Blog Archive

ಶ್ರೀಮತಿ ಸುಂದರಿ ಶೀನ ಶೆಟ್ಟಿ ವಳಕಾಡು ನಿಧನ

Thursday, July 16th, 2020
Sundari-Sheena-Shetty

ಉಡುಪಿ : ಇಲ್ಲಿನ ವಳಕಾಡು ಹೆಸರಾಂತ ಶಿಕ್ಷಕ ದಿ.ಶೀನ ಶೆಟ್ಟಿ ಇವರ ಧರ್ಮಪತ್ನಿ ಬೈಲೂರು ಮೂಲತಃ ಶ್ರೀಮತಿ ಸುಂದರಿ ಶೀನ ಶೆಟ್ಟಿ (83)  ಮಂಗಳವಾರ ರಾತ್ರಿ ತನ್ನ ವಳಕಾಡು ಸ್ವನಿವಾಸ ಶ್ರೀ ಗುರುಛಾಯಾ ನಿವಾಸದಲ್ಲಿ ವೃದ್ಧಾಪ್ಯ ಸಹಜತೆಯಿಂದ ನಿಧನರಾದರು. ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿ ವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಸೇರಿದಂತೆ ನಾಲ್ಕು ಗಂಡು, ಎರಡು ಹೆಣ್ಣು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆಯ ಉಪ ಸಂಪಾದಕಿ ಕರ್ಕಿಕೋಡಿ ಸೀತಾಲಕ್ಷ್ಮೀ ನಿಧನ

Tuesday, May 12th, 2020
vijayalakshmi

ಮಂಗಳೂರು : ವಿಜಯ ಕರ್ನಾಟಕ ಪತ್ರಿಕೆಯ  ಹಿರಿಯ ಉಪ ಸಂಪಾದಕಿಯಾಗಿ, ಸಾಹಿತಿ ವಿ.ಗ. ನಾಯಕ ಅವರ ಪುತ್ರಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಸಮಸ್ಯೆಯಿಂದ ಮಂಗಳವಾರ ನಿಧನರಾದರು. ಕಳೆದೊಂದು ವರ್ಷದಿಂದ ಮೆದುಳಿನ ಸಮಸ್ಯೆ  ಅವರನ್ನು ಕಾಡುತ್ತಿತ್ತು. ಅವರು  ಕಳೆದ 19 ವರ್ಷಗಳಿಂದ ವಿಜಯ ‌ಕರ್ನಾಟಕ ಮಂಗಳೂರು ಕಚೇರಿಯಲ್ಲಿ ವರದಿಗಾರ್ತಿಯಾಗಿ, ಹಿರಿಯ ಉಪಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವಳಿ ಸ್ನಾತಕೋತ್ತರ ಪದವಿಗಳು, ಅವಳಿ ಪಿಎಚ್ ಡಿ ಮಹಾಪ್ರಬಂಧಗಳು, ಬೃಹತ್ ಎಂ.ಫಿಲ್ ಗ್ರಂಥಗಳ ಜತೆಗೆ 15ಕ್ಕೂ ಅಧಿಕ ಕೃತಿಗಳನ್ನು ರಚಿಸಿದ ಸೀತಾಲಕ್ಷ್ಮಿ […]

ನಿಧನ : ಕಲ್ಯಾಣಿ ಹಿರಿಯಣ್ಣ ಶೆಟ್ಟಿ ಮಲಾಡ್

Sunday, May 3rd, 2020
Kalyani-shetty

ಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದಿ. ಹಿರಿಯಣ್ಣ ಶೆಟ್ಟಿ ಯವರ ಧರ್ಮಪತ್ನಿ ಕುತ್ಯಾರ್ ಉಪ್ಪರಿಗೆ ಮನೆ ಕಲ್ಯಾಣಿ ಹಿರಿಯಣ್ಣ ಶೆಟ್ಟಿ (76) ಇವರು ಮೇ. 2 ರಂದು ಹೃದಯಘಾತ ದಿಂದ ಮಲಾಡ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನ ಹೊಂದಿದರು. ಬೊಂಬೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಯವರ ಅತ್ತೆ ಕಲ್ಯಾಣಿ ಶೆಟ್ಟಿ ಯವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಮಂಧಿಕರನ್ನು ಅಗಲಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ನಿಧನ

Thursday, April 30th, 2020
Rishi Kapoor

ಮುಂಬೈ : ಅಮೆರಿಕದಲ್ಲಿ ಕಳೆದ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ರಿಷಿ ಕಪೂರ್ ಆಗಾಗ್ಗೆ ಅನಾರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದರು. ಬುಧವಾರ ಬೆಳಿಗ್ಗೆ ಅವರನ್ನು ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ರಿಷಿ ಕಪೂರ್ ಅವರು ಕ್ಯಾನ್ಸರ್‌ಗೆ ತುತ್ತಾಗಿರುವುದು 2018ರಲ್ಲಿ ಪತ್ತೆಯಾಗಿತ್ತು. ಬಳಿಕ ಅಮೆರಿಕಕ್ಕೆ ತೆರಳಿ ಸುಮಾರು ಒಂದು ವರ್ಷ ಚಿಕಿತ್ಸೆ ಪಡೆದುಕೊಂಡ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು. ಫೆಬ್ರವರಿಯಲ್ಲಿ ಅನಾರೋಗ್ಯದಿಂದ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. […]

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

Wednesday, April 22nd, 2020
HBL-Rao

ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ (87) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ (ಏಪ್ರಿಲ್ 22) ರಂದು ದೈವಾಧೀನರಾದರು. ಮೂಲತಃ ಮಂಗಳೂರಿನ ಹೆಜ್ಮಾಡಿಯವರಾಗಿದ್ದು ಪತ್ನಿ, ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬದುಕಿನಲ್ಲಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹೆಚ್.ಬಿ.ಎಲ್ ರಾವ್ ಉದಾಹರಣೆ. ಅವರ ಹೆಸರು ಕೇಳಿದರೆ ನಮಗೆ ನೆನಪಾಗುವುದು ಅವರು ಮುಂಬಯಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ […]

ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರಭಾಶ್ ಕುಮಾರ್. ಪಿ ನಿಧನ

Tuesday, April 7th, 2020
prabhash kumar

ಉಜಿರೆ : ಸ್ಥಳೀಯ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರಭಾಶ್ ಕುಮಾರ್, ಪಿ (63) ಸೋಮವಾರ ಬೆಳಗ್ಗಿನ ಜಾವ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಎರಡು ವರ್ಷ ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಉಜಿರೆಯಲ್ಲಿರುವ ಕ್ಷಯ ರೋಗ ನಿವಾರಣಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಹಾಗೂ ನಂತರ ಎಸ್. ಡಿ. ಎಂ. ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರಾಗಿ ಒಟ್ಟು 40 ವರ್ಷಗಳ ಸೇವೆ ಸಲ್ಲಿಸಿದ್ದರು. ಎಸ್. ಡಿ. ಯಂ. ಪ್ರಕೃತಿ ಚಿಕಿತ್ಸಾ ಮತ್ತು […]

ಸಿಪಿಐಎಂ ಹಿರಿಯ ಸದಸ್ಯರಾದ ಕೂಸಪ್ಪ ಗಟ್ಟಿ ನಿಧನ

Saturday, February 1st, 2020
koosappa

  ಮಂಗಳೂರು : ಸಿಪಿಐಎಂ ಪಕ್ಷದ ಹಿರಿಯ ಸದಸ್ಯರಾದ ಕಾಂ.ಕೂಸಪ್ಪ ಗಟ್ಟಿ(70)ಯವರು ಹ್ರದಯಾಘಾತದಿಂದಾಗಿ ಕುಂಪಲದಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿರುತ್ತಾರೆ. ತನ್ನ ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಆಕರ್ಷಿತರಾಗಿದ್ದ ಕೂಸಪ್ಪ ಗಟ್ಟಿ ಯವರು,ಆ ಕಾಲದಲ್ಲಿ ಬಲಿಷ್ಠವಾಗಿದ್ದ ಬೀಡಿ,ನೇಯ್ಗೆ,ಗೋಡಂಬಿ ಕಾರ್ಮಿಕರು,ರೈತರು ಸೇರಿದಂತೆ ದುಡಿಯುವ ವರ್ಗದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದದ್ದು ಮಾತ್ರವಲ್ಲದೆ ಬಂಧನಕ್ಕೊಳಗಾಗಿದ್ದಾರೆ. 1964ರಲ್ಲಿ ಕಮ್ಯುನಿಸ್ಟ್ ಪಕ್ಷವು ವಿಭಜನೆಗೊಂಡಾಗ ಕೂಸಪ್ಪರವರು ಸಿಪಿಐಎಂನಲ್ಲಿ ಧ್ರಢವಾಗಿ ನಿಂತರು.1972ರಲ್ಲಿ ಪಕ್ಷದ ನೇತ್ರತ್ವದಲ್ಲಿ ನಡೆದ ಆಹಾರ ಚಳುವಳಿಯಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ ಕೂಸಪ್ಪ ಗಟ್ಟಿಯವರು,ಬಳಿಕ […]

ಪೇಜಾವರ ಶ್ರೀ ಗಳ ನಿಧನಕ್ಕೆ ಶಾಸಕ ಕಾಮತ್ ತೀವ್ರ ಸಂತಾಪ

Sunday, December 29th, 2019
Vedavyasa

ಉಡುಪಿ: ಶ್ರೀ ಕೃಷ್ಣನಗರಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಇಂದು ಮುಖ್ಯಪ್ರಾಣಐಕ್ಯ ಸೇರಿದ್ದು, ಇಡೀ ಕರುನಾಡು ಸ್ತಬ್ಧವಾಗಿದೆ. ಶ್ರೀಗಳ ಅಗಲಿಕೆಗೆ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಸಂತಾಪ ಸೂಚಿಸಿದ್ದಾರೆ. ಜನರಿಗಾಗಿ ಅದರಲ್ಲಿಯೂ ಬಡವರಿಗಾಗಿ ಬದುಕಿದವರು ಶ್ರೀಗಳು. ಬಡತನ ನಿರ್ಮೂಲನೆ, ಅನ್ನ ದಾಸೋಹ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟ ದಿವ್ಯ ಚೇತನ. ದೇಶದ ಸಂಸ್ಕೃತಿ ಪ್ರತೀಕರಾಗಿದ್ದರು. ಆಧ್ಯಾತ್ಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಪೇಜಾವರ ಶ್ರೀಗಳು. ಸಮಾಜಕ್ಕೆ ಶ್ರೀಗಳು […]

ಬಂಟ್ವಾಳ : ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ನಿಧನ

Tuesday, December 10th, 2019
Anand

ಬಂಟ್ವಾಳ : ಬಂಟ್ವಾಳ ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಜಿ.ಆನಂದ (70) ಮಂಗಳವಾರ ಮುಂಜಾನೆ 1.30ರ ಸುಮಾರಿಗೆ ನಿಧನ ಹೊಂದಿದರು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷರಾಗಿದ್ದ ಅವರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದರು. ವೀಣಾಧಾರಿಣಿ ಕಲಾ ಯುವಕ ಸಂಘ, ಸ್ಟೇಟ್ ಟೈಲರ್ ಅಸೋಸಿಯೇಶನ್, ಸ್ಥಳೀಯ ಕಲ್ಲುರ್ಟಿ ಸನ್ನಿಧಿ ಸಹಿತ ಹಲವು ಸಂಘಸಂಸ್ಥೆಗಳಲ್ಲಿ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಜಿ.ಆನಂದ ನಿಧನಕ್ಕೆ ಬಂಟ್ವಾಳ […]

‘ತುಳು ಲಿಪಿ ಕಲ್ಪುಲೆ’ ಕರ್ತೃ ಬಿ ತಮ್ಮಯ್ಯ ನಿಧನ

Tuesday, September 10th, 2019
Tammayya

ಬಂಟ್ವಾಳ : ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ, ತುಳುಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಮೂಲಕ ಜನಪ್ರಿಯರಾಗಿದ್ದ ಬಿ ತಮ್ಮಯ್ಯ ಸೆ.10 ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 71 ವಯಸ್ಸಿನ ಬಿ.ತಮ್ಮಯ್ಯ ಅವರು ಬಂಟ್ವಾಳ ತಾಲೂಕಿನ ಕೈಕುಂಜೆ ನಿವಾಸಿಯಾಗಿದ್ದು, ಮೃತರು ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ. ಇವರು ಹಲವು ವರ್ಷಗಳ ಕಾಲ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ತುಳು ನಾಟಕಗಳನ್ನು […]