ನಮ್ಮ ಲೆಕ್ಕ ಕೇಳಲು ಅಮಿತ್ ಶಾ ಯಾರು? ಸಿಎಂ ಕಿಡಿ
Thursday, January 11th, 2018
ಮೈಸೂರು: ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ ಎಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿರುಗೇಟು ನೀಡಿದ್ದು ‘ನಮ್ಮ ಲೆಕ್ಕ ಕೇಳಲು ಶಾ ಯಾರು’ ಎಂದು ಪ್ರಶ್ನಿಸಿದ್ದಾರೆ. ಎಚ್‌ಡಿ ಕೋಟೆಯ ಸರಗೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಕೇಂದ್ರ ಸರಕಾರ ಕಾನೂನಾತ್ಮಕವಾಗಿ ನಮಗೆ ನೀಡಬೇಕಾಗಿದ್ದ ನಮ್ಮ ತೆರಿಗೆ ಪಾಲನ್ನು ಕೊಟ್ಟಿದ್ದಾರೆ. ನಾವು ಖರ್ಚು ಮಾಡಿದ ಲೆಕ್ಕವನ್ನು ರಾಜ್ಯದಜನರಿಗೆ ನೀಡಬೇಕೆ ಹೊರತು ಶಾಗೆ ಅಲ್ಲ. ಅದನ್ನು ಕೇಳಲು ಅವರು ಯಾರು’ ಎಂದರು. […]