ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ನೀರಿನ ಸಂರಕ್ಷಣೆಯ ಕುರಿತು ಬೀದಿ ನಾಟಕ
Friday, November 2nd, 2012ಮಂಗಳೂರು: ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ಇಂದು ನೀರಿನ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮವು ನಡೆಯಿತು. ಹಿರಿಯ ಮುಂದಾಳು ಸೆಲೀನಾ ರಾಣಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಸಂಚಾಲಕಾರಾದ ವಿದ್ಯಾದಿನಕರ್ ರವರು ನೇತ್ರಾವತಿ ನದಿಯು ಮಂಗಳೂರು ನಗರಕ್ಕೆ ಪ್ರಮುಖ ನೀರಿನ ಮೂಲವಾಗಿದ್ದು ತುಂಬೆ ಅಣೆಕಟ್ಟಿನ ಮೂಲಕ ನಗರಕ್ಕೆ ಹಾಗೂ ಕೈಗಾರಿಕೆಗಳಿಗೆ ನೀರಿನ ಪೂರೈಕೆಯಾಗುತಿದೆ. ಆದರೆ ಬೇಸಿಗೆಯಲ್ಲಿ ನೀರಿನ ಅಭಾವ ಕಂಡುಬರುವುದರಿಂದ ತುಂಬೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಅಗತ್ಯವಿದೆ ಎಂದವರು ಹೇಳಿದರು. […]