Blog Archive

ಆಂಬ್ಯುಲೆನ್ಸ್ ಮೂಲಕ ಮೈಸೂರಿಗೆ ಪ್ರಯಾಣ; 7 ಮಂದಿಯನ್ನು ಬಂಧಿಸಿದ ಪೊಲೀಸರು

Sunday, April 19th, 2020
Puttur

ಮಂಗಳೂರು: ಆಂಬ್ಯುಲೆನ್ಸ್ ಮೂಲಕ ಪುತ್ತೂರಿನಿಂದ ಮೈಸೂರಿಗೆ ಹೊರಟ 7 ಮಂದಿಯನ್ನು ಪುತ್ತೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪುತ್ತೂರಿನ ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್, ಸಲೀಮುದ್ದೀನ್ ಯಾನೆ ಪಾಪು, ಅಬ್ದುಲ್ ರಜಾಕ್, ರಶೀದ್, ಸಂಶುದ್ದೀನ್, ಮಹಮ್ಮದ್ ಇರ್ಷಾದ್ ಬಂಧಿತರು. ಲಾಕ್‌ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಪುತ್ತೂರಿನ ಏಳು ಮಂದಿ ಆಂಬ್ಯುಲೆನ್ಸ್ ನಲ್ಲಿ ರಾತ್ರಿ ಮೈಸೂರು ಕಡೆ ಹೊರಟಿದ್ದರು. ಕೊಡಗು ಜಿಲ್ಲೆಯ ಕುಶಾಲನಗರ ಸರಹದ್ದಿನ ಕೊಪ್ಪದಲ್ಲಿ ಇವರನ್ನು ತಡೆದ ಪೊಲೀಸರು ತಪಾಸಣೆ ಮಾಡಿದಾಗ ಯಾವುದೇ ತುರ್ತು ಸೇವೆಗೆ ಹೋಗದೇ ಲಾಕ್‌ಡೌನ್‌ ನಿಯಮದಿಂದ […]

ಕರೋನ : ಸೆಕ್ಷನ್ 144 ಆದೇಶ ಉಲ್ಲಂಘನೆ, ಏಳು ಮಂದಿಯನ್ನು ಬಂಧಿಸಿದ ಪೊಲೀಸರು

Tuesday, March 24th, 2020
corona arrest

ಮಂಗಳೂರು : ಮಂಗಳವಾರ ಮಧ್ಯಾಹ್ನವರೆಗೆ ದಿನಸಿ ಸಾಮಾನುಗಳ ಖರೀದಿಗೆ ಅವಕಾಶ ನೀಡಿದ್ದರು. 12 ಗಂಟೆ ನಂತರ ತುರ್ತು ಸೇವೆ ಹೊರತು ಪಡೆಸಿ ವಾಹನ ಸಂಚಾರ ನಿಷೇದದ ನಡುವೆ ಏಳು ಮಂದಿಯನ್ನು ಬಂಧಿಸಲಾಗಿದೆ. ಸೆಕ್ಷನ್ 144 ಆದೇಶ ಉಲ್ಲಂಘನೆ ಹಿನ್ನಲೆಯಲ್ಲಿ ಕಾನೂನು ನಿಯಮ ಮೀರಿದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಜೇಮ್ಸ್(45), ವಿಮೇಶ್ (30), ಅಮೀರಾ ಹಾಜು ಅನ್ಸಾರಿ, ಬಲರಾಮ್ ಚೌದರಿ (32), ರಾಹುಲ್ ಪಾಂಡ್ಯ (18) ಎಂಬವರನ್ನು ಕೇಂದ್ರ ಉಪ ವಿಭಾಗ ಹಾಗೂ ಸಿದ್ದಿಕ್ ಹಾಗೂ ವಿನಯ್ […]

ಬೆಂಗಳೂರು : ಮಾದಕ ವಸ್ತುಗಳ ಮಾರಾಟ ದಂಧೆ ಮೇಲೆ ಮುಗಿಬಿದ್ದ ಪೊಲೀಸರು

Thursday, March 19th, 2020
drugs

ಬೆಂಗಳೂರು : ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ಹಾವಳಿ ತೀವ್ರಗೊಂಡಿದೆ. ಇದರ ವಿರುದ್ಧ ಸಮರ ಸಾರಿರುವ ಪೊಲೀಸರು, ನಗರದಾದ್ಯಂತ 21 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ನೀಡಿದ್ದ ಕಟ್ಟುನಿಟ್ಟಿನ ಆದೇಶ ಮೇರೆಗೆ ನಗರದಾದ್ಯಂತ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾರ್ಚ್‌ 09 ರಿಂದ ಮಾರ್ಚ್‌ 17ರವರೆಗೆ ಸತತವಾಗಿ ಕಾರ್ಯಾಚರಣೆ ಕೈಗೊಂಡು, ಮಾದಕವಸ್ತು ಸೇವನೆ […]

ಬೆಂಗಳೂರು : ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

Wednesday, March 11th, 2020
natorius

ಬೆಂಗಳೂರು : ಇಂದು ನಗರದಲ್ಲಿ ನಟೋರಿಯಸ್ ರೌಡಿ ಶೀಟರ್ ಸಿದ್ದ ಅಲಿಯಾಸ್ ಸಿದ್ದರಾಜು ಅಲಿಯಾಸ್ ಬಗಲಗುಂಟೆ ಸಿದ್ದನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಇಂದು ಮುಂಜಾನೆ ಬ್ಯಾಡರಹಳ್ಳಿಯ ಆಶ್ರಯ ಬಡಾವಣೆಯಲ್ಲಿ ಸಿದ್ದ ಇರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಈ ವೇಳೆ ಪೊಲೀಸ್ ಪೇದೆ ಬ್ಯಾಡರಳ್ಳಿ ಹನುಮಂತರಾಜು ಮೇಲೆ ಹಲ್ಲೆ ನಡೆಸಿದ್ದ. ಆತ್ಮ ರಕ್ಷಣೆಗಾಗಿ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್, ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸುಮಾರು 15 ಕೇಸ್ಗಳಲ್ಲಿ ಸಿದ್ದ ಪೊಲೀಸರಿಗೆ […]

ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡ ಬಂಧನ

Saturday, March 7th, 2020
vanaya-guruji

ಬೆಂಗಳೂರು : ಹಳೆ ವಿಡಿಯೋ ಇಟ್ಟುಕೊಂಡು ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಸಂತೋಷ್ ಬಂಧಿತರು. ಈ ಐವರು ವಿನಯ್ ಗುರೂಜಿಯ ಹಳೆ ವಿಡಿಯೋ ಇಟ್ಟುಕೊಂಡು, ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ವಿಡಿಯೋ ಎಡಿಟ್ ಮಾಡಿ, ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದರು. ನಂತರ 30 ಲಕ್ಷ ರೂ. ನೀಡುವಂತೆ ವಿನಯ್ ಗುರೂಜಿ ಬಳಿ ಬೇಡಿಕೆ ಇಟ್ಟಿದ್ದರು. […]

ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು

Monday, February 24th, 2020
ravi

ಬೆಂಗಳೂರು : ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾನುವಾರ ತಡರಾತ್ರಿ ಕರ್ನಾಟಕ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಸದ್ಯ, ಮಡಿವಾಳದ ತನಿಖಾ ಕೇಂದ್ರದಲ್ಲಿ ಬಿಗಿ ಭದ್ರತೆಯಲ್ಲಿ ಆತನನ್ನು ಇಡಲಾಗಿದ್ದು, ಇಂದೇ ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. 2018ರಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ನಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಈತನನ್ನು ತಮ್ಮ ಸುಪರ್ದಿಗೆ ಪಡೆಯಲು ರಾಜ್ಯ ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ, ಕಾನೂನು ತೊಡಕುಗಳಿಂದ ಹಸ್ತಾಂತರ ವಿಳಂಬವಾಗಿತ್ತು. ಈಗ ಈ ಕಾನೂನು ತೊಡಕು ನಿವಾರಣೆ ಆಗಿದ್ದು, […]

ಪಾಕ್ ಪರ ಘೋಷಣೆ : ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತೆ ಪೊಲೀಸ್ ವಶಕ್ಕೆ

Monday, February 17th, 2020
kashmiri

ಹುಬ್ಬಳ್ಳಿ : ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರಸ್ತೆ ಪೊಲೀಸರು ಸೋಮವಾರ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಾನುವಾರ ತಡರಾತ್ರಿ ಮತ್ತೆ ಬಂಧಿಸಿದ್ದು, ಸೋಮವಾರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಇಲ್ಲಿನ 3ನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶೆ ಪುಷ್ಪಾ ಅವರು ಮೂವರು ವಿದ್ಯಾರ್ಥಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ವರದಿ ತಿಳಿಸಿದೆ. ಹುಬ್ಬಳ್ಳಿ ತಾಲೂಕು ಕೊಟಗುಣಸಿಯಲ್ಲಿರುವ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಪುಲ್ವಾಮಾ ದಾಳಿಯ ಕರಾಳ ದಿನಾಚರಣೆ ಸಂದರ್ಭದಲ್ಲೂ […]

ಹೊಸಪೇಟೆ ಬಳಿ ಅಪಘಾತ ಪ್ರಕರಣ : ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ; ಡಿಸಿಎಂ ಅಶ್ವತ್ಥ್ ನಾರಾಯಣ್

Friday, February 14th, 2020
Ashwath-Narayan

ಶಿವಮೊಗ್ಗ : ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಹೀಗಾಗಿ ಹೊಸಪೇಟೆ ಬಳಿಯ ಅಪಘಾತ ಪ್ರಕರಣದ ಆರೋಪಿಗಳು ಯಾರೇ ಆಗಿರಲಿ ಅವರಿಗೆ ಸೂಕ್ತ ಶಿಕ್ಷೆ ಖಂಡಿತ ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಫೆ.10 ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿ ಒಂದು ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಸಚಿನ್ ಮತ್ತು ರವಿನಾಯ್ಕ್ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದದ್ದು ಸಚಿವ ಆರ್. ಅಶೋಕ್ ಅವರ ಮಗ ಶರತ್. ಹೀಗಾಗಿ ಪೊಲೀಸರು […]

ಮಂಗಳೂರು : ನಿಲ್ಲಿಸಿದ್ದ ಕಾರಿನ ಗಾಜು ಒಡೆದು 15 ಲಕ್ಷ ರೂ. ದರೋಡೆ

Friday, December 13th, 2019
chilimbi

ಮಂಗಳೂರು : ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು ಕಾರಿನೊಳಗಿದ್ದ 15 ಲಕ್ಷ ರೂ. ದರೋಡೆಗೈದ ಘಟನೆ ನಗರದ ಚಿಲಂಬಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಹಣದ ವಾರಸುದಾರರು ಕಾರನ್ನು ಚಿಲಿಂಬಿಯಲ್ಲಿ ಪಾರ್ಕ್ ಮಾಡಿ ಡೋರ್ ಲಾಕ್ ಮಾಡಿ ಸೌತ್ ಇಂಡಿಯಾ ಬ್ಯಾಂಕಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಕಾರಿನ ಹಿಂಬದಿ ಸೀಟಿನ ಬಾಗಿಲಿನ ಗಾಜು ಪುಡಿಗೈದು ಒಳಗಿದ್ದ 15 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದರೆನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.    

ಶಬರಿಮಲೆ ನಿಯಂತ್ರಣಕ್ಕೆ 10 ಸಾವಿರ ಪೊಲೀಸರು

Wednesday, November 21st, 2018
Nalinkumar

ಮಂಗಳೂರು : ಪಿಣರಾಯಿ ವಿಜಯನ್ ಸರ್ಕಾರವು ಶಬರಿಮಲೆಯನ್ನು ನಿಯಂತ್ರಿಸಲು 10 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಮಲೆಯಲ್ಲಿ ಭಕ್ತರು ಆರು ಗಂಟೆ ಮಾತ್ರ ಇರಬೇಕೆಂದು ನಿರ್ಬಂಧ ವಿಧಿಸಲಾಗಿದೆ. ಘೋಷಣೆ ಕೂಗಿದರೆ ಬಂಧಿಸುತ್ತಾರೆ.  ಗುಂಪುಗೂಡಿದರೂ ಸೆರೆ ಹಿಡಿಯುತ್ತಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆರೋಪ ಮಾಡಿದರು. ಕೇರಳದ ಎಡಪಕ್ಷಗಳ ಸರ್ಕಾರ ಶಬರಿಮಲೆಯನ್ನು ಮತ್ತೊಂದು ಜಲಿಯನ್ ವಾಲಾಬಾಗ್ ಮಾಡಲು ಹೊರಟಿದೆ ಎಂದು  ಅವರು ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಣರಾಯಿ ವಿಜಯನ್  ಸರ್ಕಾರವು ಶಬರಿಮಲೆಯನ್ನು ಹಿಂದೂಗಳ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಅವರು […]