ಸ್ಕೂಟರ್‌ಗೆ ಲಾರಿ ಡಿಕ್ಕಿ, ಪೆಟ್ರೋಲ್ ಪಂಪ್ ಮ್ಯಾನೇಜರ್ ಮೃತ್ಯು

Saturday, June 8th, 2024
Rama-Naik

ಬಂಟ್ವಾಳ : ಲಾರಿಯೊಂದು ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ, ಸಜೀಪ ಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ರಾಮನಾಯ್ಕ (47) ಮೃತಪಟ್ಟ ವ್ಯಕ್ತಿ. ರಾಮನಾಯ್ಕ ಅವರು ಸ್ಕೂಟರ್‌ನಲ್ಲಿ ಬಿಸಿರೋಡಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದರು. ಈ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಚಾಲಕ ರಾಮನಾಯ್ಕ ಅವರು ತೆರಳುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ […]

ಮಂಗಳೂರು : ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದು 13ಕ್ಕೂ ಅಧಿಕ ವಾಹನಗಳು ಜಖಂ

Saturday, July 17th, 2021
APMC-compound

ಮಂಗಳೂರು :  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶಿಥಿಲಗೊಂಡ ಅವರಗೋಡೆಯೊಂದು ಬಿದ್ದು ಸುಮಾರು ಹದಿಮೂರು ದ್ವಿಚಕ್ರವಾಹನಗಳು ಜಖಂ ಗೊಂಡ ಘಟನೆ ಶನಿವಾರ ಸಂಜೆ ಮಂಗಳೂರು ಹಳೆಯ ಬಂದರ್‌ ನಲ್ಲಿ ನಡೆದಿದೆ. ಬಂದರ್‌ನ ನಲಪಾಡ್ ಕುನಿಲ್ ಟವರ್ಸ್‌ಗೆ ಹೊಂದಿಕೊಂಡಂತಿರುವ ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದ ಪರಿಣಾಮ  13ಕ್ಕೂ ಅಧಿಕ ವಾಹನಗಳು ಜಖಂಗೊಂಡಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ನೂರಕ್ಕೂ ಹೆಚ್ಚು ಫ್ಲಾಟ್‌ಗಳಿದ್ದು, ಬಹುತೇಕ ಮಕ್ಕಳು ಕಟ್ಟಡದ ಆವರಣದಲ್ಲಿ ಆಟ ಆಡುವಾಡುತ್ತಾರೆ, ಅದೃಷ್ಟವಶಾತ್ ಶನಿವಾರ ಸಂಜೆ ವೇಳೆ ಮಳೆ ಬರುತ್ತಿದ್ದರಿಂದ ಮಕ್ಕಳು ಹೊರಬಂದಿಲ್ಲ. […]