ದ್ವಂದ್ವಗಳನ್ನು ಮೀರಿದ ಸಂತೋಷ ಭಗವತ್ ಚಿಂತನೆಯಿಂದ ಮಾತ್ರ ಸಾಧ್ಯ: ಯೋಗಾನಂದ ಸರಸ್ವತಿ
Tuesday, September 20th, 2016ಬೆಳ್ತಂಗಡಿ: ಪ್ರಪಂಚವೇ ದ್ವಂದ್ವಗಳಿಂದ ಕೂಡಿದೆ. ದ್ವಂದ್ವಗಳನ್ನು ಮೀರಿದ ಸಂತೋಷ ಭಗವತ್ ಚಿಂತನೆಯಿಂದ ಮಾತ್ರ ಸಾಧ್ಯ. ಭಜನೆ ಮನಸ್ಸುಗಳನ್ನು ಬೆಸೆದು ಲೋಕಕ್ಕೆ ಶಾಂತಿ ನೀಡುತ್ತದೆ ಎಂದು ಮಂಜೇಶ್ವರದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ರವಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ 18ನೇ ವರ್ಷದ ಭಜನ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಮನಸ್ಸಿಗೆ ಸಂಸ್ಕಾರ ದೊರೆಯಬೇಕು. ನಮಗೆ ಮನಸ್ಸೇ ಮಿತ್ರ, ಮನಸ್ಸೇ ಶತ್ರು. ನಮ್ಮನ್ನು […]