Blog Archive

ಉರ್ವಾ ಕೆನರಾ ಪ್ರೌಢ ಶಾಲೆ ಅಧ್ಯಾಪಕ ಹೃದಯಾಘಾತದಿಂದ ನಿಧನ

Sunday, May 23rd, 2021
Ravindranath

ಮಂಗಳೂರು: ಕೆನರಾ ಪ್ರೌಢ ಶಾಲೆ ಉರ್ವಾದ ಅಧ್ಯಾಪಕ ಬಹುಮುಖ ಪ್ರತಿಭೆ ರವೀಂದ್ರನಾಥ ಶೆಟ್ಟಿ(44) ಅವರು ಹೃದಯಾಘಾತದಿಂದ ಭಾನುವಾರ  ನಿಧನರಾದರು. ಮೂಲತಃ ಬಾಕ್ರಬೈಲಿನವರಾಗಿರುವ ಅವರು ಕೆನರಾ ಪ್ರೌಢ ಶಾಲೆಯಲ್ಲಿ ಸುಮಾರು 9  ವರ್ಷಗಳಿಂದ  ಅಧ್ಯಾಪಕರಾಗಿದ್ದರು. ಎಂಎ, ಎಂಫಿಲ್ ಪದವೀಧರರಾಗಿದ್ದು, ಎನ್‌ಸಿಸಿ ಅಧಿಕಾರಿಯೂ ಆಗಿದ್ದರು. ಎನ್‌ಸಿಸಿಯ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಯಕ್ಷಗಾನ ಮತ್ತು ರಂಗಭೂಮಿ ಕಲಾವಿದರಾಗಿದ್ದ ಅವರು, ಉತ್ತಮ‌ ಕಾರ್ಯಕ್ರಮ‌‌ ನಿರ್ವಾಹಕರೂ ಆಗಿ ಜನಮೆಚ್ಚುಗೆ ಗಳಿಸಿದ್ದರು. ಪತ್ನಿ ದಿವ್ಯಾ, ಮೂರು ವರ್ಷದ ಮಗು ಸೇರಿದಂತೆ ಅಪಾರ ಬಂಧು […]

ವರನಟ ಡಾ. ರಾಜ್‌ಕುಮಾರ್ ಅವರ ಯೋಗಗುರು ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ್ ನಿಧನ

Thursday, May 20th, 2021
Pakirappa

ಬೆಂಗಳೂರು: ಕೆಎಸ್‌ಆರ್‌ಪಿ ನಿವೃತ್ತ ಡಿಐಜಿ, ವರನಟ ಡಾ. ರಾಜ್‌ಕುಮಾರ್ ಅವರ ಯೋಗಗುರುಗಳಾಗಿದ್ದ ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ್ (85) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ,ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಧಾರವಾಡದ ಕುಂದಗೋಳ ಮೂಲದವರಾಗಿದ್ದ ನಾಯ್ಕರ್ ಕಳೆದ ಐದು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು, ಕನಕಪುರ ರಸ್ತೆ ಬಿ.ಎಂ.ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸುವ ಮೂಲಕ ಡಾ.ರಾಜ್‌ಕುಮಾರ್ ಸೇರಿ ವಿವಿಧ ಕ್ಷೇತ್ರದ ಗಣ್ಯರಿಗೆ ಹಠಯೋಗದ ಸಾಧನೆ ಮಾಡಿಸಿದ್ದರು. ಡಾ. ಎಚ್.ಎಫ್. ನಾಯ್ಕರ ಬೆಂಗಳೂರಿನ ಕನಕಪುರ […]

ಹಿರಿಯ ಕಲ್ಲಂಗಡಿ ಕೃಷಿಕ, ಶತಾಯುಷಿ ಕೆ.ಸೇಸು ಸಪಲ್ಯ ನಿಧನ

Monday, March 15th, 2021
Sesu Sapalya

ಬಂಟ್ವಾಳ: ಇಲ್ಲಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಂಚೇಶ್ವರ ನಿವಾಸಿ, ಹಿರಿಯ ಕಲ್ಲಂಗಡಿ ಕೃಷಿಕ ಶತಾಯುಷಿ ಕೆ.ಸೇಸು ಸಪಲ್ಯ (102) ಇವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಎ. ವಿಶ್ವನಾಥ್ ಬಿ.ಸಿ.ರೋಡು ಸಹಿತ ಮೂವರು ಪುತ್ರರು ಮತ್ತು ಏಳು ಮಂದಿ ಪುತ್ರಿಯರು ಇದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿ, ತರಕಾರಿ ಮತ್ತು ಕಲ್ಲಂಗಡಿ ಕೃಷಿ ಜೊತೆಗೆ ಜಾನಪದ ಕ್ರೀಡೆ ಕಂಬಳ ಪ್ರೇಮಿಯಾಗಿ, ಪೊಳಲಿ ವಲಯ ಗಾಣಿಗ […]

ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಧರ್ಮಪಾಲ್ ಪಿ ನಿಧನ

Sunday, December 27th, 2020
Dharmapala

ಉಡುಪಿ : ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ, ಉದ್ಯಮಿ  ಧರ್ಮಪಾಲ್ ಪಿ (74) ಇವರು ಡಿ. 27 ರಂದು ಮುಂಜಾನೆ ಹೃದಯಘಾತದಿಂದಾಗಿ ಪಡುಬಿದ್ರೆಯ ಕಡಿಪಟ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಒರ್ವ ಪುತ್ರ ಹಾಗೂ ಒರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲ್ಲಿದ್ದಾರೆ. ಮೂಲತಃ ಪಡುಬಿದ್ರೆ ಕಾಡಿಪಟ್ನದವರಾದ ಇವರು ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರ , ಮೊಗವೀರ ಯುವಕ ಸಂಘ ಮುಂಬಯಿ ಇದರ  ಉಪಾಧ್ಯಕ್ಷರಾಗಿದ್ದರು. ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ ಇವರ ನಿಕಟವರ್ತಿಯಾಗಿದ್ದ ಧರ್ಮಪಾಲ್ ಪಿ  […]

ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ ನಿಧನ

Wednesday, November 25th, 2020
Ahmed Pateel

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ (71 ವರ್ಷ) ಅವರು ಬುಧವಾರ ಮುಂಜಾನೆ 3.30ರ ಸುಮಾರಿಗೆ ನಿಧನರಾಗಿದ್ದಾರೆ. ಸೋನಿಯಾ ಗಾಂಧಿ ಆಪ್ತ ಎಂದೇ ಬಿಂಬಿತವಾಗಿದ್ದ ಕಾಂಗ್ರೆಸ್‌ನ ನಿಷ್ಠಾವಂತ ನಾಯಕ  ಅಹ್ಮದ್ ಪಟೇಲ್ ಕಳೆದ ತಿಂಗಳು ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಹ್ಮದ್‌ ಪಟೇಲ್ ಅವರು ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರಾದರೂ, ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಇದೀಗ ಅವರ ನಿಧನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಹ್ಮದ್ ಪಟೇಲ್ ಸುದ್ದಿ ಅಘಾತವನ್ನುಂಟು […]

ಹೊಟೇಲ್ ಉದ್ಯಮಿ ಜಯ ಸಿ. ಸುವರ್ಣ ನಿಧನ

Wednesday, October 21st, 2020
JayaCSuvarna

ಮಂಗಳೂರು : ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೂಲ್ಕಿ ಜಯ ಸಿ. ಸುವರ್ಣ (74) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾದರು. ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ನಿಕಟವರ್ತಿ, ಎಲ್ಲಾ […]

ನಾಟಕಕಾರ, ತುಳುರಂಗ ಭೂಮಿಯ ಹಿರಿಯ ನಟ ನಿರ್ದೇಶಕ ಮಾಧವ ಜಪ್ಪು ಪಟ್ನ ನಿಧನ

Thursday, October 15th, 2020
Madhava jappu patna

ಮಂಗಳೂರು : ತುಳು ರಂಗ ಭೂಮಿಯ ಹಿರಿಯ ನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪು ಪಟ್ನ (66 ವ.) ಗುರುವಾರ ನಿಧನರಾದರು. ಜಪ್ಪು ಪಟ್ನ ಅವರಿಗೆ ಜ್ವರಕಾಣಿಸಿಕೊಂಡು ಆಮ್ಲಜನಕದ ಮಟ್ಟ ಕಡಿಮೆಯಾಗಿ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿ ಕಳೆದ 24 ದಿನಗಳಿಂದ  ಚಿಕಿತ್ಸೆ ಪಡೆಯುತ್ತಿದ್ದರು, ಅದಾಗಲೇ ಕೋವಿಡ್ ಸೋಂಕಿನಿಂದ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಗುರುವಾರ ಇಹಲೋಗ ತ್ಯಜಿಸಿದರು. ಮಾಧವ ಜಪ್ಪು ಪಟ್ನ ಅವರು ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುದ್ರೋಳಿ ಶ್ರೀ ಭಗವತೀ ತೀಯಾ ಸೇವಾ […]

ಲೋಕ್ ಜನಶಕ್ತಿ ಪಾರ್ಟಿ(ಎಲ್‌ಜೆಪಿ) ಸಂಸ್ಥಾಪಕ, ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನ

Friday, October 9th, 2020
Ramvilas Paswan

ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರಿಗೆ ಬುಧವಾರ  ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು. ಕೆಲ ವಾರಗಳ ಹಿಂದೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಇದೀಗ ಅವರು ಮೃತಪಟ್ಟಿದ್ದಾರೆ ಎಂದು ಪಾಸ್ವಾನ್ ಪುತ್ರ ಚಿರಾಗ್ ಮಾಹಿತಿ ನೀಡಿದ್ದಾರೆ. ಲೋಕ್ ಜನಶಕ್ತಿ ಪಾರ್ಟಿ(ಎಲ್‌ಜೆಪಿ) ಸಂಸ್ಥಾಪಕ, ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು 5 ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದರು. ಎನ್ ಡಿಎ ಮೈತ್ರಿಕೂಟದಲ್ಲಿದ್ದ ಎಲ್ ಜೆಪಿ ಪಕ್ಷದಿಂದ ಪಾಸ್ವಾನ್ […]

ಪವರ್ ಟಿವಿ ಕ್ಯಾಮರಾಮನ್ ಸುನೀಲ್ ನಿಧನ

Sunday, October 4th, 2020
Sunil Pancham

ಹುಬ್ಬಳ್ಳಿ:  ಹುಬ್ಬಳ್ಳಿ-ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ಅಕ್ಟೋಬರ್ 01 ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ್ ಟಿವಿ ಕ್ಯಾಮರಾಮನ್ ಸುನೀಲ್ ಪಾಚಂಗೆ (28) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಟಿ.ವಿ.9 ಸುದ್ದಿ ಸಂಸ್ಥೆಯಲ್ಲಿ ‌ಸಹಾಯಕರಾಗಿ ಕೆಲಸ ನಿರ್ವಹಿಸಿದ್ದ ಸುನೀಲ್, ನಂತರ ಪವರ್ ಟಿ.ವಿ ಯಲ್ಲಿ ಕ್ಯಾಮರಾಮನ್ ಆಗಿ ಕೆಲಸಕ್ಕೆ ಸೇರಿದ್ದರು. ಹುಬ್ಬಳ್ಳಿಯ ಸಿದ್ಧಾರೂಡ ಮಠದ ಇಂದ್ರಪ್ರಸ್ಥ ನಗರದಲ್ಲಿ ವಾಸವಿದ್ದ ಅವರು ತಾಯಿ ಉಮಾ ಗೋಪಾಲ್ ಪಾಚಂಗೆ, ಸಹೋದರ ವಿನಾಯಕ ಪಾಚಂಗೆ ಅವರನ್ನು ಅಗಲಿದ್ದಾರೆ. […]

ವಿಶ್ವ ಹಿಂದೂ ಪರಿಷತ್ ಕಾಸರಗೋಡು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ ನಿಧನ

Monday, September 28th, 2020
Angara Sripada

ಕಾಸರಗೋಡು : ಉಪ್ಪಳ ಬಾಯಾರಿನ ಪೆರ್ವೋಡಿ ನಿವಾಸಿ ಅಂಗಾರ ಶ್ರೀಪಾದ (69) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಾಯಾರು ಸಹಕಾರಿ ಬ್ಯಾಂಕ್ ನ ನಿರ್ದೇಶಕರೂ ಆಗಿದ್ದ ಇವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಹತ್ತು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ನ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.