೈದಾನದಲ್ಲಿ ಮನರಂಜಿಸಿದ ಮಣಿಕಾಂತ್ ಕದ್ರಿ ಸ್ಟಾರ್ ನೈಟ್

Tuesday, November 1st, 2016
kadri

ಮಂಗಳೂರು: ಕದ್ರಿ ಕ್ರಿಕೇಟರ್ಸ್ ರಿ. ದೀಪಾವಳಿ ಪ್ರಯುಕ್ತ ಆಯೋಜಿಸಿದ 9ನೇ ವರ್ಷದ ಮಣಿಕಾಂತ್ ಕದ್ರಿ ಸ್ಟಾರ್ ನೈಟ್, ದೀಪಾವಳಿ ಸಂಬ್ರಮದಲ್ಲಿದ್ದ ಮಂಗಳೂರಿಗರನ್ನು ಕದ್ರಿ ಮೈದಾನದಲ್ಲಿ ಭಾನುವಾರ ಮನರಂಜಿಸಿತು. 5 ಜನ ಯೋಧರ ಜೊತೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ದೀಪಬೇಳಗಿಸಿ ಸಂಗೀತ ರಸ ಸಂಜೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಯೋಧರಿಗೆ, ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜಸೇವಕ ಬದ್ರಿನಾಥ್ ಕಾಮತ್ ತಲಾ ಹತ್ತು ಸಾವಿರ ರೂಪಾಯಿ ನಗದನ್ನು 5 ಜನ ಯೋಧರಿಗೆ ಕೊಡುಗೆಯಾಗಿ […]

ದೀಪಗಳ ಹಬ್ಬ ದೀಪಾವಳಿಯಲ್ಲಿ ಕತ್ತಲು ಬದುಕಿಗೆ ಬೆಳಕು ಮೂಡಲಿ

Tuesday, November 13th, 2012
Mahabaaratha

ಮಂಗಳೂರು :ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿ ಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತ ಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಈ ಮನಸ್ಥಿತಿ ಚಿರಸ್ಥಾಯಿಯಾಗಲು ಕಾರಣವೂ ಇರಬಹುದು. ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತು ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ […]

ಮಂಗಳೂರಿನಲ್ಲಿ ಎಲ್ಲೆಲ್ಲೂ ದೀಪಗಳ ತೋಪು

Friday, November 5th, 2010
ದೀಪಗಳ ತೋಪು

ಮಂಗಳೂರು: ದ.ಕ ಜಿಲ್ಲೆಯ ನಾನಾ ಭಾಗಗಳಲ್ಲಿ ಈಚೆಗೆ ನಡೆದ ದಸರಾ-ನವರಾತ್ರಿ ಹಬ್ಬಗಳ ಬಗ್ಗೆ ನೀವು ತಿಳಿದಿರುವಿರಿ. ಈಗ ದೀಪಾವಳಿ ಮೆಲುಗಾಲಿನಲ್ಲಿ ಈ ಕೃಷ್ಣಪಕ್ಷದಲ್ಲಿ ಕಾಲಿಟ್ಟಿದೆ (ನವೆಂಬರ್ 5,6,7). ಈ ಮೂರು ದಿನಗಳು ರಜಾದಿನಗಳಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ. ಗುರುವಾರ ಸಂಜೆಯೇ ಮರುದಿನ ಬೆಳಗ್ಗಿನ ಎಣ್ಣೆ ಸ್ನಾನಕ್ಕಾಗಿ ಬಾವಿಯಿಂದ ನೀರು ತುಂಬುವ ಸಡಗರ ಆಗಿಹೋಗಿದೆ. ಹಂಡೆಗೆ ಹೂವಿನ ಅಲಂಕಾರ, ಶುಭಾಶಯದ ಬಿಳಿ, ಕೆಂಪು ಗೆರೆಗಳು ಮುದ್ರೆಗಳು ಬಿದ್ದಿವೆ. ಹುಡುಗರು ನೀರು ತುಂಬುವಲ್ಲಿ ಜಾಗಟೆ ಬಾರಿಸಿದ್ದೂ ಹೌದು. ಶುಕ್ರವಾರ ಬೆಳಗ್ಗಿನ ಉಷೆಯಿನ್ನೂ […]