ಮಸ್ಕತ್‌ನಲ್ಲಿ ಶನೀಶ್ವರ ಪೂಜಾ ತಾಳಮದ್ದಳೆ

Monday, April 9th, 2018
shanishwara

ಮಂಗಳೂರು: ಒಮಾನ್ ರಾಷ್ಟ್ರದ ಮಸ್ಕತ್‌ನ ಬಿರುವ ಜವಣೆರ್ ವಾಟ್ಸ್‌ಆಪ್ ಗ್ರೂಪ್ ಆಯೋಜನೆಯಲ್ಲಿ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ಪೂಜೆ ಮಸ್ಕತ್ ವಾರ್‌ಸೈಟ್ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ತುಳುನಾಡಿನ ಸುಮಾರು ಸಾವಿರದ ಇನ್ನೂರು ಮಂದಿ ಭಕ್ತರು, ಯಕ್ಷಗಾನಾಭಿಮಾನಿಗಳು ಒಮಾನ್ ರಾಷ್ಟ್ರದಲ್ಲಿ ಜರಗಿದ ಪ್ರಪ್ರಥಮ ಶನೀಶ್ವರ ಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಬಿ.ಜೆ ಗ್ರೂಪ್ ಖ್ಯಾತಿಯ ಬಿರುವ ಜವಣೆರ್ ಸಂಘಟನ ಸಮಾನ ಮನಸ್ಕರ ವಾಟ್ಸ್‌ಆಪ್ ಕೂಟವಾಗಿದ್ದು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಮಿತ್ರ ಬಳಗ, ಧಾರ್ಮಿಕ […]

ಶ್ರೀ ಶಾರದಾ ಯಕ್ಷಗಾನ ಮಂಡಳಿಯ ನೂತನ ಸಭಾಂಗಣದ ಉದ್ಘಾಟನೆ

Wednesday, January 24th, 2018
yakshagana

ಬಜ್ಪೆ : ಸದಾಚಾರ ಹಾಗೂ ನಿಸ್ವಾರ್ಥವಾಗಿ ಮಾಡುವ ಸಾಮಾಜಿಕ ಕಳಕಳಿಯ ಸೇವೆಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದು ಖಚಿತ. ನಮ್ಮ ಗಳಿಕೆಯ ಸಂಪನ್ಮೂಲ ಸದ್ವಿನಿಯೋಗವಾಗಬೇಕು ಎಂದು ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ ಅವರು ಹೇಳಿದರು. ಅವರು ಪೆರ್ಮುದೆ-ಸೋಮನಾಥಧಾಮ- ಶ್ರೀ ಶಾರದಾ ಯಕ್ಷಗಾನ ಮಂಡಳಿಯ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಚಿತ್ರನಟ, ಉದ್ಯಮಿ ಗಿರೀಶ್ ಎಂ. ಶೆಟ್ಟಿ ಕಲ್ಪವೃಕ್ಷ ಅವರು ಸೇವಾ ರೂಪದಲ್ಲಿ ಸಮರ್ಪಿಸಿದ ನೂತನ ಸಭಾಂಗಣವನ್ನು ಅವರ […]

ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕದಿಂದ ತೆಂಕುತಿಟ್ಟು ಹವ್ಯಾಸಿ ಕಲಾವಿದರ ಸಮಾವೇಶ

Wednesday, January 17th, 2018
bus-malaka

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಹವ್ಯಾಸಿ ಘಟಕದ ವತಿಯಿಂದ ಯಕ್ಷಗಾನ ತೆಂಕುತಿಟ್ಟು ಹವ್ಯಾಸಿ ಕಲಾವಿದರ ಸಮಾವೇಶ ಫೆಬ್ರವರಿ 18ರಂದು ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 9.00ರ ತನಕ ಮಂಗಳೂರು ಪುರಭವನದಲ್ಲಿ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಲ್ಲಾಲ್‌ಬಾಗ್ ಪತ್ತುಮುಡಿ ಸೌಧದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಬಸ್ಸು ಮಾಲಕರ ಫೆಡರೇಶನ್‌ನ ಉಪಾಧ್ಯಕ್ಷ ಎ.ಕೆ ಜಯರಾಮ ಶೇಖ ಬಿಡುಗಡೆಗೊಳಿಸಿದರು. ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಇಂದು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಕೆಲಸ […]