Blog Archive

ಬಿಟಿವಿ ಕ್ಯಾಮರಾಮೆನ್ ನಾಗೇಶ್ ನಿಧನ

Monday, July 22nd, 2019
Nagesh

ಮಂಗಳೂರು : ಬಿಟಿವಿ ಕ್ಯಾಮರಾಮೆನ್ ನಾಗೇಶ್ (35) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ರಾತ್ರಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಾಗೇಶ್ ಅವರು ನಮ್ಮ ಟಿವಿ, ಜನಶ್ರೀ ಚಾನಲ್ ನಲ್ಲಿ ಕ್ಯಾಮರಾಮೆನ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಬಿಟಿವಿಯಲ್ಲಿ ಮಂಗಳೂರು ವಿಭಾಗದಲ್ಲಿ ಆರಂಭದಿಂದಲೇ ಕ್ಯಾಮರಾಮೆನ್ ವೃತ್ತಿ ನಿರ್ವಹಿಸುತ್ತಿದ್ದರು. ನಾಗೇಶ್ ಸರಳ ವ್ಯಕ್ತಿತ್ವ, ಜನಪರ ಕಾಳಜಿಯಿಂದ ಮಾಧ್ಯಮವಲಯದಲ್ಲಿ ಮತ್ತು ಎಲ್ಲರೊಂದಿಗೆ ಗುರುತಿಸಿಕೊಂಡಿದ್ದರು. ಪಡು, ಕಲ್ಲಚ್ಚಿಲ್ ನಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು. ಪಡು, ಕಲ್ಲಚ್ಚಿಲ್ ಬಾಬು-ಲಕ್ಷ್ಮೀ ದಂಪತಿಗಳ ಪುತ್ರರಾಗಿರುವ […]

ವಿಶ್ವಹಿಂದು ಪರಿಷತ್‌ ಕಾರ್ಯಕರ್ತೆ ಉಮಾ ಉಳ್ಳಾಲ್ ನಿಧನ

Saturday, May 26th, 2018
Uma Ullal

ಮಂಗಳೂರು  : ನಗರದ ಕಂಬಳ ರಸ್ತೆಯಲ್ಲಿರುವ ಉಳ್ಳಾಲ್ ನರ್ಸಿಂಗ್ ಹೋಮ್‌ನ ಸ್ಥಾಪಕ ಡಾ. ರಾಮಚಂದ್ರ ಉಳ್ಳಾಲ್ ಅವರ ಪತ್ನಿ ಶ್ರೀಮತಿ ಉಮಾ ಉಳ್ಳಾಲ್ (75 ವರ್ಷ) ಮೇ. 25 ರಂದು ರಾತ್ರಿ ನಿಧನ ಹೊಂದಿದರು. ಜನಸಂಘ, ಆರ್.ಎಸ್.ಎಸ್. ವಿಶ್ವಹಿಂದು ಪರಿಷತ್‌ನಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು ಒಂದು ಅವಧಿಗೆ ಗುಲ್ಬರ್ಗದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಡಿಸ್ಟ್ರಿಕ್ಟ್ ಚೆಯರ್‌ಮೆನ್ ಕೂಡ ಆಗಿದ್ದರು. ಮಾತ್ರವಲ್ಲಿ ಗುಲ್ಬರ್ಗದಲ್ಲಿ ಸ್ಟೀಲ್ ಫ್ಯಾಬ್ರಿಕೇಶನ್ ಯುನಿಟ್ ಸ್ಥಾಪಿಸಿದ್ದರು. ಜಿಲ್ಲಾ ಮೆಡಿಕಲ್ ಆಫೀಸರ್ ಆಗಿದ್ದ ತನ್ನ ಪತಿ ಡಾ. ರಾಮಚಂದ್ರ […]

ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ನಿಧನ

Wednesday, June 3rd, 2015
BJ Bhandary

ಮಂಗಳೂರು : ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ನಿವಾಸಿಯಾದ ಭಂಡಾರಿ ಉತ್ತಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿದ್ದರು. ಸೋಮವಾರ ಮಧ್ಯಾಹ್ನ ಅವರು ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಬಳಿ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರು ಸಂಬಂಧಿಕರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದರು. ಸೋಮವಾರ ಮಧ್ಯಾಹ್ನ […]

ನಿವೃತ್ತ ವಿಲೇಜ್‌ ಅಕೌಂಟೆಂಟ್ ವೈ ಸದಾನಂದ ಆಚಾರ್ಯ ನಿಧನ

Monday, March 30th, 2015
Sadananda Acharya

ಮಂಗಳೂರು : ಮೂಲತಃ ಕಾರ್ಕಳ ತಾಲೂಕು ಎಣ್ಣೆಹೊಳೆಯವರಾದ, ಪ್ರಸ್ತುತ ಗುರುಪುರ ಕೈಕಂಬ ನಿವಾಸಿ ವೈ ಸದಾನಂದಆಚಾರ್ಯ (65) ಹೃದಯಾಘಾತದಿಂದ ಮಾ.29ರಂದು ನಿಧನಹೊಂದಿದರು. ವಿಲೇಜ್‌ ಅಕೌಂಟೆಂಟ್ ಆಗಿ ಸೇವಾ ನಿವೃತ್ತಿ ಹೊಂದಿದ್ದಅವರು ಪಡುಪೆರಾರ, ನೀರುಮಾರ್ಗ, ಕಟೀಲು, ಬೆಳ್ತಂಗಡಿ, ಮೂಡಬಿದ್ರಿ, ಬಜ್ಪೆ ಮೊದಲಾದೆಡೆ ಗ್ರಾಮ ಪಂಚಾಯತಿಗಳಲ್ಲಿ ದಕ್ಷತೆಯಿಂದಕಾರ್ಯನಿರ್ವಹಿಸಿದ್ದರು. ಆರಂಭದ ಕೆಲವರ್ಷ ’ನವಭಾರತ’ ಪತ್ರಿಕೆಯಲ್ಲೂ ವೃತ್ತಿಜೀವನ ನಡೆಸಿದ್ದರು. ಸ್ಥಳೀಯ ಹಾಗೂ ಇನ್ನಿತರಸಂಘ ಸಂಸ್ಥೆಗಳಲ್ಲಿ ಸೇವೆಗೈದಿದ್ದಅವರು ಪತ್ನಿ/ ಪುತ್ರ ಹಾಗೂ ಮೂವರು ಪುತ್ರಿಯರನ್ನುಅಗಲಿದ್ದಾರೆ.

ಅನಂತಮೂರ್ತಿಯವರ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ

Saturday, August 23rd, 2014
Veerendra Heggade

ಧರ್ಮಸ್ಥಳ : ಖ್ಯಾತ ಸಾಹಿತಿ ಶ್ರೀ ಯು. ಆರ್. ಅನಂತಮೂರ್ತಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರು ಕ್ಷೇತ್ರದ ಅಭಿಮಾನಿಯಾಗಿದ್ದು ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಹಾಗೂ 51 ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಧರ್ಮ, ಸಾಹಿತ್ಯ ಹಾಗೂ ಇತರ ಸಾಮಾಜಿಕ ವಿಚಾರಗಳ ಬಗ್ಗೆ ಅವರು ನೇರವಾಗಿ ಹಾಗೂ ಅಷ್ಟೇ ಖಾರವಾಗಿ ತಮ್ಮ ಅಭಿಪ್ರಾಯವನ್ನು ಸಾದರ ಪಡಿಸುತ್ತಿದ್ದರು. ಧರ್ಮಸ್ಥಳದ ವಿವಿಧ ಸೇವಾಕಾರ್ಯಗಳ ಬಗ್ಗೆ […]

ಲೊಕೇಶ್ ಬಿ.ಅವಿೂನ್ ದೊಡ್ಡಿಕಟ್ಟೆ ನಿಧನ

Wednesday, January 22nd, 2014
Lokesh-B.-Amin

ಮುಂಬಯಿ : ಮುಂಬಯಿಯಲ್ಲಿನ ಹೆಸರಾಂತ ಜೆಮಿನಿ ಟೈಲರ್ಸ  ಮಾಜಿ ಪಾಲುದಾರ, ಸುಪ್ರಸಿದ್ಧ ಹೈವೇ ಟೈಲರ್ಸ ನ ಮಾಲಕ ಲೊಕೇಶ್ ಬಿ. ಅವಿೂನ್ (86.) ಅಲ್ಪ ಕಾಲದ ಅನಾರೋಗ್ಯದಿಂದ ಮತ್ತು ವೃದ್ಧಾಪ್ಯದಿಂದ ಇಂದಿಲ್ಲಿ ಬುಧವಾರ (22.01.2014) ಮುಂಜಾನೆ ಘಾಟ್ಕೋಪರ್ನ ಆಶಿರ್ವಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಮೂಲತಃ ಮಂಗಳೂರು ತಾಲೂಕಿನ ಬಜ್ಪೆ ದೊಡ್ಡಿಕಟ್ಟೆ ಮೂಲದವರಾಗಿದ್ದು, ಮುಂಬಯಿಯ ಮಾಟುಂಗದ ಮೊಗಲ್ ಲೇನ್ ನಿವಾಸಿಯಾಗಿದ್ದರು. ಲೊಕೇಶ್ ಅವಿೂನ್ ಅವರು ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಸ್ಥಾಪಕ ಸದಸ್ಯರಾಗಿದ್ದು, ಬಿಲ್ಲವರ ಎಸೋಸಿಯೇಶನ್ನ ಮುಂಬಯಿ ಇದರ ಸೇವಾದಳದ ಸಕ್ರೀಯ […]

ಕ್ಯಾಂಪ್ಕೊ ಸಂಸ್ಥಾಪಕರಾದ ವಾರಾಣಾಸಿ ಸುಬ್ರಾಯ ಭಟ್‌ (87)

Friday, December 27th, 2013
Varanasi Subraya Bhat

ಬಂಟ್ವಾಳ: ಕ್ಯಾಂಪ್ಕೊ ಸಂಸ್ಥಾಪಕರಾದ ವಾರಾಣಾಸಿ ಸುಬ್ರಾಯ ಭಟ್‌ (87)ಅವರು ಧೀರ್ಘ‌ ಕಾಲದ ಅನಾರೋಗ್ಯದಿಂದ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ತಮ್ಮ ನಿವಾಸದಲ್ಲಿ ಡಿಸೆಂಬರ್‌ 27 ರಂದು ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯದ ಜಂಟಿ ಉದ್ಯಮವಾಗಿ ಜುಲೈ 11, 1973ರಲ್ಲಿ ಪ್ರಾರಂಭವಾದ ಸಂಸ್ಥೆ ಅಡಿಕೆ ಬೆಳೆಗಾರರ ಪಾಲಿನ ಆಶಾಕಿರಣವಾಯಿತು. ಎರಡು ರಾಜ್ಯಗಳ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡ ಬೆಳವಣಿಗೆಯ ಹಿಂದೆ ಸುಬ್ರಾಯ ಭಟ್‌ ಅವರ ಅಪಾರ ಶ್ರಮವಿತ್ತು. ಸುಬ್ರಾಯ […]

ವಿಜಯ ಬ್ಯಾಂಕ್ ನ ಮಾಜಿ ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ ನಿಧನ

Sunday, August 4th, 2013
bb shetty

ಮಂಗಳೂರು: ವಿಜಯ ಬ್ಯಾಂಕ್ ನ ಮಾಜಿ ಅಧ್ಯಕ್ಷ  ಮತ್ತು ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ (77) ಅವರು ಜುಲೈ 2 ಶುಕ್ರವಾರ ಮಧ್ಯರಾತ್ರಿ ನಿಧನರಾದರು. ಬಿ.ಬಿ. ಶೆಟ್ಟಿ ಅವರು ಪತ್ನಿ ಕಲಾವತಿ ಸಹೋದರ ಸುಬ್ಬಯ್ಯ ಶೆಟ್ಟಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಿ.ಬಿ. ಶೆಟ್ಟಿ ಅವರು 1975ರ ಡಿಸೆಂಬರ್ ನಲ್ಲಿ ಆಡಳಿತ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಶೆಟ್ಟಿ ಅವರು ವಿಜಯ್ ಬ್ಯಾಂಕ್ ಗೆ ಸೇರಿದ್ದರು.  1992ರಿಂದ 1996ರ ತನಕ ವಿಜಯ ಬ್ಯಾಂಕ್ ನ ಆಡಳಿತ ನಿರ್ದೇಶಕರಾಗಿದ್ದರು. 1984ರ […]

ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಧುಸೂದನ ಡಿ.ಕುಶೆ ನಿಧನ

Thursday, May 23rd, 2013
Madhusudan Kushe

ಮಂಗಳೂರು : ನೂರು ವರ್ಷ ಇತಿಹಾಸವುಳ್ಳ ಪ್ರತಿಷ್ಠಿತ ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಮಧುಸೂದನ ಡಿ.ಕುಶೆ (78) ಅವರು ಬುಧವಾರ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕುಶೆ ಅವರ ತಂದೆ ದಿ. ಪುತ್ತು ವೈಕುಂಠ ಶೇಟ್ ಅವರು ಒಂದು ಶತಮಾನದ ಹಿಂದೆ ಸ್ಥಾಪಿಸಿದ ಪಿ.ವಿ.ಎಸ್ ಬೀಡಿ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ತಮ್ಮ 21 ನೇ ವಯಸ್ಸಿನಲ್ಲಿ ವಹಿಸಿಕೊಂಡ ಮಧುಸೂದನ ಕುಶೆ ಸಂಸ್ಥೆ ಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಬೀಡಿಯನ್ನು […]

ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ ಗಣಪತಿ ಪೈ ನಿಧನ

Thursday, October 11th, 2012
Ganapathy pai

ಮಂಗಳೂರು : ಭಾರತ್ ಗ್ರೂಪ್ ಕಂಪನಿಯ ಗಣಪತಿ ಪೈ ಬುಧವಾರ ರಾತ್ರಿ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ  77 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗಿತ್ತು. ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ್ನು ಸ್ಥಾಪಿಸಿದ ತಂದೆ ಮಂಜುನಾಥ ಪೈಯವರೊಂದಿಗೆ  1954 ರಲ್ಲಿ ಸೇರಿಕೊಂಡರು.  ಅದರ ಬಳಿಕ ಸಹೋದರರಾದ ದಾಮೋದರ್ ಮತ್ತು ಮಾಧವ ಪೈ ಕೂಡ ಕೈ ಜೋಡಿಸಿದರು. ಇವರ ವಿವಿಧ ಸಂಸ್ಥೆಗಳಲ್ಲಿ 50,000ಕ್ಕಿಂತಲೂ ಹೆಚ್ಚು ಮಂದಿ […]