Blog Archive

ನೆಹರೂ ಮೈದಾನದಲ್ಲಿ ಪಿಎಫ್ಐ ಕರ್ನಾಟಕದ 10ನೇ ವರ್ಷಾಚರಣೆ

Saturday, February 18th, 2017
pfi anniversary

ಮಂಗಳೂರು: ಉಳ್ಳಾಲದಲ್ಲಿ ಅನುಮತಿ ಇಲ್ಲದೆ ರದ್ದುಗೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕರ್ನಾಟಕ 10ನೇ ವರ್ಷಾಚರಣೆ  ನಗರದ ನೆಹರೂ ಮೈದಾನದಲ್ಲಿ ನಡೆಯಿತು. ಪಿ.ಎಫ್ಐ. ದ.ಕ. ಜಿಲ್ಲಾ ಸಮಿತಿಯಿಂದ ನಡೆದ ಸಮಾವೇಶದಲ್ಲಿ ಮಾತನಾಡಿದ  ಪಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ದೇಶದಲ್ಲಿ ಸಂಘ ಪರಿವಾರವು ಕೋಮುವಾದದ ವಿಷ ಬೀಜ ಬಿತ್ತುತ್ತಿದೆ. ದೇಶದ ಆಡಳಿತ ಸಂಘ ಪರಿವಾರದ ಕಪಿಮುಷ್ಠಿಯಲ್ಲಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂದು  ಆರೋಪಿಸಿದರು. ಕೆಂಪುಕೋಟೆ ಮತ್ತು ನ್ಯಾಯಾಲಯಗಳ ಬಣ್ಣ ಕೇಸರೀಕರಣಗೊಳ್ಳುತ್ತಿವೆ. ಅದು ಸಂಪೂರ್ಣಗೊಳ್ಳುವ ಮುನ್ನ ಈ ನಾಡಿನ ಪ್ರಜ್ಞಾವಂತರು […]

ನೆಹರೂ ಮೈದಾನದಲ್ಲಿ ಮಾಜಿ ಪ್ರಧಾನಿ ದಿ| ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಸ್ಥಾಪನೆ

Friday, October 30th, 2015
Neharu Maidan

ಮಂಗಳೂರು: ಮಂಗಳೂರಿನ ಹೃದಯಭಾಗದ ನೆಹರೂ ಮೈದಾನದ ಧ್ವಜ ಸ್ತಂಭದ ಬಳಿ ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ನೆಹರೂ ಅವರ ಪ್ರತಿಮೆ ನಿರ್ಮಾಣದ ಕುರಿತು ಮಂಗಳವಾರ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದರು. ನೆಹರೂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಮೈದಾನದ ನೆಹರೂ ಮೈದಾನದಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆ ಹಾಗೂ […]

ಮೋದಿ ಸಮಾವೇಶಕ್ಕೆ ಪೊಲೀಸ್ ಸರ್ಪಗಾವಲು

Monday, February 17th, 2014
Narendra-Modi

ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಫೆ.18ರಂದು ಮಂಗಳೂರಿಗೆ ಆಗಮಿಸಲಿದ್ದು, ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನೆಹರೂ ಮೈದಾನ ಹಾಗೂ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೋಮವಾರ ಸಂಜೆಯಿಂದ ಸಮಾವೇಶ ನಡೆಯುವ ಸ್ಥಳ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿದ್ದು, ನಗರದೆಲ್ಲೆಡೆ ಪೊಲೀಸ್ ಸರ್ಪಕಾವಲು ಹಾಕಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೈದಾನ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ, ಕಾರ್ಯಕ್ರಮದಂದು ವಿಐಪಿ ಮಾರ್ಗ ಮತ್ತು ಕಾರ್ಯಕ್ರಮ ಸ್ಥಳದ ಸುತ್ತ […]

5.10 ಲಕ್ಷ ರೂ. ನಗದು ದೋಚಿದ ವ್ಯಕ್ತಿಯ ಬಂಧನ

Saturday, December 7th, 2013
robber

ಮಂಗಳೂರು : ಕೇರಳ ಮೂಲದ ಕಣ್ಣೂರು ನಿವಾಸಿ ಅಯ್ಯಂವಾಡಿ ಎಂಬವರು ತನ್ನ ತಮ್ಮನ ಜೊತೆಯಲ್ಲಿ ಮಂಗಳೂರಿನ ಟೌನ್‌ಹಾಲ್ ಕಡೆಗೆ ನಡೆದು ಕೊಂಡು ಹೋಗುತ್ತಿದ್ದಾಗ ಓರ್ವ ವ್ಯಕ್ತಿ ಬಲವಂತವಾಗಿ  ಎಳೆದು ಪರಾರಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ಮಂಗಳೂರಿನಲ್ಲಿ ನಡೆದಿದೆ. ಲಕ್ಷಾಂತರ ರೂ. ನಗದು ದೋಚಿದ್ದ ಆರೋಪಿಯನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಇಟ್ಟಂಗಿಯ ಓಂಕಾರ ಶೆಟ್ಟಿ(30) ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಯ್ಯಂವಾಡಿ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ನಿನ್ನೆ ಸಂಜೆ ಪಾಂಡೇಶ್ವರ ಇನ್ಸ್‌ಪೆಕ್ಟರ್  ದಿನಕರ್  ಶೆಟ್ಟಿಯವರು […]

ಮತದಾರರಿಗೆ ಪಕ್ಷ ಕೊಟ್ಟ ವಾಗ್ದಾನಗಳನ್ನು ಪೂರೈಸಲು ಕಾರ್ಯಪ್ರವೃತ್ತರಾಗಿ : ಜನಾರ್ಧನ ಪೂಜಾರಿ

Tuesday, March 19th, 2013
Congress publicity campaign

ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದವರು ವಿಜಯೋತ್ಸವವನ್ನು ಆಚರಿಸುವುದಕ್ಕಿಂತ ಮಿಗಿಲಾಗಿ ಚುನಾವಣಾ ಅವಧಿಯಲ್ಲಿ  ಪಕ್ಷ ಮತದಾರರಿಗೆ ಕೊಟ್ಟ ವಾಗ್ದಾನಗಳನ್ನು ಈಡೇರಿಸಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರು ಹೇಳಿದರು. ನಗರದ ನೆಹರೂ ಮೈದಾನದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡ ಮತದಾರರಿಗೆ ಕೃತಜ್ಞತೆ ಸಮರ್ಪಣೆ ಹಾಗೂ ವಿಧಾನ ಸಭೆ ಚುನಾವಣೆ ಪ್ರಚಾರ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು […]

ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಸರಕಾರದ ಆದೇಶಕ್ಕೆ ವಿರೋದ ವ್ಯಕ್ತಪಡಿಸಿದ ಎಸ್ಎಫ್ಐ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲು

Friday, November 2nd, 2012
Kannada Rajyithsava

ಮಂಗಳೂರು : ಮಂಗಳೂರು ಗುರುವಾರ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚವ ಆದೇಶಕ್ಕೆ ವಿರೋದ ವ್ಯಕ್ತಪಡಿಸಿ, ಗಲಭೆಯನ್ನೆಬ್ಬಿಸಿದ ಎಸ್ಎಫ್ಐ ಕಾರ್ಯಕರ್ತರನ್ನು ಬಂದಿಸಿ, ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ದೆಹಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಗೋವಿಂದ ತನ್ನ ವರದಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ ಎಂದು ರಾಜ್ಯದ 12,740 ಕನ್ನಡ ಶಾಲೆಗಳನ್ನು ಮುಚ್ಚಲು ಶಿಫಾರಸ್ಸು ಮಾಡಿದ್ದು, ಅದರಂತೆ ರಾಜ್ಯ ಸರಕಾರವು ಕೂಡ ಆ ಶಾಲೆಗಳನ್ನು ಮುಚ್ಚುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆ ನೆಹರೂ […]

ಕನ್ನಡದ ಅಭಿಮಾನ ಇಲ್ಲದವರಿಂದಲೇ ಕನ್ನಡಕ್ಕೆ ಅಪಾಯವಿದೆ : ಸಿ ಟಿ ರವಿ

Thursday, November 1st, 2012
Kannada Rajyothsava Mangalore

ಮಂಗಳೂರು : ದ.ಕ.ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನಿನಲ್ಲಿ (ನ.1) ಕನ್ನಡ ರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 7.45 ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಸುರಿಯುವ ತುಂತುರು ಮಳೆಯನ್ನೂ ಲೆಕ್ಕಿಸದೆ ಕನ್ನಡಾಭಿಮಾನದ ಸಂದೇಶವನ್ನು ಸಾರುವ ಅನೇಕ ವಾಹನಗಳ ಜಾಥ ಕನ್ನಡ ರಾಜ್ಯೋತ್ಸವಕ್ಕೆ ಮೆರುಗನ್ನು ನೀಡಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಪಥಸಂಚಲನದ ಕಮಾಂಡರ್ ನಿಂದ ಗೌರವ ಸ್ವೀಕರಿಸಿ, ಪ್ಯಾರೆಡ್ ವೀಕ್ಷಿಸಿದರು. ಬಳಿಕ ಜಿಲ್ಲೆಯ ಜನತೆಗೆ ಸಂದೇಶ ನೀಡಿದರು. ಕನ್ನಡಿಗರಿಗೆ ರಾಜ್ಯೋತ್ಸವ ನಿತ್ಯನೂತನವಾಗಿರಬೇಕು ಅದು ನವೆಂಬರ್ […]

ಮಂಗಳೂರಿನ ನೆಹರೂ ಮೈದಾನಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Thursday, November 1st, 2012

ಮಂಗಳೂರು ರಾಜೋತ್ಸವ ಆಚರಣೆಗೆ ಎಸ್.ಎಫ್.ಐ. ಕಾರ್ಯಕರ್ತರಿಂದ ಅಡ್ಡಿ; ಬಂಧನ

Thursday, November 1st, 2012
Rajyotsava Lathi Charge

ಮಂಗಳೂರು :  ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ರಾಜೋತ್ಸವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರಾಜ್ಯೋತ್ಸವದ ಸಂದೇಶ ನೀಡಲು ಪ್ರಾರಂಬಿಸುತ್ತಿದ್ದಂತೆ ಮೈದಾನದ ಹೊರಗಿನಿಂದ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಒಳ ಪ್ರವೇಶಿಸಿದ ಎಸ್.ಎಫ್.ಐ. ಕಾರ್ಯಕರ್ತರು, ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಆಚರಿಸುವ ಅರ್ಹತೆಯಿಲ್ಲ ಎಂದು ಘೋಷಣೆ ಕೂಗುತ್ತ ರಾಜೋತ್ಸವ ಆಚರಣೆಗೆ ಅಡ್ಡಿಪಡಿಸಲು ಮುಂದಾದರು. ಕಾರ್ಯಕರ್ತರು ದೆಹಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಗೋವಿಂದ ತನ್ನ ವರದಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ […]

ನೆಹರೂ ಮೈದಾನದಲ್ಲಿ 63ನೇ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ

Friday, January 27th, 2012
Republic Day

ಮಂಗಳೂರು : ನೆಹರೂ ಮೈದಾನದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ನಡೆದ 63ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ನೆವೇರಿಸಿದರು. ಧ್ವಜ ವಂದನೆ ಸ್ವೀಕರಿಸಿದ ಬಳಿಕ ಸಿಎಆರ್‌, ಡಿಎಆರ್‌, ಸಿವಿಲ್‌, ಸಂಚಾರಿ ಪೊಲೀಸ್‌, ಗೃಹರಕ್ಷಕ ದಳ, ಆಗ್ನಿಶಾಮಕ ದಳ, ಎನ್‌ಸಿಸಿ ಆರ್ಮಿ, ನೇವಲ್‌, ಏರ್‌ಪೋರ್ಸ್‌ ಕಿರಿಯ ಮತ್ತು ಹಿರಿಯ, ಭಾರತ ಸೇವಾದಲ ಬಾಲಕರು ಹಾಗೂ ಬಾಲಕಿಯರ ತಂಡ, ರೋಡ್‌ ಸೇಫ್ಟಿ ಪೆಟ್ರೋಲ್‌ ಬಾಲಕರು ಮತ್ತು ಬಾಲಕಿಯರ ತಂಡ, ಸ್ಕೌಟ್ಸ್‌ […]