ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! – ವಿಡಿಯೋ

Sunday, November 19th, 2023
ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! - ವಿಡಿಯೋ

ಮಂಗಳೂರು : ತುಳುನಾಡು ದೈವ ದೇವರುಗಳ ಆರಾಧನೆಗೆ ಹಿಂದಿನಿಂದಲೂ ಪ್ರಾಧಾನ್ಯತೆಯನ್ನು ಪಡೆದಿದೆ. ತುಳುನಾಡಿನಲ್ಲಿ ಸಾವಿರಕ್ಕಿಂತಲೂ ಹೆಚ್ಚು ದೈವಗಳನ್ನು ಅರಾಧಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಮಂಗಳೂರಿನಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದ ಮೂಡು ಮನೆಗುತ್ತು ಪಚ್ಚನಾಡಿಯಲ್ಲಿ ಅಂತದೊಂದು ಕ್ಷೇತ್ರವಿದೆ. ಇಲ್ಲಿ ಹತ್ತು ವರ್ಷ ಹಿಂದೆ ದೈವವೊಂದು ರಾತ್ರಿವೇಳೆ ಕಾಯರ್ ಮರದಲ್ಲಿ ಮಾಯದ ಶಕ್ತಿಯ ರೂಪದಲ್ಲಿ ಸತೀಶ್ ಪೂಜಾರಿಯವರಿಗೆ ಕಾಣಿಸಿಕೊಂಡು ತನಗೆ ಆಶ್ರಯಯ ನೀಡುವಂತೆ ಸೂಚಿಸಿದಂತೆ ಭಾಸವಾಗುತ್ತದೆ. ಅದರಂತೆ ಪಂಡಿತರ ಪ್ರಶ್ನಾ ಚಿಂತನೆಯ ಮೂಲಕ ಪಚ್ಚನಾಡಿ ಮೂಡು ಮನೆ ಎಂಬಲ್ಲಿ […]

ಪಚ್ಚನಾಡಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕಕ್ಕೆ ನ್ಯಾಯಾಧೀಶೆ ಶೀಲಾ ಎ.ಜಿ ಭೇಟಿ

Tuesday, April 6th, 2021
pacchanady

ಮಂಗಳೂರು : ನಗರದ ಹೊರವಲಯದ ಪಚ್ಚನಾಡಿಯಲ್ಲಿರುವ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಕಿಗಾಹುತಿಯಾಗಿ ನಷ್ಟಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಭೇಟಿ ನೀಡಿ ಸಂಗ್ರಹಣೆಯಾಗಿರುವ ಕಸಕ್ಕೆ ಬೆಂಕಿ ಬಿದ್ದು ಸ್ಥಳೀಯರಿಗೆ ತೊಂದರೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ಈ […]

ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಬೆಂಕಿ, ಸುತ್ತಮುತ್ತಲಿನ ಪರಿಸರದಲ್ಲಿ ದಟ್ಟ ಹೊಗೆ

Monday, April 5th, 2021
pachanady

ಮಂಗಳೂರು: ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಆ ಪ್ರದೇಶದ ಸುತ್ತ ದಟ್ಟವಾದ ಹೊಗೆ ಕಂಡುಬಂತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಐದಾರು ಅಗ್ನಿಶಾಮಕ ವಾಹನಗಳಲ್ಲಿ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಶುದ್ಧೀಕರಿಸದೇ ನಗರಕ್ಕೆ ನೀರನ್ನು ಪೂರೈಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಆಯುಕ್ತರು

Tuesday, September 22nd, 2020
Palike sabhe

ಮಂಗಳೂರು:  ಚರ್ಚೆ ಗದ್ದಲಗಳ ನಡುವೆ ಮಂಗಳೂರು ಮಹಾ ನಗರ ಪಾಲಿಕೆ ಸಾಮಾನ್ಯ ಸಭೆ  ಇಂದು ಮೇಯರ್ ದಿವಾಕರ್ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಡಿವ ನೀರು ಸಂಸ್ಕರಣಾ ಘಟಕದ ನೀರಿನ ಗುಣಮಟ್ಟ 36.4 ಇದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ  ನೀರಿಗೆ ಅಗತ್ಯ ರಾಸಾಯನಿಕ ಬಳಸಿ ಶುದ್ಧೀಕರಿಸದೇ ನೀರನ್ನು ಪೂರೈಸಿರುವ ಕಾರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಸ್ತಾಪಿಸಿದರು. ಈ ಬಗ್ಗೆ ಹಿರಿಯ ಆರೋಗ್ಯಾಧಿಕಾರಿಗಳು ಈ ನೀರು ಸೇವನೆಯಿಂದ […]

ಪಚ್ಚನಾಡಿ ಡಂಪಿಂಗ್​ ಯಾರ್ಡ್​ ವಿಚಾರದಲ್ಲಿ ಕಾಂಗ್ರೆಸ್​​​​​ನಿಂದ ಭ್ರಷ್ಟಾಚಾರ : ಶಾಸಕ ಭರತ್ ಶೆಟ್ಟಿ ಆರೋಪ

Wednesday, November 6th, 2019
Bharath-Shetty

ಮಂಗಳೂರು : ಪಚ್ಚನಾಡಿ ಡಂಪಿಂಗ್ ಯಾರ್ಡ್ ಹಾಗೂ ಯುಜಿಡಿ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ‌. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್ ಅಭಿವೃದ್ಧಿಗಾಗಿ ಬಳಕೆ ಮಾಡದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿದೆ‌. ಅದೇ ಇಂದಿನ ಮಂದಾರ ಪ್ರದೇಶದ ದುರಂತಕ್ಕೆ ಕಾರಣ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಂಪಿಂಗ್ ಯಾರ್ಡ್ನಲ್ಲಿ ಸಮಸ್ಯೆಗಳಿವೆ. […]

ಮಂದಾರ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡಿ : ಸಿದ್ದರಾಮಯ್ಯ ಆಗ್ರಹ

Saturday, August 31st, 2019
pacchanadi

ಮಂಗಳೂರು : ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ಅವೈಜ್ಞಾನಿಕವಾಗಿ ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಗ್ರಹ ಮಾಡಿದ್ದರಿಂದ ನೆರೆ ಸಂದರ್ಭದಲ್ಲಿ ಬಹಳಷ್ಟು ಮನೆಗಳಿಗೆ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪಚ್ಚನಾಡಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ತ್ಯಾಜ್ಯ ಹಾಕುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಮೊದಲೇ ರಿಟೈನಿಂಗ್ ಹಾಲ್ ಹಾಕಿದ್ದರೆ ಈ ರೀತಿ ಹಾನಿ ಆಗುತ್ತಿರಲಿಲ್ಲ. ಈಗಾಗಲೇ 27 ಮನೆಗಳಿಗೆ ಹಾನಿಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಸೂಕ್ತ ಪರಿಹಾರ […]

ಮಂಗಳೂರು : ಪಚ್ಚನಾಡಿಯ ‘ಬೇಲಿಂಗ್‌ ಯುನಿಟ್’ ಮಾದರಿ ತ್ಯಾಜ್ಯ ವಿಲೇವಾರಿ

Wednesday, August 21st, 2019
ಮಂಗಳೂರು : ಪಚ್ಚನಾಡಿಯ ‘ಬೇಲಿಂಗ್‌ ಯುನಿಟ್’ ಮಾದರಿ ತ್ಯಾಜ್ಯ ವಿಲೇವಾರಿ

ಮಂಗಳೂರು :  ಕುಡುಪು ಸಮೀಪದ ಮಂದಾರದಲ್ಲಿ ವ್ಯಾಪಕವಾಗಿ ಬಿದ್ದಿರುವ ಪಚ್ಚನಾಡಿಯ ತ್ಯಾಜ್ಯ ರಾಶಿಯನ್ನು ‘ಬೇಲಿಂಗ್‌ ಯುನಿಟ್’ ಸಹಾಯದಿಂದ ತಲಾ ಒಂದೊಂದು ಟನ್‌ ಗಾತ್ರದ ಬಾಕ್ಸ್‌ ಮಾದರಿಯಲ್ಲಿ ಹಾಕಿ ಅದನ್ನು ಕಂಪ್ರಸ್‌ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್‌ ಯಾರ್ಡ್‌ ಗೆ ಕೇಬಲ್ ಮಾದರಿಯಲ್ಲಿ ಎಳೆದು ತರುವ ವಿನೂತನ ಪ್ರಯೋಗದ ಬಗ್ಗೆ ಕೊಯಮತ್ತೂರಿನ ಸುಧೀರ್‌ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ಯೋಜನ ವರದಿಯನ್ನು ದ.ಕ. ಜಿಲ್ಲಾಡಳಿತ/ಮಂಗಳೂರು ಪಾಲಿಕೆಗೆ ಮಂಗಳವಾರ ನೀಡಿದೆ. ಪಚ್ಚನಾಡಿಯ ಡಂಪಿಂಗ್‌ಯಾರ್ಡ್‌ ನಿಂದ ಮಂದಾರಕ್ಕೆ ಜಾರಿರುವ […]

ಪಚ್ಚನಾಡಿ : ಬಾವಿ, ಬೋರ್‌ವೆಲ್ ಕಲುಷಿತಗೊಳಿಸಿದ ತ್ಯಾಜ್ಯ ನೀರು

Saturday, August 17th, 2019
mandaara

ಮಂಗಳೂರು : ಪಚ್ಚನಾಡಿ ತ್ಯಾಜ್ಯರಾಶಿಯ ಗುಡ್ಡ ಜರಿದು ಮಂದಾರ ವ್ಯಾಪ್ತಿಯಲ್ಲಿ ಮನೆ-ಮರಗಳನ್ನು ಆಹುತಿ ಪಡೆದ ಘಟನೆ ಜೀವಂತವಾಗಿರುವಾಗಲೇ, ಇದೀಗ ಆ ಪರಿಸರದ ಬಾವಿ-ತೋಡುಗಳೆಲ್ಲ ಕೊಳಚೆ ನೀರಿನಿಂದ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ತ್ಯಾಜ್ಯರಾಶಿಯಿಂದ ಮೊದಲೇ ಸಂತ್ರಸ್ತ ರಾಗಿರುವ ಇಲ್ಲಿನ ಮನೆಮಂದಿ, ಮುಂದೆ ಗಲೀಜು ನೀರಿನಿಂದ ಇನ್ನೊಂದು ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಇಲ್ಲಿಂದ ಹರಿಯುವ ತ್ಯಾಜ್ಯ ನೀರು ಮಂದಾರದ ಸುತ್ತಮುತ್ತಲಿನ ಹಲವು ಬಾವಿಗಳಿಗೆ ಸೇರುತ್ತಿದೆ. ಕೆಲವು ಬಾವಿಗಳಿಗೆ ನೇರವಾಗಿ ತ್ಯಾಜ್ಯನೀರು ಹರಿಯುತ್ತಿದ್ದರೆ, ಇನ್ನೂ ಕೆಲವು […]

ಮಾನವೀಯ ನೆಲೆವೀಡು ಪಚ್ಚನಾಡಿ ನಿರಾಶ್ರಿತರ ಕೇಂದ್ರ

Wednesday, June 18th, 2014
Rehabilitation Centre at Pacchanady

ಮಂಗಳೂರು : (ಲೇಖನ, ಬಿ.ಆರ್.ಚಂದ್ರಶೇಕರ ಅಜಾದ್, ವಾರ್ತಾ ಸಹಾಯಕ) ಪ್ರತಿಯೊಬ್ಬರಿಗೂ ಮೂಲಭೂತವಾಗಿ ಆಹಾರ, ವಸ್ತ್ರ ಹಾಗೂ ಇರಲೊಂದು ಸೂರು ಇದು ಅತ್ಯಾವಶ್ಯಕ. ಆದರೆ ಕೆಲವರಿಗೆ ಸ್ವಯಂಕೃತ ಅಪರಾಧವೂ ಎಂಬಂತೆ ಈ ಮೂರು ಮೂಲಭೂತ ಅವಶ್ಕತೆಗಳು ದೊರೆಯದೆ ಮಾನಸಿಕ ಅಸ್ವಸ್ಥರಂತೆ ಬೀದಿಬದಿಯಲ್ಲಿ , ಅಂಗಡಿ ಮುಂಭಾಗ, ದೇವಸ್ಥಾನ, ಸಾರ್ವಜನಿಕ ಪಾರ್ಕುಗಳು, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ದಿನ ದೂಡುತ್ತಾರೆ. ಇವರಿಗೆ ತಮ್ಮದು, ನಮ್ಮವರು ಎಂದು ಹೇಳಿಕೊಳ್ಳಲು ಏನೂ ಇಲ್ಲದವರೂ, ಯಾರು ಇಲ್ಲದವರೂ ಇರುತ್ತಾರೆ. ಇವರ ಜೀವನವೇ ಅಯೋಮಯ ಸ್ಥಿತಿಯಲ್ಲಿರುತ್ತದೆ. […]

ಕಾಯಿಸಿದ ಮೀನು ತಿಂದು ಪಿಯುಸಿ ವಿದ್ಯಾರ್ಥಿನಿ ಸಾವು

Monday, August 8th, 2011
Fish Fry/ ಕಾಯಿಸಿದ ಮೀನು

ಮಂಗಳೂರು : ಮಂಗಳೂರು ಹೊರವಲಯ ಪಚ್ಚನಾಡಿ ದೇವಿ ನಗರದಲ್ಲಿ ಕಾಯಿಸಿದ ಮೀನು ತಿಂದು ಯುವತಿಯೋರ್ವಳು ಅಸ್ವಸ್ಥಳಾಗಿ ಬಳಿಕ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಪಚ್ಚನಾಡಿ ದೇವಿ ನಗರದ ಮಂಜುನಾಥ ಅವರ ಪುತ್ರಿ ಸುಶ್ಮಿತಾ (17) ಸಾವನ್ನಪ್ಪಿದ ಯುವತಿ. ಈಕೆ‌ ವಾಮಂಜೂರಿನ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಶನಿವಾರ ರಾತ್ರಿ ಸುಶ್ಮಿತಾ ಅವರು ಮನೆಯಲ್ಲಿ ರಿಫೈನ್‌ ಆಯಿಲ್‌ನಲ್ಲಿ ಮೀನು ಕಾಯಿಸಿದ್ದರು. ಅದರಲ್ಲಿ ಎರಡು ಮೀನುಗಳನ್ನು ಆಕೆ ತಿಂದಿದ್ದು, ಕೆಲವೇ ಹೊತ್ತಿನಲ್ಲಿ ಆಕೆಗೆ ಸ್ಮೃತಿ ತಪ್ಪಿತ್ತು. ಕೂಡಲೇ ಆಕೆಯನ್ನು ಸಮೀಪದ […]