ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ವಜ್ರದ ಆಸೆಗೆ 1.35 ಲಕ್ಷ ರೂ. ಕಳಕೊಂಡ ಮಂಗಳೂರಿನ ವ್ಯಕ್ತಿ

Wednesday, January 27th, 2021
daimond

ಮಂಗಳೂರು : ವ್ಯಕ್ತಿ 35 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು 1.35 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಜ.3ರಂದು ರೆನಾಲ್ಟ್ ಫ್ರಿನ್ಸ್ ಕ್ರಿಸ್ಟಫರ್ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಚಾಟಿಂಗ್ ನಡೆಸುತ್ತಿದ್ದು, ಉಡುಗೊರೆ ಕಳುಹಿಸುವುದಾಗಿ ಹೇಳಿದ್ದರು. ಜ.18ರಂದು ಮಹಿಳೆ ಕರೆ ಮಾಡಿ, ದಿಲ್ಲಿ ಕಸ್ಟಮ್ಸ್ ಆಫೀಸರ್ ಎಂದು ಹೇಳಿ ಏರ್‌ಪೋರ್ಟ್‌ಗೆ ಪಾರ್ಸೆಲ್ ಬಂದಿದ್ದು, ಅದಕ್ಕೆ ಡೆಲಿವರಿ ಚಾರ್ಜ್ ಎಂದು ಹೇಳಿ ಅವರು ಕಳುಹಿಸಿದ […]

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಗರ್ಭಪಾತ ಮಾಡಿಸಿದ ಯುವಕ

Tuesday, January 19th, 2021
Rakshith

ಸುಬ್ರಹ್ಮಣ್ಯ: ಫೇಸ್‌ಬುಕ್ ಮೂಲಕ ಪರಿಚಯವಾಗಿ ಯುವತಿಯನ್ನು ಮದುವೆಯಾಗುವುದಾಗಿ  ನಂಬಿಸಿ  ದೈಹಿಕ ಸಂಪರ್ಕ ಬೆಳೆಸಿ ಗರ್ಭಪಾತ ಮಾಡಿಸಿ ದ್ದಾನೆಂದು ಯುವತಿ ದೂರು ನೀಡಿದ್ದಾಳೆ. ಕಡಬ ತಾಲೂಕಿನ ಸುಬ್ರಹ್ಮಣ್ಯದ ರಕ್ಷಿತ್ ಎಂಬಾತ  ಮದುವೆಯಾಗುವ ಭರವಸೆ ನೀಡಿ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆಕೆ ಹೇಳಿದ್ದು, ಗರ್ಭಪಾತ ಸಹ ಮಾಡಿಸಿದ್ದಾನೆ ಎಂದು ತಿಳಿಸಿದ್ದಾನೆ. ಆದರೆ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾನೆಂದು ತುಮಕೂರಿನ ವಸಂತಾ ಎಂಬ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿ ನೀಡಿರುವ ದೂರಿನ ಆಧಾರದ ಮೇರೆಗೆ ಕ್ರಮ ಕೈಗೊಂಡ […]

ಎರಡು ಐಷಾರಾಮಿ ಕಾರುಗಳು , ಎರಡು ಸ್ಕೂಟರ್‌ಗಳ ಜೊತೆಗೆ 25 ಲಕ್ಷ ರೂ. ಕೊಟ್ಟರು ಗಂಡನನ್ನು ದೂರವಿರಿಸಿದ ಮನೆಯವರು

Wednesday, November 25th, 2020
Ayesha

ಮಂಗಳೂರು : ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕಿಯನ್ನು ಮದುವೆಯಾದ ಮಹಿಳೆಯ ಗಂಡನನ್ನು ಆತನ ಮನೆಯವರು ಎರಡು ವರ್ಷದ ಬಳಿಕ ಆಕೆಗೆ ಸಿಗದಂತೆ ನಿಗೂಢವಾಗಿ ಅಡಗಿಸಿಡಲಾಗಿದೆ ಎಂದು ಆರೋಪಿಸಿದ್ದಾರೆ. ಕೇರಳದ ಕಣ್ಣೂರು ಮೂಲದ ಶಾಂತಿ ಜೂಬಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದ ಇಬ್ರಾಹಿಂ ಖಲೀಲ್ ಕಟ್ಟೇಕರ್ ಎಂಬವರು ಫೇಸ್‌ಬುಕ್ ಮೂಲಕ ಪರಿಚಯವಾಗಿ ಜುಲೈ 12, 2017 ಮದುವೆಯಾಗುತ್ತಾರೆ. ಮದುವೆಯಾದ ಬಳಿಕ ಶಾಂತಿ ಜೂಬಿ ಆಯಿಷಾ ಇಬ್ರಾಹಿಂ ಖಲೀಲ್ ಕಟ್ಟೇಕರ್ ಎಂದು ಹೆಸರು ಬದಲಿಸಿಕೊಂಡು ದಂಪತಿಗಳು ಬೆಂಗಳೂರು, ಮೈಸೂರು […]

ಅಯೋಧ್ಯೆ ತೀರ್ಪು ಹಿನ್ನೆಲೆ : ಸಾಮಾಜಿಕ‌ ಜಾಲತಾಣದ ಮೇಲೆ ತೀವ್ರ ನಿಗಾ

Saturday, November 9th, 2019
social-media

ಬೆಂಗಳೂರು : ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡದಂತೆ ಸೂಚನೆ ನೀಡಿದ್ದಾರೆ. ಪರ-ವಿರೋಧ ತೀರ್ಪು ಬಂದರೆ ವಿಜಯೋತ್ಸವ ಆಚರಿಸುವುದಾಗಲೀ ಅಥವಾ ಘೋಷಣೆ ಕೂಗುವುದನ್ನಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‍ಗಳನ್ನು ಹಾಕಬೇಡಿ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳ […]

ಅಂಜನಾಳಿಗೆ ಮನೆಯವರು ಬೇರೆ ಹುಡುಗನನ್ನು ನಿಶ್ಚಯಿಸಿದ್ದು ಕೊಲೆಗೆ ಕಾರಣ

Monday, June 10th, 2019
Sandeep Rathod

ಮಂಗಳೂರು:  2018 ಜುಲೈ ತಿಂಗಳಲ್ಲಿ ಫೇಸ್‌ಬುಕ್‌ ಮೂಲಕ ಪರಿಚಯವಾದ ಅಂಜನಾ ಮತ್ತು ಸಂದೀಪ್‌  ಗೆಳೆತನ ದಿನ ಕಳೆದಂತೆ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆತ ಹೇಳಿದಂತೆ ಮಂಗಳೂರಿನಲ್ಲಿ ಆಗಾಗ ಬಂದು ಭೇಟಿಯಾಗುತ್ತಿದ್ದೆವು. ಮದುವೆಯಾಗಲು ಇಚ್ಛಿಸಿದ್ದೆವು. ಆದರೆ ಆಕೆ ಮನೆಯಲ್ಲಿ ಬೇರೆ ಮದುವೆ ಮಾಡಲು ಗಂಡು ಹುಡುಕಿದ್ದಾರೆ. ನನ್ನನ್ನು ಮರೆತು ಬಿಡು ಎಂದು ಆಕೆ ಹೇಳಿದ್ದಾಳೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಗಿದೆ. ಸಿಟ್ಟಿನ ಭರದಲ್ಲಿ ಆಕಸ್ಮಿಕವಾಗಿ ಆಕೆಯ ಕೊಲೆ ನಡೆದು ಹೋಗಿದೆ ಎಂದು ಸ್ಥಳ ಮಹಜರು ನಡೆಸಿದಾಗ ಆತ […]

ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಮೇಲೆ ಚುನಾವಣಾ ಆಯೋಗ ಕಣ್ಣು

Monday, March 11th, 2019
DC-shenthil

ಮಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳಲ್ಲಿ ಅಭ್ಯರ್ಥಿ ಪರ ಪೇಯ್ಡ್ ನ್ಯೂಸ್ ಸೇರಿದಂತೆ ಪ್ರಚಾರದ ಮೇಲೆ ಈಗಾಗಲೇ ನಿಗಾ ಇರಿಸುತ್ತಿದ್ದ ಚುನಾವಣಾ ಆಯೋಗ ಇದೀಗ ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡುವ ಸೂಚನೆ ನೀಡಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಶೇರ್‌ಚಾಟ್ ಮೊದಲಾದವುಗಳಲ್ಲಿ ಆನ್‌ಲೈನ್‌ನಲ್ಲಿ ತಮ್ಮ ಕೈಯ್ಯಲ್ಲಿರುವ ಸ್ಮಾರ್ಟ್ ಫೋನ್‌ಗಳ ಮೂಲಕ ಕ್ಷಿಪ್ರಗತಿಯಲ್ಲಿ ಸಂದೇಶಗಳನ್ನು ಹಂಚಿಕೊಳ್ಳಬಹುದು. ಈಗ ಇವುಗಳ ಮೂಲಕ ಮಾಡುವ ಪ್ರಚಾರವೂ ಮಾಧ್ಯಮ (ದೃಶ್ಯ ಮತ್ತು ಪತ್ರಿಕೆ, ವೆಬ್‌ಸೈಟ್) ಗಳಲ್ಲಿ ಪ್ರಸಾರವಾಗುವ ಪ್ರಚಾರ ಜಾಹೀರಾತಿನ ವ್ಯಾಪ್ತಿಗೆ ಒಳಪಡುವುದಾಗಿ ಆಯೋಗ ಸ್ಪಷ್ಟಪಡಿಸಿದೆ. […]

ಅನಂತ್‌ಕುಮಾರ್ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಹಾಕಿದ್ದ ಫೇಸ್‌ಬುಕ್ ಪೇಜ್‌ ವಿರುದ್ಧ ಪೊಲೀಸರಿಗೆ ದೂರು!

Tuesday, November 13th, 2018
ananth-kumar

ಮಂಗಳೂರು: ಇಂದು ನಿಧನರಾಗಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಅವರ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಹಾಕಿದ್ದ ಫೇಸ್‌ಬುಕ್ ಪೇಜ್‌ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ‘ಮಂಗಳೂರು ಮುಸ್ಲಿಮ್ಸ್‌’ ಎನ್ನುವ ಫೇಸ್‌ಬುಕ್ ಪೇಜ್‌, ಅನಂತ್‌ ಕುಮಾರ್ ಅವರ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಅನ್ನು ತನ್ನ ಖಾತೆಯಲ್ಲಿ ಪ್ರಕಟಿಸಿತ್ತು. ಇದು ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ದಕ್ಷಿಣದ ಪಾಂಡೇಶ್ವರ ಠಾಣೆ ಪೊಲೀಸರು ‘ಮಂಗಳೂರು ಮುಸ್ಲಿಮ್ಸ್‌’ ಫೇಸ್‌ಬುಕ್ ಪೇಜ್ ವಿರುದ್ಧ ಸ್ವಯಂ ಪ್ರೇರಿತ […]

ಅಶ್ರಫ್ ಕಲಾಯಿ ಹತ್ಯೆ ಪ್ರಕರಣ: ಜಾಮೀನಿನ ಮೇಲೆ ಹೊರ ಬಂದ ಆರೋಪಿಗೆ ಫೇಸ್​ಬುಕ್​ನಲ್ಲಿ ಜೀವ ಬೆದರಿಕೆ

Saturday, November 3rd, 2018
ashraf

ಮಂಗಳೂರು: ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಕಾರಣವಾದ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಾಮೀನಿನ ಮೇಲೆ ಹೊರ ಬಂದ ಹಿನ್ನೆಲೆ ಆತನಿಗೆ ಫೇಸ್ಬುಕ್ ಪೇಜ್ವೊಂದರಲ್ಲಿ ಜೀವ ಬೆದರಿಕೆ ಒಡ್ಡಲಾಗಿದೆ. ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಭರತ್ ಕುಮ್ಡೇಲ್ ಪ್ರಮುಖ ಆರೋಪಿಯಾಗಿದ್ದ. ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾದ ನಂತರ ಅಶ್ರಫ್ ಕಲಾಯಿ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಬಜರಂಗದಳದ ಜಿಲ್ಲಾ ಮುಖಂಡ‌ ಭರತ್ ‌ಕುಮ್ಡೇಲನ್ನು ಬಂಧಿಸಿದ್ದರು. ಭರತ್ […]

ಫೇಸ್ಬುಕ್​ನಲ್ಲಿ ಲೈವ್ ಆಗಿ ಶೌಚಾಲಯದ ಮುಂದೆ ಅಂತ್ಯಸಂಸ್ಕಾರ ನಡೆಸಿ ಪ್ರತಿಭಟನೆ

Saturday, July 14th, 2018
mangaluru

ಮಂಗಳೂರು: ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಇನ್ನೂ ಉದ್ಘಾಟನೆ ಮಾಡಿಲ್ಲವೆಂದು ಆರೋಪಿಸಿರುವ ಕೆಲವರು, ಅಧಿಕಾರಿಗಳ ಅಣಕು ಅಂತಿಮ ಸಂಸ್ಕಾರ ಮಾಡುವ ಮೂಲಕ ಪ್ರತಿಭಟಿಸಿದರು. ಪಿವಿಎಸ್ ಬಳಿಯಿರುವ ಬಿಜೆಪಿ ಕಚೇರಿಯ ಮುಂದೆ ಶೌಚಾಲಯದ ಕಾಮಗಾರಿ ಪೂರ್ಣಗೊಂಡಿದ್ದರೂ, ಇನ್ನೂ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿಲ್ಲ ಎಂದು ಆರೋಪಿಸಿದರು. ಸೌರಜ್ ಎಂಬುವರು ತಮ್ಮ ಫೇಸ್ಬುಕ್ನಲ್ಲಿ ಲೈವ್ ಆಗಿ ಶೌಚಾಲಯದ ಮುಂದೆ ಅಂತ್ಯಸಂಸ್ಕಾರ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶೌಚಾಲಯ […]

ಫೇಸ್‌ಬುಕ್‌ ನಲ್ಲಿ ಹಿಂದೂ ದೇವರುಗಳನ್ನು ಕೀಳುಮಟ್ಟದಲ್ಲಿ ನಿಂದಿಸಿ ಪೋಸ್ಟ್

Monday, June 18th, 2018
bhashir adyar

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರು, ದೈವಗಳನ್ನು ಅತ್ಯಂತ ಕೀಳುಭಾಷೆ ಬಳಸಿ ನಿಂದಿಸಿ , ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಲಾಗಿದೆ. ಬಷೀರ್ ಅಡ್ಯಾರ್ ಬಷೀರ್ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಿದ ಫೋಟೋ ಗಳು ವೈರಲ್ ಆಗಿದ್ದು ಅದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ದೇವರುಗಳನ್ನು ಮಾತ್ರವಲ್ಲದೇ ಛತ್ರಪತಿ ಶಿವಾಜಿ ಮಹಾರಾಜ್ , ಪ್ರಧಾನಿ‌ ನರೇಂದ್ರ ಮೋದಿ ಫೊಟೊ ಗಳನ್ನು ವಿರೂಪಗೊಳಿಸಿ ಅವಹೇಳನಕಾರಿಯಾದ ರೀತಿಯಲ್ಲಿ ಪೋಸ್ಟ ಮಾಡಲಾಗಿದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಷೀರ್ ಹೆಸರಿನ ನ ಈ […]