ವಿವಾದಿತ ಮಳಲಿ ದರ್ಗಾದಲ್ಲಿ ದೇಗುಲದ ಕುರುಹುಗಳು, ಕೇರಳ ಮೂಲದ ಜ್ಯೋತಿಷಿಗಳಿಂದ ತಾಂಬೂಲ ಪ್ರಶ್ನೆ
Tuesday, May 24th, 2022
ಮಂಗಳೂರು : ಮಂಗಳೂರಿನ ವಿವಾದಿತ ಮಳಲಿ ದರ್ಗಾದಲ್ಲಿ ನಾಳೆ ತಾಂಬೂಲ ಪ್ರಶ್ನೆಗೆ ದಿನ ನಿಗದಿಯಾಗಿದೆ. ಮಳಲಿ ಮಸೀದಿಯಲ್ಲಿ ದೇಗುಲದ ಶೈಲಿ ಪತ್ತೆ ವಿಚಾರ ನ್ಯಾಯಾಲಯದಲ್ಲಿ ಇದ್ದು, ಇದರ ಮಧ್ಯೆ ವಿಹೆಚ್ಪಿ ಮತ್ತು ಬಜರಂಗದಳ ಜ್ಯೋತಿಷ್ಯದಲ್ಲಿ ಅತೀ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲ ಇಡಲು ನಿರ್ಧರಿಸಿದ್ದು, ಇದರ ಪೂರ್ವಭಾವಿಯಾಗಿ ಮೇ 25 ಬುಧವಾರ ಬೆಳಗ್ಗೆ ತಾಂಬೂಲ ಪ್ರಶ್ನೆ ನಡೆಯಲಿದೆ. ತಾಂಬೂಲ ಪ್ರಶ್ನೆ ಹಿನ್ನಲೆಯಲ್ಲಿ ನಾಳೆ ಮಳಲಿ ಭಾಗದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಳ್ಳಲಿದ್ದಾರೆ. ಸದ್ಯ ಪ್ರಶ್ನೆಯಲ್ಲಿ ಯಾವ ಯಾವ ವಿಚಾರ […]