Blog Archive

ಧಾರವಾಡ: 4 ಕೋವಿಡ್ ಪಾಸಿಟಿವ್ ಪ್ರಕರಣ

Wednesday, June 24th, 2020
Deepa-cholan

ಧಾರವಾಡ: ಜಿಲ್ಲೆಯಲ್ಲಿ ಇಂದು 4 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಪಿ- 9416 (55 ವರ್ಷ, ಪುರುಷ) ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಪಿ- 9417 ( 57 ವರ್ಷ ,ಪುರುಷ ) ನೆಗಡಿ, ಕೆಮ್ಮು ,ತೀವ್ರ ಜ್ವರದಿಂದ (ಐಎಲ್ಐ) ಬಳಲುತ್ತಿದ್ದರು.ಪಿ-9418 ( 36 ವರ್ಷ,ಪುರುಷ ) ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು. ಪಿ -9419 ( 43 ವರ್ಷ,ಪುರುಷ ) ಪಿ.8289 ಅವರೊಂದಿಗೆ ಸಂಪರ್ಕ […]

ಧಾರವಾಡ : 2 ವರ್ಷದ ಮಗು ಸಹಿತ ಒಂದೇ ಕುಟುಂಬದ ಮೂವರಿಗೆ ಕೊರೋನಾ ಪಾಸಿಟಿವ್‌

Tuesday, May 26th, 2020
Kims

ಧಾರವಾಡ: ಮಹಾರಾಷ್ಟ್ರದಿಂದ ಅಗಮಿಸಿದ್ದವರೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೋನಾ ಸೋಂಕು ತಗುಲುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50ರ ಗಡಿಯ ಸಮೀಪಕ್ಕೆ ಬಂದು ನಿಂತಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ. ಸೋಂಕು ತಗಲಿರುವವರಲ್ಲಿ ಮುದ್ದು ಮಗುವೊಂದು ಕೂಡ ಇದೆ. ಇದರೊಂದಿಗೆ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿರುವ ಇವರಲ್ಲಿ 33 ವರ್ಷದ ಮಹಿಳೆ, 17 ವರ್ಷದ ಯುವಕ ಮತ್ತು 2 ವರ್ಷ 5 ತಿಂಗಳಿನ ಮಗುವೊಂದು ಇದೆ. ಇವರು ಈ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದವರೊಂದಿಗೆ ಸಂಪರ್ಕ ಹೊಂದಿದ್ದರು. […]

ಕೃಷ್ಣಮೃಗದ ಚರ್ಮ ಮಾರಾಟಕ್ಕೆ ಯತ್ನಿಸಿದ ನಾಲ್ವರ ಬಂಧನ

Tuesday, September 24th, 2019
krishna-mruga

ಮಂಗಳೂರು : ನಗರದ ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಕೃಷ್ಣಮೃಗ ಚರ್ಮ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟ್ನಾಳ್ ನಿವಾಸಿಗಳಾದ ರವಿ ಹನುಮಂತಪ್ಪ (32), ಮಲ್ಲಪ್ಪ (32), ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ನಿವಾಸಿಗಳಾದ ಪರಶುರಾಮ ಲಮಾಣಿ (32), ಟಿಪ್ಪು ಸುಲ್ತಾನ್ (33) ಎಂದು ಗುರುತಿಸಲಾಗಿದೆ. ಸೆ.23ರ ಬೆಳಗ್ಗೆ 8:30ಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ನಾಲ್ವರು ಅನುಮಾನಾಸ್ಪದವಾಗಿ […]

ಬಿಜೆಪಿ ಶಾಸಕ ಸಿ.ಎಂ‌. ನಿಂಬಣ್ಣನವರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

Saturday, September 15th, 2018
nimbannanavar

ಹುಬ್ಬಳ್ಳಿ: ಕಲಘಟಗಿ ಬಿಜೆಪಿ ಶಾಸಕ ಸಿ.ಎಂ‌. ನಿಂಬಣ್ಣನವರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.ತೀವ್ರ ಗಂಟಲು‌ ನೋವಿನಿಂದ‌ ಬಳಲುತ್ತಿದ್ದ ಶಾಸಕ ಸಿ.ಎಂ.‌ನಿಂಬಣ್ಣವರ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯಲ್ಲಿಯೇ ನಿಂಬಣ್ಣವರ್ಗೆ ಚಿಕಿತ್ಸೆ ಮುಂದುವರೆದಿದೆ. ಧಾರವಾಡ ಜಿಲ್ಲೆ‌‌‌ ಕಲಘಟಗಿ‌ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಇವರು, ಕಳೆದ ಚುನಾವಣೆಯಲ್ಲಿ ಅಂದು ಸಚಿವರಾಗಿದ್ದ ಸಂತೋಷ್ ಲಾಡ್ರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಧಾರವಾಡ : ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ

Monday, July 30th, 2018
Milan

ಧಾರವಾಡ : ಹೆಣ್ಣು ಮಕ್ಕಳು ತಮ್ಮ ಗುರಿಗಳನ್ನು ತಲುಪಲು ನಿರ್ದಿಷ್ಟವಾದ ಯೋಜನೆಗಳನ್ನು ಹಮ್ಮಿಕೊಂಡು ಅದರ ಯಶಸ್ಸಿಗೆ ಶ್ರಮಿಸುತ್ತ ಸತತ ಪ್ರಯತ್ನ ಮಾಡಬೇಕೆಂದು ಧಾರವಾಡ ಜಿಲ್ಲಾ ಪಂಚಾಯತ ಸಿ.ಇ.ಓ ಸ್ನೇಹಲ್ ಆರ್ ಅವರು ಹೇಳಿದರು. ಅವರು ಇತ್ತೀಚೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಾಧನ ಸಂಸ್ಥೆ ಸಂಸ್ಥಾಪಕಿ ಇಸಾಬೆಲ್ ಮಾತನಾಡಿ, ಹೆಣ್ಣುಮಕ್ಕಳ ಇಂದಿನ ಚಿಂತಾಜನಕ ಪರಿಸ್ಥಿತಿ ಈಗಾಗಲೇ ಎಲ್ಲರಿಗೂ […]

ಕೂಲಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Tuesday, July 24th, 2018
protest

ಧಾರವಾಡ: ರೈತರು, ಕೂಲಿ ಕಾರ್ಮಿಕರ ಬೇಡಿಕೆ ಹಾಗೂ ಬೆಳೆವಿಮೆ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಬ್ಯಾಂಕ್ ಅಧಿಕಾರಿಗಳು ಬೆಳೆವಿಮೆ ಹಣವನ್ನು ರೈತರ ಸಾಲಕ್ಕೆ ಜಮಾ ಮಾಡುತ್ತಿದ್ದಾರೆ. ಅದನ್ನು ನೇರವಾಗಿ ರೈತರಿಗೆ ನೀಡಬೇಕು. ಸಣ್ಣ ,ಅತಿ ಸಣ್ಣ ರೈತ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೈತರ ಬೆಳೆಸಾಲ […]

ಉಡುಪಿಯಲ್ಲಿ ಮಾನಸಿಕ ಅಸ್ವಸ್ಥನ ರಂಪಾಟ, ಉಗ್ರ ಪ್ರತಾಪ

Saturday, February 24th, 2018
udupi

ಉಡುಪಿ: ನಗರದ ಮಲ್ಪೆ, ವಡಭಾಂಡೇಶ್ವರ, ಹೂಡಿ, ಆದಿಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ಮಾನಸಿಕ ರೋಗಿಯೊರ್ವ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಾ, ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡುತ್ತಾ, ಪರಿಸರದಲ್ಲಿ ಉಗ್ರಪ್ರತಾಪ ತೋರಿದ್ದಾನೆ. ಸುಮಾರು 30 ವರ್ಷದ ಈ ಯುವಕನನ್ನು ಈಗ ಕಾನೂನು ಪ್ರಕ್ರಿಯೆ ಮೂಲಕ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವ್ಯಕ್ತಿಯ ರಂಪಾಟಕ್ಕೆ ಮಲ್ಪೆ ಮತ್ತು ಆಸುಪಾಸಿನ ಪರಿಸರದಲ್ಲಿ ಬಹಳಷ್ಟು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದರು. ಸಾರ್ವಜನಿಕರ ತಲೆಗೆ ಗುರಿ ಇಟ್ಟು ಕಲ್ಲು ಹೊಡೆಯುವುದು, ಸೋಡಾ […]

ಜಾತಿ, ಮತ, ಪಂಥ ಎಲ್ಲವನ್ನು ಒಗ್ಗೂಡಿಸಲು ಕಲೆಯಿಂದ ಸಾಧ್ಯ: ನಳಿನ್ ಕುಮಾರ್

Saturday, January 20th, 2018
nalin-kumar

ಮಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದ್ಭುತವಾದ ಕಲಾಪ್ರಕಾರಗಳು, ಹತ್ತಾರು ಕಲಾ ಸಂಸ್ಕೃತಿ ಒಕ್ಕೂಟಗಳಿರುವ ದೇಶ ಭಾರತ. ಕಲೆಯಲ್ಲಿ ದೇವರನ್ನು ಕಂಡ ಏಕೈಕ ದೇಶ ಭಾರತ. ಕಲಾವಿದರನ್ನು ಸಂತರೆಂದು ಪೂಜಿಸುತ್ತೇವೆ. ಜಾತಿ, ಮತ, ಪಂಥ ಎಲ್ಲವನ್ನು ಒಗ್ಗೂಡಿಸಲು ಕಲೆಯಿಂದ ಮಾತ್ರ ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೇರೆ ಬೇರೆ ರಾಜ್ಯಗಳಿಗೆ, […]