ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ: ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಮೃತ್ಯು

Wednesday, November 27th, 2019
Shariff

ಮಂಜೇಶ್ವರ : ದ್ವಿಚಕ್ರ ವಾಹನವೊಂದಕ್ಕೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಆರಿಕ್ಕಾಡಿ ಕುನ್ನಿಲ್ ನಿವಾಸಿ ಅಬೂಬಕರ್ ಎಂಬವರ ಪುತ್ರ ಮುಹಮ್ಮದ್ ಶರೀಫ್ (34) ಮೃತಪಟ್ಟವರು. ಮುಹಮ್ಮದ್ ಶರೀಫ್ ಮಂಗಳವಾರ ಬೆಳಗ್ಗೆ ಪತ್ನಿ ಮನೆಯಿಂದ ಸ್ಕೂಟರ್‌ನಲ್ಲಿ ನಾದಿನಿ ಮುನೀರಾ(19) ಎಂಬವರನ್ನು ಕರೆದುಕೊಂಡು ಬಂದ್ಯೋಡಿನತ್ತ ತೆರಳುತ್ತಿದ್ದ ವೇಳೆ ಅಡ್ಕ ಒಳಯಂ ಬಳಿ ಪಿಕಪ್ ವಾಹನ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ […]