ಧರ್ಮಸ್ಥಳ ಲಕ್ಷ ದೀಪೋತ್ಸವ : ಕನ್ನಡ ಭಾಷೆ ಉಳಿಸಿ, ಬೆಳೆಸಲು ತಂತ್ರಜ್ಞಾನದ ಬಳಕೆ; ಡಾ.ಅಶ್ವತ್ಥನಾರಾಯಣ
Wednesday, November 27th, 2019ಉಜಿರೆ : ಇಂಗ್ಲಿಷ್ ವ್ಯಾಮೋಹದಿಂದಕ ನ್ನಡವನ್ನುಕಡೆಗಣಿಸಬಾರದು. ನಮ್ಮಕನ್ನಡ ನಾಡು, ನುಡಿ, ಸಂಸ್ಕೃತಿಯಲ್ಲಿ ನಮ್ಮತನವನ್ನು ಉಳಿಸಿಕೊಳ್ಳಬೇಕು.ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೂರು ವರ್ಷಗಳೊಳಗೆ ಕನ್ನಡವನ್ನುಆದರ್ಶ ಹಾಗೂ ಉತೃಷ್ಟ ಭಾಷೆಯಾಗಿ ಅಭಿವೃದ್ಧಿ ಪಡೆಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಡಾ.ಅಶ್ವತ್ಥನಾರಾಯಣ ಹೇಳಿದರು. ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿಅಮೃತವರ್ಷಿಣಿ ಸಭಾ ಭವನದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 87ನೆ ಅಧಿವೇಶನವನ್ನುಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಭಾಷೆಯನ್ನು ಬಳಸಿದಷ್ಟು ಅದು ಹೆಚ್ಚು ಬೆಳೆಯುತ್ತದೆ.ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು ಹಾಗೂ ಬೆಳೆಸಬೇಕು ಎಂದುಅವರು ಸಲಹೆ ನೀಡಿದರು. ಮುಂದಿನ ವರ್ಷಅಂದರೆ […]